ಸಾಹಿತ್ಯ ಮಾಸ ಪತ್ರಿಕೆ ಸಾಹಿತಿಗಳಿಗೆ ಮಾರ್ಗದರ್ಶಿ: ಹಾಸಿಂಪೀರ ವಾಲಿಕಾರ
ಸಂಜೆವಾಣಿ ವಾರ್ತೆ,
ವಿಜಯಪುರ,ಆ.೧: ಕನ್ನಡ ಸಾಹಿತ್ಯ ಕ್ಷೇತ್ರ ಬೆಳೆಸುವತ್ತ ಅಕ್ಷರ ಸಂಗಾತ ಸಾಹಿತ್ಯ ಮಾಸ ಪತ್ರಿಕೆ ಸಾಹಿತಿಗಳಿಗೆ ಮಾರ್ಗದರ್ಶಿಯಾಗಿದೆ. ಕವನ, ಕಥೆ, ಪ್ರಬಂಧ, ಕಾದಂಬರಿ, ಜಾನಪದ ಹಾಡು, ವಿಮರ್ಶೆ ಮುಂತಾದವುಗಳ ಕುರಿತು ಪ್ರಕಟಿತಗೊಳ್ಳುವ ಈ ಸಾಹಿತ್ಯ ಮಾಸ ಪತ್ರಿಕೆಯು ಸಾಹಿತಿಗಳಿಗೆ ಕೈಪಿಡಿಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ಪಟ್ಟರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಟಿ.ಎಸ್. ಗೊರವರ ಅವರ ಅಕ್ಷರ ಸಂಗಾತ ಮಾಸ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿ, ಪ್ರತಿಭಾವಂತ ಸಾಹಿತಿಗಳ ವಿಷಯಗಳನ್ನು ಪ್ರಕಟಿಸುವ ಮೂಲಕ ಅನೇಕರಿಗೆ ಅವಕಾಶ ನೀಡುತ್ತಿರುವ ಈ ಸಾಹಿತ್ಯ ಪತ್ರಿಕೆ ಉಪಯುಕ್ತವಾಗಿದೆ. ರಾಜ್ಯಾದ್ಯಂತ ಈ ಸಾಹಿತ್ಯ ಮಾಸ ಪತ್ರಿಕೆ ಕೆಲಸ ಮಾಡುತ್ತಿರುವÀದು ಅತ್ಯಂತ ಸಂತೋಷದ ವಿಚಾರ ಎಂದರು.
ಹಿರಿಯ ಪತ್ರಕರ್ತ ಅಶೋಕ ಯಡಳ್ಳಿ ಮಾತನಾಡಿ, ಅಕ್ಷರ ಸಂಗಾತ ಸಾಹಿತ್ಯ ಮಾಸ ಪತ್ರಿಕೆ ಸಾಹಿತಿಗಳಿಗೆ ಸಂಪೂರ್ಣ ಸ್ಪೂರ್ತಿ ನೀಡುವುದಾಗಿದೆ. ಸಾಹಿತ್ಯ ಕ್ಷೇತ್ರಕ್ಕೂ ಹಾಗೂ ಪತ್ರಿಕಾ ಕ್ಷೇತ್ರಕ್ಕೂ ಅವಿನಾಭಾವ ಸಂಬAಧವಿದೆ. ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಅಕ್ಷರ ಸಂಗಾತ ಸಾಹಿತ್ಯ ಮಾಸ ಪತ್ರಿಕೆ ಕುಟುಂಬದ ಎಲ್ಲ ಸದಸ್ಯರಿಗೂ ಸಂಗಾತಿಯಾಗಲಿದೆ. ಇದರ ಪ್ರಯೋಜನ ಸಾಹಿತಿಗಳು ಪಡೆದುಕೊಳ್ಳಬೇಕೆಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ಮಾತನಾಡಿ, ಸಾಹಿತ್ಯ ಕ್ಷೇತ್ರ ವಿಶಾಲವಾಗಿದೆ. ಸಾಹಿತ್ಯ ನಮ್ಮೆಲ್ಲರ ಸಂಸ್ಕೃತಿಯ ಪ್ರತೀಕ. ಇಂದು ಶಿಕ್ಷಣದ ಜೊತೆಗೆ ಸಾಹಿತ್ಯದ ಅಭಿರುಚಿ ಬೆಳೆಸುವ ಕಾರ್ಯ ಈ ಸಾಹಿತ್ಯ ಮಾಸ ಪತ್ರಿಕೆ ಮಾಡುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಅಕ್ಷರ ಸಂಗಾತ ಸಾಹಿತ್ಯ ಮಾಸ ಪತ್ರಿಕೆಯ ಸಂಪಾದಕ ಟಿ.ಎಸ್. ಗೊರವರ ಅವರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಸಾಪ ಜಿಲ್ಲಾ ದತ್ತಿ ಸಂಚಾಲಕ ರಾಜೇಸಾಬ ಶಿವನಗುತ್ತಿ, ಸಮಾಜ ಸೇವಕ ಫಯಾಜ್ ಕಲಾದಗಿ, ವಿಜಯಲಕ್ಷ್ಮಿ ಹಳಕಟ್ಟಿ, ಆಶಾ ಬಿರಾದಾರ, ಭಾಗೀರಥಿ ಸಿಂಧೆ, ಶೋಭಾ ಮಸಳಿಕೇರಿ, ಗಂಗಾ ಬಂಕಲಗಿ, ಶ್ವೇತಾ ಜಾಧವ, ಚೈತನ್ಯ ಮುದ್ದೆಬಿಹಾಳ, ಅರ್ಜುನ ಶಿರೂರ, ಸಾಹೇಬಣ್ಣ ಮಾದರ, ರಾಜಶೇಖರ ಕಂಬಾರ, ಜಿ.ಎಸ್. ಬಳ್ಳೂರ, ಟಿ.ಆರ್. ಹಾವಿನಾಳ ಮುಂತಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯ, ಉಪನ್ಯಾಸಕ ಬಸವರಾಜ ಕುಂಬಾರ ಅಕಾಲಿಕ ಮರಣ ಹೊಂದಿದ ನಿಮಿತ್ತ ಸಂತಾಪ ಸೂಚಿಸಲಾಯಿತು.