ವಿಶ್ವದ ವಾರಿಯರ್ಸ್ ಅಂದ್ರೆ ಭಾರತದ ಆಶಾ ಕಾರ್ಯಕರ್ತೆಯರು
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೧; ಕೋವಿಡ್ 19 ತಡೆಗಟ್ಟುವಲ್ಲಿ ಯಶಸ್ವಿಯಾಗಿ, ವಿಶ್ವದ ವಾರಿಯರ್ಸ್ ಅಂದ್ರೆ ಭಾರತದ ಆಶಾ ಕಾರ್ಯಕರ್ತೆಯರು” ಎಂದು ವಿಶ್ವ ಆರೋಗ್ಯ ಸಂಸ್ಥೆಯು ಆಶಾಗಳ ಬಗ್ಗೆ ಪ್ರಶಂಸೆ  ವ್ಯಕ್ತಪಡಿಸಿದೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತರ ಸಂಘದ ರಾಜ್ಯ ಕಾರ್ಯದರ್ಶಿಯಾದ ಶ್ರೀಮತಿ ಡಿ ನಾಗಲಕ್ಷ್ಮಿ ಹೇಳಿದರು.ದಾವಣಗೆರೆ ನಗರದ ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂದಿರದಲ್ಲಿ  ನಡೆದ ದಾವಣಗೆರೆ ಜಿಲ್ಲಾ ಮಟ್ಟದ ಆಶಾ ಕಾರ್ಯಕರ್ತೆಯರ ಪ್ರಥಮ ಸಮ್ಮೇಳನದಲ್ಲಿ ಮಾತನಾಡಿದರು ಕಳೆದ 15 ವರ್ಷಗಳಿಂದ ಆರೋಗ್ಯ ಇಲಾಖೆ ಮತ್ತು ಸಮುದಾಯದ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು ಹಲವಾರು ಸಮಸ್ಯೆಗಳ ಎದುರಿಸುತ್ತಿದ್ದಾರೆ, ತಿಂಗಳಿಗೆ ಕೇವಲ 100 ರೂಪಾಯಿ ವೇತನ ಪಡೆದ ಎಷ್ಟೋ ಉದಾರಣೆಗಳಿವೆ, ಅಂತಹ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರ  ಸಮಸ್ಯೆಗಳನ್ನ ಕೈಗೆತ್ತಿಕೊಂಡು ಹೋರಾಟ ನಡೆಸಲಾಯಿತು, ಹೋರಾಟದ ಸಂದರ್ಭದಲ್ಲಿ ಸರ್ಕಾರದ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹೋರಾಟದ ಸ್ಥಳಕ್ಕೆ ಬಂದು ಆಶಾ ಸಮಸ್ಯೆಗಳನ್ನು ಆಲಿಸಿ ಬಹುತೇಕ ಬೇಡಿಕೆ ಈಡೇರಿದ್ದು ಒಂದು ಐತಿಹಾಸಿಕ ಜಯ, ಕೇಂದ್ರದಿಂದ ಬರುವ ಪ್ರೋತ್ಸಾಹ ಧನಕ್ಕೆ ರಾಜ್ಯ ಸರ್ಕಾರ ಮ್ಯಾಚಿಂಗ್ ಗ್ರಾಂಟ್ ಕೊಡುವಂತೆ ಮಾಡಿದ್ದು ಇನ್ನೊಂದು ಇತಿಹಾಸ, ಆದರೂ ಇಂದಿಗೂ ಕೂಡ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವುದು ವಾಸ್ತವ, ದಿನಗಂಟಲೆ ತಿಂಗಳು ಪೂರ್ತಿ ಕಾರ್ಯನಿರ್ವಹಿಸಿದರು ಕೆಲಸಕ್ಕೆ ತಕ್ಕಷ್ಟು ವೇತನ ಬರುತ್ತಿಲ್ಲ ಆರೋಗ್ಯ ಇಲಾಖೆ ಹಾಗೂ ಇಲಾಖೇತರ ಸರ್ವೆಗಳನ್ನ ಮಾಡುತ್ತಿದ್ದಾರೆ ಮಾಡಿದ ಕೆಲಸಗಳಿಗೆ ಸರಿಯಾದ ಪ್ರೋತ್ಸಾಹ ಧನ ಸಿಗುತ್ತಿಲ್ಲ, ಪಿ ಎಚ್ ಸಿ ಗಳಲ್ಲಿ ಡಾಟಾ ಎಂಟ್ರಿ ಆಪರೇಟರ್ ಗಳಿಲ್ಲ ಸರಿಯಾದ ಸಿಬ್ಬಂದಿಗಳಿಲ್ಲ, ಇಂತಹ ಹಲವಾರು ಸಮಸ್ಯೆಗಳ ಮಧ್ಯ ಕಾರ್ಯನಿರ್ವಹಿಸಿದ ಆಶಾ ಗಳಿಗೆ ಸರಿಯಾಗಿ ವೇತನ ಬರದೆ ಮೋಸವಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು ಇಲ್ಲಿಯವರೆಗೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಹಲವಾರು ಸಭೆಗಳು ನಡೆದಿದ್ದು ಯಾವುದೇ ತೀರ್ಮಾನಕ್ಕೆ ಬಾರದಿರುವ ಹಿನ್ನೆಲೆಯಲ್ಲಿ ಆಶಾಗಳು ಸಂಘಟಿತರಾಗಬೇಕೆಂದು ಕರೆ ನೀಡಿದರು,  ಸೆಪ್ಟಂಬರ್ 14 15 ಕಲ್ಬುರ್ಗಿನಲ್ಲಿ ನಡೆಯುವ ರಾಜ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ತಾಲೂಕು ಜಿಲ್ಲೆ ಸಮ್ಮೇಳನಗಳು ನಡೆಯುತ್ತಿವೆ. ಆಶಾ ಕಾರ್ಯಕರ್ತೆಯರನ್ನು ಖಾಯಂ ಗೊಳಿಸಬೇಕು, ಅಲ್ಲಿಯವರೆಗೆ ಕಾರ್ಮಿಕರೆಂದು ಪರಿಗಣಿಸಬೇಕು,