ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಸ್ಪರ್ಧೆ
ಬಾಗಲಕೋಟೆ,ಆ೧: ಹಿಂದೂಸ್ತಾನಿ ಶಾಸ್ತಿçÃಯ ಸಂಗೀತ ಕ್ಷೇತ್ರಕ್ಕೆ ಹಲವಾರು ನಕ್ಷತ್ರಗಳನ್ನು ನೀಡಿದ ಹೆಮ್ಮೆ ಬಾಗಲಕೋಟೆ ಜಿಲ್ಲೆಗೆ ಇದೆ ಎಂದು ಚರಂತಿಮಠದ ಪ್ರಭು ಸ್ವಾಮಿಗಳು ಹೇಳಿದರು.
ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಸಮಿತಿ ಹಾಗೂ ಸಂಗೀತ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಸ್ಪರ್ಧೆ ಕಾರ್ಯಕ್ರಮವನ್ನು ವೀಣೆಯನ್ನು ನುಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ಅವರು ಡಾ.ಮಲ್ಲಿಕಾರ್ಜುನ ಮನ್ಸೂರ ಅವರು ಸಂಗೀತ ಕ್ಷೇತ್ರಕ್ಕೆ ಹೋಗಿದ್ದು ಬಾಗಲಕೋಟೆಯ ರಂಗಭೂಮಿಯಿAದ, ಗಾನಯೋಗಿ ಪಂಚಾಕ್ಷರಿ ಗವಾಯಿಗಳಿಗೆ “ಗವಾಯಿ” ಎಂದು ಬಿರುದು ನೀಡಿದ್ದು ಇದೇ ಬಾಗಲಕೋಟೆ, ಅಮೀರಬಾಯಿ ಕರ್ನಾಟಕಿ ಹಾಗೂ ಘೋರಬಾಯಿ ಕರ್ನಾಟಕಿ, ಪ್ಯಾರಾಭಾಯಿ ಬೀಳಗಿ, ಸಗುಣಾಬಾಯಿ ಚಂದಾವರಕರ, ಬೇವೂರ ಬಾದಶಾ, ಉತ್ತರ ಕರ್ನಾಟಕ್ಕೆ ಸೀತಾರವಾದನವನ್ನು ಪರಿಚಯಿಸಿದವರಲ್ಲಿ ಮುರನಾಳ ಮಳೆರಾಜೇಂದ್ರಸ್ವಾಮಿ ಮಠ ಗಂಗಾಧರಸ್ವಾಮಿಗಳು, ಸೇರಿದಂತೆ ಹಿಂದೂಸ್ತಾನಿ ಸಂಗೀತ ಕ್ಷೇತ್ರಕ್ಕೆ ನೂರಾರು ಕಲಾವಿದರನ್ನು ಕೊಡುಗೆಯಾಗಿ ಕೊಟ್ಟಿರುವ ಹೆಮ್ಮೆ ಬಾಗಲಕೋಟೆ ಜಿಲ್ಲಿಗೆ ಇದೆ, ಜೋತೆಗೆ ಬಸವೇಶ್ವರ ಕಲಾ ಮಹಾವಿದ್ಯಾಲಯ ಸಂಗೀತ ವಿಭಾಗ ರಾಜ್ಯ ಹಾಗೂ ರಾಷ್ಟçಕ್ಕೆ ಅನೇಕ ಕಲಾವಿದರನ್ನು ಪರಿಚಯಿಸಿದೆ, ಸಂಗೀತ ಎಲ್ಲರ ಮನಸ್ಸುಗಳನ್ನು ಒಂದಡೆ Pಸೇಳೆಯುವ ಶಕ್ತಿ ಇದ್ದು, ಮನ ತಣಿಸಿ ಅನುರಂಜಿಸುವ ಶಕ್ತಿ ಸಂಗೀತಕ್ಕೆ ಇದೆ, ಸಂಗೀತ ಕಲಿಕೆಗೆ ಅಂತ್ಯವಿಲ್ಲಾ ಸಂಗೀತ ಜನರ ಜೀವನವನ್ನು ಬೆಳಗಬಲ್ಲದು ಎಂದರು.
ಬಿವಿವಿ ಸಂಘದ ಮುಖ್ಯಸಲಹೆಗಾರರಾದ ಡಾ. ಮೀನಾ ಚಂದಾವರಕರ ಮಾತನಾಡಿದ ಭಾರತದಲ್ಲಿನ ಸಂಗೀತ, ನೃತ್ಯ, ಸಾಹಿತ್ಯ, ಕಲೆ,ಸಮೃದ್ಧಿ ಮತ್ತೆಲ್ಲಿಯೂ ಸಿಗಲಾರದು. ಒಂದು ಕಲೆಗೆ ನೈಪುಣ್ಯತೆ ಬರಬೇಕಾದರೆ ಪ್ರಾಮಾಣಿಕತೆ ಇರಬೇಕು, ಒತ್ತಡಮಯ ಜೀವನದಲ್ಲಿ ಒತ್ತಡವನ್ನು ಕುಗ್ಗಿಸುವ ಸಾಮರ್ಥ್ಯ ಸಂಗೀತದಲ್ಲಿದೆ. ಯಾರು ಮಾಡದಿರುವ ಕಾರ್ಯವನ್ನು ನೀವು ಮಾಡಬೇಕು. ನಿಮ್ಮ ಹಿಂದೆ ಪ್ರಯತ್ನ, ಪರಿಶ್ರಮ ಇರುವುದರಿಂದ ಸ್ಪರ್ಧೆಗಳಲ್ಲಿ ಭಾಗವಹಿಸಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆÀ ವಹಿಸಿ ಮಾತನಾಡಿದ ಪ್ರಾಚಾರ್ಯರಾದ ಎಸ್.ಆರ್. ಮುಗನೂರಮಠ ಮಾತನಾಡಿ ಸಂಗೀತ ಎಲ್ಲರಿಗೂ ಒಲಿಯದು. ಸಂಗೀತ ಕಲಿಯಬೇಕೆನ್ನುವ ಹಸಿವಿರಬೇಕು. ಸಂಗೀತದ ಪರಿಕಲ್ಪನೆಗೆ ಹೊಸ ಅಧ್ಯಾಯ ಪ್ರಾರಂಭವಾಗಿದೆ. ವಿದ್ಯಾರ್ಥಿಗಳು ಭವಿ?À್ಯದಲ್ಲಿ ಉತ್ಕೃಷ್ಟ ಕಲಾವಿದರಾಗಿ ಹೊರಹೊಮ್ಮಬೇಕು. ಸ್ಪರ್ಧಾ ಮನೋಭಾವದಿಂದ ಭಾಗವಹಿಸಿ ಎಂದರು.
ಬೊಮ್ಮನಹಳ್ಳಿಯ ವೀರಕ್ತಮಠದ ಶ್ರೀ ಶಿವಯೋಗಿಸ್ವಾಮಿಗಳು ಉಪಸ್ಥಿತರಿದ್ದರು.
ವಿಭಾಗದ ಮುಖ್ಯಸ್ಥರಾದ ಡಾ. ಕೆ.ವಿ.ಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಐಕ್ಯೂಎಸಿ ಘಟಕದ ಸಂಯೋಜಕರಾದ ಡಾ.ಎ.ಯು.ರಾಠೋಡ, ಶಿವಯೋಗಿ ಸ್ವಾಮೀಜಿ, ಪಂ. ಎಸ್.ಸಿ.ಬಳ್ಳೂರ, ಪಂ.ಎಸ್.ವಿ. ಮಠಪತಿ, ಪ್ರೋ.ವಿಶ್ವನಾಥ ಮಹಾಪುರುಷ ಸೇರಿದಂತೆ ಬೋಧಕ- ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.