ಸಂಖ್ಯಾಶಾಸ್ತ್ರಕ್ಕೆ ಅಡಿಪಾಯ ಹಾಕಿದ ಮಹಾನ್ ವ್ಯಕ್ತಿ ಪ್ರೊ. ಪಿ.ಸಿ ಮಹಾಲನೋಬಿಸ್
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೧; ಸಂಖ್ಯಾಶಾಸ್ತ್ರಕ್ಕೆ ಅಡಿಪಾಯ ಹಾಕಿದ ಮಹಾನ್ ವ್ಯಕ್ತಿ ಪ್ರೊ. ಪಿ.ಸಿ ಮಹಾಲನೋಬಿಸ್ ಎಂದು ಜಿ.ಪಂ.ಉಪಕಾರ್ಯದರ್ಶಿ ಕೃಷ್ಣನಾಯ್ಕ್ ತಿಳಿಸಿದರು.ಜಿಲ್ಲಾಡಳಿತ ಭವನದಲ್ಲಿನ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿಯಲ್ಲಿ ಪ್ರೊ.ಪಿ.ಸಿ.ಮಹಾಲನೋಬಿಸ್‌ರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಾಂಖ್ಯಿಕ ದಿನಾಚರಣೆ ಕಾರ್ಯಕ್ರಮ ಮಾತನಾಡಿದರು.ಮಹಾಲನೋಬಿಸ್‌ರವರು ದೇಶಕ್ಕೆ ನೀಡಿದ ಕೊಡುಗೆಗಳು ಶ್ಲಾಘನೀಯ. ಅವರು ಅಂಕಿ ಅಂಶಗಳ ಮೂಲಕ ಸಮೀಕ್ಷೆ ಮಾಡುವುದನ್ನು ತೋರಿಸಿ ಕೊಟ್ಟವರು. ಮಾದರಿ ಸಮೀಕ್ಷೆ ಅವರ ಅನನ್ಯ ಕೊಡುಗೆಯಾಗಿದ್ದು, ದೇಶದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ ಅಂಕಿ ಅಂಶಗಳ ಸಮೀಕ್ಷೆಗಳು ಸಹಕಾರಿಯಾಗಿವೆ ಎಂದರು.ಸರ್ಕಾರಿ ಯೋಜನೆಗಳನ್ನು ರೂಪಿಸುವಲ್ಲಿ ಅಂಕಿ ಸಂಖ್ಯೆಗಳ ಪಾತ್ರ ಮುಖ್ಯವಾಗಿದೆ. ನಂಬಲಾರ್ಹ ಅಂಕಿ ಅಂಶಗಳನ್ನು ಕಾಲಮಿತಿಯೊಳಗೆ ಸಂಗ್ರಹಿಸಿ ವಿಶ್ಲೇಷಣಾ ವರದಿಯನ್ನು ಪ್ರಕಟಿಸುವಲ್ಲಿ ಸಾಂಖ್ಯಿಕ ಇಲಾಖೆಯ ಪಾತ್ರ ಪ್ರಮುಖವಾಗಿದೆ ಎಂದು ತಿಳಿಸಿದರು.ಪ್ರೊ. ಪಿ.ಸಿ ಮಹಾಲನೋಬಿಸ್ ಭಾರತೀಯ ಸಂಖ್ಯಾಶಾಸ್ತ್ರೀಯ ಸಂಸ್ಥೆಯನ್ನು ಸ್ಥಾಪಿಸಿದರು ಮತ್ತು ದೇಶದ ಆರ್ಥಿಕ ಯೋಜನೆ ಮತ್ತು ಅಂಕಿಅAಶಗಳ ಅಭಿವೃದ್ಧಿ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.