ಹದಗೆಟ್ಟ ರಸ್ತೆಯಿಂದ ಹೈರಾಣಾದ ಜನತೆ
ಬೈಲಹೊಂಗಲ,ಆ.೧: ರಸ್ತೆಯಲ್ಲಿ ಗುಂಡಿಗಳೋ..? ಅಥವಾ ಗುಂಡಿಗಳ ಮದ್ಯದಲ್ಲಿ ರಸ್ತೆಯೋ..?
ಎಂಬ ಪ್ರಶ್ನೆ ಇಲ್ಲಿ ಸಂಚಾರಿಸುವ ಪ್ರಯಾಣಿಕರನ್ನು ಕಾಡದೆ ಇರಲಾರದು.
ತಾಲೂಕಿನ ಲೋಕೋಪಯೋಗಿ ಇಲಾಖೆಗೆ ಒಳಪಡುವ ಬೈಲಹೊಂಗಲ,ಬೆಳಗಾವಿ ಹಾಗೂ ಜತ್ತ ಜಾ೦ಬೋಟಿ ರಾಜ್ಯ ಹೆದ್ದಾರಿಗೆ ಸಂಪರ್ಕಿಸುವ ನೇಸರಗಿ-ಬೈಲವಾಡ ಮಾರ್ಗ ಮದ್ಯದ ಸುಮಾರು ೧೧ ಕಿ. ಮೀ.ನಷ್ಟು ರಸ್ತೆ ಸಂಪೂರ್ಣ ಹದಗೆಟ್ಟಿದೆ.
ರಸ್ತೆಯ ಉದ್ದಗಲಕ್ಕೂ ಆಳುದ್ದ ಬಿದ್ದಿರುವ ಗುಂಡಿಗಳು ಪ್ರಯಾಣಿಕರ ಆತಂಕಕ್ಕೆ ಮನೆಮಾಡಿದೆ.ನೇಸರಗಿ, ಬೈಲವಾಡ, ನಾಗನೂರ ಗ್ರಾಮಗಳ ಜನರು ತಮ್ಮ ದುಡಿಮೆಗೆ, ಶಿಕ್ಷಣಕ್ಕೆ ಹಾಗೂ ತಮ್ಮ ಅವಶ್ಯಕ ವಸ್ತುಗಳ ಖರೀದಿಗೆ ಬೈಲಹೊಂಗಲ ಪಟ್ಟಣವನ್ನೇ ಅವಲಂಬಿಸಿರುವುದರಿAದ ಶಾಲಾ ಮಕ್ಕಳ,ವೃದ್ಧರು,ಮಹಿಳೆಯರು,ವಾಹನ ಚಾಲಕರು ಹಿಡಿಶಾಪ ಹಾಕುವಂತಾಗಿದೆ.
ಅರ್ಧದಷ್ಟು ಭಾಗ ಬೈಲಹೊಂಗಲ ಹಾಗೂ ಇನ್ನುಳಿದ ಅರ್ಧದಷ್ಟು ಭಾಗ ಕಿತ್ತೂರು ಮತಕ್ಷೇತ್ರಕ್ಕೆ ಒಳಪಡುವುದರಿಂದ ರಸ್ತೆ ಸುಧಾರಣೆ ಮರೀಚಿಕೆಯಾಗಿದೆ ಸಾರ್ವಜನಿಕರು ಆಕ್ರೋಶ ಹೊರ ಹಾಕುತ್ತಿದ್ದಾರೆ.
ಮಳೆಗಾಲ ಪ್ರಾರಂಭವಾಗಿರುವ ಗುಂಡಿಯಲ್ಲಿ ದ್ವಿಚಕ್ರ ವಾಹನಗಳ ಸವಾರರಿಗೆ ಸಂಚಾರ ಸವಾಲಾಗಿದ್ದು, ಈಗಾಗಲೇ ಸಾಕಷ್ಟು ಪ್ರಯಾಣಿಕರು ಸಣ್ಣಪುಟ್ಟ ಅಪಘಾತಕ್ಕೂ ಒಳಗಾಗಿದ್ದಾರೆ. ಮತ್ತಷ್ಟು ಅಪಘಾತಗಳಾಗುವ ಪೂರ್ವದಲ್ಲಿಯೇ ರಸ್ತೆ ದುರಸ್ತಿಯಾಗಬೇಕೆಂಬುದು ಪ್ರಯಾಣಿಕರ ಆಗ್ರಹ.