ದೈಹಿಕ, ಮಾನಸಿಕ ಆರೋಗ್ಯಕ್ಕೆ ಪೌಷ್ಟಿಕ ಆಹಾರ ಅಗತ್ಯ: ಡಾ. ಚೇತನಾ ನಾಗೇಶ
ಸಂಜೆವಾಣಿ ವಾರ್ತೆ,
ವಿಜಯಪುರ,ಆ.೧:ದೈಹಿಕ ಮತ್ತು ಮಾನಸಿಕ ಅರೋಗ್ಯಕ್ಕೆ ಉತ್ತಮ ಗುಣಮಟ್ಟದ ಪೌಷ್ಠಿಕ ಆಹಾರ ಸೇವಿಸುವುದು ಅವಶ್ಯಕತೆಇದೆ. ಆದ್ದರಿಂದ ನಮ್ಮ ಬದುಕಿನಲ್ಲಿ ದಿನನಿತ್ಯ ಪೌಷ್ಠಿಕ ಆಹಾರ ಸೇವಿಸುವುದು ಅಗತ್ಯವಿದೆ ಎಂದು ಸತ್ವ ನ್ಯೂಟ್ರೇಷನ್ ಸಂಸ್ಥಾಪಕ ನಿರ್ದೇಶಕ Àಡಾ.
ಚೇತನಾ ನಾಗೇಶ ಹೇಳಿದರು.
ನಗರದ ಎಸ್.ಬಿ. ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದ ಐಕ್ಯೂಎಸಿ ಮತ್ತು ಹಳೆ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ಅಯೋಜಿಸಲಾದ ಹಳೆ ವಿದ್ಯಾರ್ಥಿಗಳ ಸಮ್ಮೇಳನ ಕಾರ್ಯಕ್ರಮದಲ್ಲಿ ಸಂಪನ್ಮೋಲ ವ್ಯಕ್ತಿಗಳಾಗಿ ಮಾತನಾಡಿದ ಅವರು, ಆರೋಗ್ಯವೇ ಭಾಗ್ಯ ಎಂಬAತೆ ನಮ್ಮ ಅಂಗೈಯಲ್ಲಿ ನಮ ್ಮಆರೋಗ್ಯವಿದೆ. ಅದನ್ನು ಕಾಪಾಡಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ. ನಮ್ಮ ಬದುಕು ಸುಂದರವಾಗಬೇಕಾದರೆ ನಾವು ಸೇವಿಸುವ ಆಹಾರ ಉತ್ತಮ ಪೌಷ್ಠಿಕತೆಯಿಂದ ಕೂಡಿರಬೇಕು. ನಮ್ಮ ದೈನಂದಿನ ಜೀವನದ ಚಟುವಟಿಕೆಗಳಲ್ಲಿ ನಿತರಂತರವಾಗಿ ಉಲ್ಲಾಸದಿಂದಿರಲು ದೈಹಿಕ ಕಸರಿತ್ತಿನ ಅವಶ್ಯಕತೆ ಇದೆ. ಅದರಂತೆ ದೈಹಿಕ ಮತ್ತು ಮಾನಸಿಕ ಅರೋಗ್ಯಕ್ಕೆ ಉತ್ತಮಗುಣಮಟ್ಟದ ಪೌಷ್ಠಿಕ ಆಹಾರ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅದೇ ರೀತಿಯಾಗಿ ದೈಹಿಕ, ಮಾನಸಿಕ ಆರೋಗ್ಯದ ಸ್ಥಿರತೆಯನ್ನು ಕಾಪಾಡಲು ನಮಗೆ ನಿದ್ರೆ ಅವಶ್ಯಕತೆ ಇದೆ. ಆದ್ದರಿಂದ ಸಮಪ್ರಮಾಣದಲ್ಲಿ ನಿದ್ರೆ ಮಾಡಬೇಕು ಎಂದು ಹೇಳಿದರು.
ಅಲ್ಲದೆ ನಮ್ಮ ಉತ್ತಮ ಆರೋಗ್ಯಕ್ಕೆ ನಿತ್ಯ ಬದುಕಿನಲ್ಲಿ ನಾವು ಸೇವಿಸುವ ಆಹಾರದಲ್ಲಿ ಬಳಸುವ ಅಡುಗೆ ಎಣ್ಣೆ ಮಿತವ್ಯಯವಾಗಿ ಬಳಸುವುದು ಅವಶ್ಯಕವಾಗಿದೆ. ಅವಶ್ಯಕವಿದ್ದಷ್ಟು ಎಣ್ಣೆಯನ್ನು ಬಳಸುವುದು ಸೂಕ್ತ. ಅತಿಯಾದರೆ ಆರೋಗ್ಯಕ್ಕೆ ತುಂಬಾ ಹಾನಿಕರವಾಗಿದೆ ಎಂದು ಹೇಳಿದರು.
ಆದ್ದರಿಂದ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ನಮ್ಮದೈಹಿಕ ಆರೋಗ್ಯ,ಮಾನಸಿಕ ಆರೋಗ್ಯ ಉತ್ತಮ ಪೌಷ್ಠಿಕ ಆಹಾರ, ದಿನನಿತ್ಯ ಯೋಗಾಸನ, ವ್ಯಾಯಾಮ, ಸೈಕ್ಲಿಂಗ್, ಈಜು, ಕ್ರೀಡೆಯಲ್ಲಿ ತೊಡುಗುವುದು
ಅವಶ್ಯಕತೆವಾಗಿದೆ. ಇದರಿಂದ ನಮ್ಮಲ್ಲಿ ಹೊಸತನ ಅಳವಡಿಕೆ ಸಹಾಯಕವಾಗುತ್ತದೆ ಎಂದು ಆರೋಗ್ಯದ ಬಗ್ಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯ ನಿವೃತ್ತ ಆಡಳಿತಾಧಿಕಾರಿ ಡಾ. ಕೆ.ಜಿ. ಪೂಜಾರಿ, ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಆರ್.ಎಂ. ಮಿರ್ದೆ, ಐಕ್ಯೂಎಸಿ ನಿರ್ದೇಶಕ Àಡಾ. ಪಿ.ಎಸ್. ಪಾಟೀಲ, ನಿವೃತ್ತ ಪ್ರಾಚಾರ್ಯ ಡಾ. ಯು.ಎಸ್. ಪೂಜೇರಿ, ಡಾ. ಎ.ಎಸ್. ಪೂಜಾರಿ, ಹಳೆಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಡಾ. ಎಸ್.ಜೆ. ಪವಾರ, ಕೋಶಾಧಿಕಾರಿ ಪ್ರೊ. ಆರ್.ಹೆಚ್. ಬಿದರಿ, ಪ್ರೊ. ಜಿ.ಆರ್. ಅಂಬಲಿ, ಪ್ರೊ. ಬಿ.ಎಸ್.ಬಗಲಿ, ಪ್ರೊ. ಬಿ.ಜಿ. ಮೂಲಿಮನಿ, ಡಾ. ಶ್ರೀಕಾಂತ. ಪಾಟೀಲ, ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರೊ. ಸೌಮ್ಯ ಸಜ್ಜನ ಸ್ವಾಗತಿಸಿದರು, ಡಾ. ದಾನೇಶ್ವರಿ ಮೂಲಿಮನಿ ನಿರೂಪಿಸಿದರು.