ಬೈಕ್ ವ್ಹೀಲಿಂಗ್ ಹುಚ್ಚು ತಡೆಗೆ ಪತ್ರಕರ್ತರು ಗಮನ ಸೆಳೆಯಬೇಕು
ಮುದ್ದೇಬಿಹಾಳ:ಆ.೧: ಕಾಲೇಜು ವಿದ್ಯಾರ್ಥಿಗಳು ಇತ್ತೀಚಿನ ದಿನಗಳಲ್ಲಿ ಬೈಕ್ ವ್ಹೀಲಿಂಗ್ ಹುಚ್ಚು ಬೆಳೆಸಿಕೊಳ್ಳುತ್ತಿದ್ದಾರೆ. ಇದರಿಂದ ಸಾಕಷ್ಟು ಅಪಾಯ ಸಂಭವಿಸಬಹುದಾಗಿದ್ದು ಸಮಾಜದ ಸ್ವಾಸ್ಥö್ಯವೂ ಹಾಳಾಗುತ್ತದೆ. ಇದನ್ನು ತಡೆಗಟ್ಟಲು ಪತ್ರಕರ್ತರು ತಮ್ಮ ವರದಿಗಳ ಮೂಲಕ ಸಂಬAಧಿಸಿದವರ ಗಮನ ಸೆಳೆದು ಅಮೂಲ್ಯವಾದ ಜೀವ ಉಳಿಸಲು ಸಹಕರಿಸಬೇಕು ಎಂದು ಪ್ರಾಂಶುಪಾಲ ವಿನೋದ ಮೇತ್ರಿ ಹೇಳಿದರು.
ಇಲ್ಲಿನ ಪುರಸಭೆ ಹತ್ತಿರ ಇರುವ ಶ್ರೀ ಸಿದ್ಧಗಂಗಾ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ (ಕಕಾನಿಪ) ಸಂಘದ ಮುದ್ದೇಬಿಹಾಳ ತಾಲೂಕು ಘಟಕ ವತಿಯಿಂದ ಬುಧವಾರ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆಯನ್ನು ಸಸಿಗೆ ನೀರು ಹಾಕಿ, ಹರ್ಮನ್ ಮೋಗ್ಲಿಂಗ್, ಮಹಾತ್ಮ ಗಾಂಧೀಜಿ, ಫ.ಗು.ಹಳಕಟ್ಟಿ ಭಾವಚಿತ್ರಗಳಿಗೆ ಪುಷ್ಪನಮನ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕಾಲೇಜು ವಿದ್ಯಾರ್ಥಿಗಳಿಗೆ ಪತ್ರಿಕೋದ್ಯಮ, ಪತ್ರಕರ್ತರು ಮತ್ತು ಸಮೂಹ ಮಾಧ್ಯಮಗಳ ಕುರಿತು ಅರಿವು ಮೂಡಿಸುವ ಉತ್ತಮ ಕೆಲಸವನ್ನು ಕಾನಿಪ ಸಂಘದವರು ಮಾಡುತ್ತಿರುವುದು ಶ್ಲಾಘನೀಯ. ವಿದ್ಯಾರ್ಥಿಗಳು ಸಮೂಹ ಮಾಧ್ಯಮದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಹಿರಿಯ ಪತ್ರಕರ್ತ ಎಚ್.ಆರ್.ಬಾಗವಾನ ಅವರು ಪತ್ರಿಕಾ ದಿನಾಚರಣೆಯ ಹಿನ್ನೆಲೆ ಕುರಿತು ಮಾತನಾಡುತ್ತ ಹರ್ಮನ್ ಮೋಗ್ಲಿಂಗ್ ಅವರಿಂದ ಸ್ಥಾಪಿತ ಕನ್ನಡದ ಮೊಟ್ಟಮೊದಲ ದಿನಪತ್ರಿಕೆ ಮಂಗಳೂರು ಸಮಾಚಾರ ಪತ್ರಿಕಾ ದಿನಾಚರಣೆಗೆ ಪ್ರೇರಣೆ. ಪತ್ರಕರ್ತರು ಸಮಾಜಮುಖಿಯಾಗಿ ತಮ್ಮ ವೃತ್ತಿ ನಿಭಾಯಿಸಬೇಕು ಎಂದರು.
ಕಕಾನಿಪ ಸಂಘದ ರಾಜ್ಯ ಸಮಿತಿ ಸದಸ್ಯ ಡಿ.ಬಿ.ವಡವಡಗಿ ಅವರು ವಿಶೇಷ ಉಪನ್ಯಾಸ ನೀಡಿ ಕಾಲೇಜು ವಿದ್ಯಾರ್ಥಿಗಳು ಪತ್ರಕರ್ತರ ರೀತಿ ಕೆಲಸ ಮಾಡಿ ಕಾಲೇಜಿನಲ್ಲಿ ಇರಬಹುದಾದ ಡ್ರಗ್ಸ್ ಹಾವಳಿ ತಡೆಗಟ್ಟಲು ಸಹಕರಿಸಬೇಕು. ನಿತ್ಯವೂ ಪತ್ರಿಕೆಗಳನ್ನು ಓದುವ ರೂಢಿ ಬೆಳೆಸಿಕೊಂಡು ವಿದ್ಯಾರ್ಥಿ ಜೀವನಕ್ಕೆ ಅಗತ್ಯವಾದ ಮಾಹಿತಿ ಪಡೆದುಕೊಳ್ಳಬೇಕು ಎಂದರು.
ಹಿರಿಯ ಪತ್ರಕರ್ತ ಪುಂಡಲೀಕ ಮುರಾಳ, ಅಧ್ಯಕ್ಷತೆ ವಹಿಸಿದ್ದ ಸಂಘದ ತಾಲೂಕು ಘಟಕದ ಅಧ್ಯಕ್ಷ ಮುತ್ತು ವಡವಡಗಿ ಮಾತನಾಡಿದರು. ಪುರಸಭೆ ಮಾಜಿ ಸದಸ್ಯ ಬಸವರಾಜ ನಂದಿಕೇಶ್ವರಮಠ, ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ, ಸಾಹಿತಿ ಡಿ.ಎಚ್.ಚಳಗೇರಿ, ಹಿರಿಯ ಪತ್ರಕರ್ತರಾದ ಅಲ್ಲಾಭಕ್ಷ ನಿಡಗುಂದಿ, ನೂರೇನಬಿ ನದಾಫ, ಸಂಘದ ಪದಾಧಿಕಾರಿಗಳಾದ ಸಿದ್ದು ಚಲವಾದಿ, ಲಾಡ್ಲೇಮಶ್ಯಾಕ ನದಾಫ, ಕಾಶಿನಾಥ ಬಿರಾದಾರ ನಾಲತವಾಡ, ಸದಸ್ಯರಾದ ಸಾಗರ ಉಕ್ಕಲಿ, ಬಸವರಾಜ ಹುಲಗಣ್ಣಿ, ಯಲ್ಲಾಲಿಂಗ ಕೊಡೇಕಲ್, ಬಸವರಾಜ ಕುಂಬಾರ, ಬಸನಗೌಡ ಪಾಟೀಲ ಸರೂರ, ಮಕ್ಬುಲ್ ಬನ್ನೆಟ್ಟಿ, ಎಚ್.ಬಿ.ಟಕ್ಕಳಕಿ, ಎಂ.ಡಿ.ಬಿರಾದಾರ, ಕೃಷ್ಣಾ ಕುಂಬಾರ, ಉಮರ್‌ಫಾರುಕ್ ಹಾಲ್ಯಾಳ, ಈಶ್ವರ ಈಳಗೇರ ರೂಢಗಿ, ಬಂದೇನವಾಜ ಕುಮಸಿ, ಚೇತನ್ ಶಿವಸಿಂಪಿ, ಈರಯ್ಯ ಹಿರೇಮಠ ಮುರಾಳ, ಢವಳಗಿ ಭಾಗದ ಮುತ್ತು ಬೀರಗೊಂಡ, ಎಚ್.ಎನ್.ಬೀರಗೊಂಡ, ರಾಜಶೇಖರ ಸಜ್ಜನ, ನಾಲತವಾಡ ಭಾಗದ ಮಹಿಬೂಬ ಹಳ್ಳೂರ ಸೇರಿ ೩೦ಕ್ಕೂ ಹೆಚ್ಚು ಪತ್ರಕರ್ತರು ಪಾಲ್ಗೊಂಡಿದ್ದರು.
ಪ್ರತಿಭಾ ಪತ್ತಾರ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ರವೀಂದ್ರ ನಂದೆಪ್ಪನವರ್ ಸ್ವಾಗತಿಸಿ ನಿರೂಪಿಸಿದರು. ಅಮೀನಸಾಬ ಮುಲ್ಲಾ ವಂದಿಸಿದರು. ಕಾರ್ಯಕ್ರಮದ ನಂತರ ಸಭೆ ನಡೆಸಿದ ಸಂಘದ ಸರ್ವ ಸದಸ್ಯರು ಸ್ವಾತಂತ್ರೊö್ಯÃತ್ಸವ ದಿನಾಚರಣೆ ಹಿನ್ನೆಲೆ ಆಗಸ್ಟ್ ೧೪ರಂದು ಸಂಘದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಪ್ರತಿಭಾ ಪುರಸ್ಕಾರ, ಉತ್ತಮ ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ, ಸಾಧಕರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲು ತೀರ್ಮಾನಿಸಿದರು.