ಧಾರಾಕಾರ ಮಳೆ: ಜನ ಜೀವನ ಅಸ್ತವ್ಯಸ್ತ
ಚನ್ನಮ್ಮನ ಕಿತ್ತೂರು,ಆ೧ ರಾಜ್ಯಾಧ್ಯಂತ ಧಾರಾಕಾರ ಸುರಿದ ಮಳೆಯಿಂದ ಜನರ ಜೀವನ ಅಸ್ತವ್ಯಸ್ತ ಆಗಿರುವ ಹಿನ್ನಲೆ ಕಿತ್ತೂರು ಕ್ಷೇತ್ರದಲ್ಲಿ ಬಾರಿ ಮಳೆ-ಗಾಳಿಯಿಂದ ಮರಗಳು ನೆಲಕಚ್ಚಿವೆ. ಹಳ್ಳಿಗಳಲ್ಲಿಯ ರಸ್ತೆ ಮೇಲಿನ ಗುಂಡಿಗಳು ಕೆರೆ-ಹೊಂಡಗಳಾಗಿದ್ದು ಬಾರಿ ಮಳೆಯಿಂದ ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದ್ದು ಯಾವುದೇ ಪ್ರಾಣಾಪಾಯವಾಗಿಲ್ಲ.
ತಾಲೂಕಾಧ್ಯಂತ ಬಿದ್ದ ಮನೆಗಳಿಗೆ ಅಧಿಕಾರಿಳೊಡನೆ ಶಾಸಕ ಬಾಬಾಸಾಹೇಬ ಪಾಟೀಲ ಭೇಟಿನೀಡಿ ಪರಿಶೀಲಿಸಿ ಬಿದ್ದ ಮನೆಗಳ ಕೂಡಲೇ ಮಾಹಿತಿ ಸಂಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಹೇಳಿದರು
ಮಳೆಯಿಂದ ಹಾನಿಗೊಳಗಾದ ಮನೆಗಳ ಮಾಲೀಕರಿಗೆ ಈ ಕೂಡಲೇ ಸೂಕ್ತ ಪರಿಹಾರ ಒದಗಿಸುವಲ್ಲಿ ನಾನು ಮುಖ್ಯಮಂತ್ರಿ ಹಾಗೂ ಗೃಹಮಂತ್ರಿಗಳ ಜೊತೆಗೆ ಚರ್ಚಿಸಿ ತ್ವರಿತಗತಿಯಲ್ಲಿ ಸರ್ಕಾರದಿಂದ ಪರಿಹಾರ ಕೊಡಿಸುತ್ತೇನೆಂದರು.
ಈ ಸಮಯದಲ್ಲಿ ತಹಶೀಲ್ದಾರ ರವೀಂದ್ರ ಹಾದಿಮನಿ, ತಾಪಂ ಇಓ ಕಿರಣ ಘೋರ್ಪಡೆ, ಮಾಜಿ ತಾಪಂ-ಪಪA ಅಶಪಾಕ್ ಹವಾಲ್ದಾರ, ತಾಲೂಕ ಮಟ್ಟದ ಎಲ್ಲ ಅಧಿಕಾರಿಗಳು, ಪಿಡಿಓಗಳು ಇನ್ನುಳಿದ ಇಲಾಖೆ ಹಾಗೂ ಗ್ರಾಪಂ ಸರ್ವಸದಸ್ಯರು, ಸಾರ್ವಜನಿಕರು ಸೇರಿದಂತೆ ಇತರರಿದ್ದರು.