ಶಿವಾನಂದ, ರವಿಕುಮಾರ ಗೆ ರಾಷ್ಟ್ರೀಯ ಸೇವಾ ರತ್ನ ಪ್ರಶಸ್ತಿ ಪುರಸ್ಕಾರ
ಇಂಡಿ :ಆ.೧: ಪಟ್ಟಣದ ಸಾಮಾಜಿಕ ಕಾರ್ಯಕರ್ತ ಶಿವಾನಂದ ಮುರಾಮನ್ ಹಾಗೂ ಗುತ್ತಿಗೆದಾರ ರವಿಕುಮಾರ ಸಿಂಗೆ ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ಅವರಿಗೆ ರಾಷ್ಟ್ರೀಯ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.ಕನ್ನಡ ನಾಡು ನುಡಿ ಜಲ ನೆಲ ರಕ್ಷಣೆಯ ಸೇವೆ ಗುರುತಿಸಿ ರಾಷ್ಟ್ರೀಯ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಚಿರಯ್ ಕನ್ನಡ ಡಿಜಿಟಲ್ ಮೀಡಿಯಾ ಹಾಗೂ ಶ್ರೀನಿಧಿ ಪೌಂಡೇಷನ್ ಸಹಯೋಗದಲ್ಲಿ ವಿದ್ಯಾಕಾಶಿ ಧಾರವಾಡ ದ ಜಿಲ್ಲಾ ಸಾಹಿತ್ಯ ಭವನದಲ್ಲಿ ನೆಡದ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಲಾಯಿತು.