ಕ್ರೀಡಾ ಚಟುವಟಿಕೆಗಳ ಪಂಚಾAಗ ರಚನಾ ಕರ‍್ಯಾಗಾರ
ಸಂಜೆವಾಣಿ ವಾರ್ತೆ,
ವಿಜಯಪುರ,ಆ.೧: ಮಹಿಳಾ ವಿಶ್ವವಿದ್ಯಾಲಯದ ಕ್ರೀಡಾಪಟುಗಳು ಅಂತರ ವಿಶ್ವವಿದ್ಯಾಲಯ ಮತ್ತು ಅಖಿಲ ಭಾರತ ಮಟ್ಟದಲ್ಲಿ ಸ್ಥಾನ ಪಡೆಯುವಂತೆ ತರಬೇತಿ ನೀಡಲು ದೈಹಿಕ ಶಿಕ್ಷಣ ಶಿಕ್ಷಕರಿಗೆ ಕುಲಸಚಿವ ಶಂಕರಗೌಡ ಸೋಮನಾಳ ತಿಳಿಸಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ಶಿಕ್ಷಕರ ಸಭೆ ಮತ್ತು ಕ್ರೀಡಾ ನಿರ್ದೇಶನಾಲಯದಿಂದ ಹಮ್ಮಿಕೊಂಡ ೨೦೨೪-೨೫ನೇ ಸಾಲಿನ ಕ್ರೀಡಾ ಚಟುವಟಿಕೆಗಳ ಪಂಚಾAಗ ರಚನೆಯ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವವಿದ್ಯಾನಿಲಯವು ಕ್ರೀಡಾಪಟುಗಳಿಗಾಗಿ ಮಲ್ಟಿ ಜಿಮ್, ಖೋಖೋ ಮತ್ತು ಕಬ್ಬಡ್ಡಿ ಮ್ಯಾಟಗಳು ಮತ್ತು ಕ್ರೀಡಾ ಸಾಮಗ್ರಿಗಳು ಸುಮಾರು ೮೦ ಲಕ್ಷಗಳಿಗೂ ಹೆಚ್ಚಿನ ಹಣದಲ್ಲಿ ಖರಿದಿಸಲಾಗಿದೆ, ಅದನ್ನು ಕ್ರೀಡಾಪಟುಗಳು ತರಬೇತಿ ಸಮಯದಲ್ಲಿ ಸದುಪಯೋಗ ಪಡೆದುಕೊಂಡು ಉತ್ತಮ ಸಾಧನೆ ಮಾಡಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷÀ ಎಸ್. ಆರ್. ಎಲಿ, ಕ್ರೀಡಾ ನಿರ್ದೇಶಕರು, ಸಂಯೋಜಿತ ಮಹಾವಿದ್ಯಾಲಯಗಳ ಕ್ರೀಡಾ ನಿರ್ದೇಶಕರುಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ಅಧ್ಯಯನ ಮತ್ತು ಕ್ರೀಡಾ ನಿದೇರ್ಶನಾಲಯದ ಮುಖ್ಯಸ್ಥ ಪ್ರೊ. ಸಕ್ಪಾಲ್ ಹೂವಣ್ಣ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಸಹಾಯಕ ನಿರ್ದೇಶಕರು ಡಾ.ವಿಶ್ವನಾಥ ನಡಕಟ್ಟಿ ವಂದನಾರ್ಪಣೆ ಮಾಡಿದರು, ಸಮಾರಂಭದಲ್ಲಿ ಸಂಗೀತ ವಿಭಾಗದ ವಿದ್ಯಾರ್ಥಿನಿ ಚೈತ್ರಾವತಿ ಪ್ರಾರ್ಥನಾ ಗೀತೆಯನ್ನು ಹಾಡಿದರು. ಸಂಶೋಧನಾ ವಿದ್ಯಾರ್ಥಿನಿ ಪ್ರೀತಿ ಮೇಲಿನಮನಿ ನಿರೂಪಣೆ ಮಾಡಿದರು.