ಹೊಸನಗರ ತಾಲೂಕಿನ ವಿವಿಧೆಡೆ ಮುಂದುವರಿದ ಮಳೆ ಆರ್ಭಟ!
ಸಂಜೆವಾಣಿ ವಾರ್ತೆ
ಶಿವಮೊಗ್ಗ, ಜು. ೩೧; ಶಿವಮೊಗ್ಗ ತಾಲೂಕು ಸೇರಿದಂತೆ ಜಿಲ್ಲೆಯ ಹಲವೆಡೆ ಮುಂಗಾರು ಮಳೆಯ ತೀವ್ರತೆ ಕೊಂಚ ಇಳಿಕೆಯಾಗಿದೆ. ಆದರೆ ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿ ಮಳೆ ಮತ್ತೆ ಮಳೆ ಅಬ್ಬರ ಜೋರಾಗಿದೆ!ಹೊಸನಗರ ತಾಲೂಕಿನ ವಿವಿಧೆಡೆ ಧಾರಾಕಾರ ಮಳೆಯಾಗುತ್ತಿದೆ. ಜೂ. 30 ರ ಮಂಗಳವಾರ ಮುಂಜಾನೆಯಿಂದ ತಾಲೂಕಿನ ನಗರ ಹೋಬಳಿ ಭಾಗದಲ್ಲಿ ಎಡೆಬಿಡದೆ ವರ್ಷಧಾರೆ ಸೃಷ್ಟಿಯಾಗಿದೆ. ಹಲವೆಡೆ ನೆರೆ ಭೀತಿ ಸೃಷ್ಟಿಯಾಗುವಂತೆ ಮಾಡಿದೆ!ಸಂಡೋಡಿಯಲ್ಲಿ ಕಿರು ಸೇತುವೆ ಮುಳುಗಡೆಯಾಗಿದೆ. ತಗ್ಗು ಪ್ರದೇಶಗಳು ಜಲಾವೃತವಾಗುವಂತಾಗಿದೆ. ಭಾರೀ ಮಳೆಗೆ ಕೆರೆಕಟ್ಟೆ, ಹಳ್ಳಕೊಳ್ಳಗಳು ಮತ್ತೆ ಉಕ್ಕಿ ಹರಿಯುವಂತಾಗಿದೆ.  ಮಳೆ ವಿವರ : ಮಂಗಳವಾರ ಬೆಳಿಗ್ಗೆ ಕೊನೆಗೊಂಡಂತೆ, ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸನಗರ ತಾಲೂಕಿನ ಪ್ರಮುಖ ಸ್ಥಳಗಳಲ್ಲಿ ಬಿದ್ದ ಮಳೆ ವಿವರ ಈ ಮುಂದಿ ನಂತಿದೆ ಮಾಣಿಯಲ್ಲಿ 185 ಮಿಲಿ ಮೀಟರ್, ಯಡೂರು 217 ಮಿ.ಮೀ., ಹುಲಿಕಲ್ 210 ಮಿ.ಮೀ., ಮಾಸ್ತಿಕಟ್ಟೆ 240 ಮಿ.ಮೀ., ಚಕ್ರಾ 220 ಮಿ.ಮೀ., ಸಾವೇಹಕ್ಲುವಿನಲ್ಲಿ 167 ಮಿ.ಮೀ. ಮಳೆಯಾಗಿದೆ.