ಬೆಂಕಿಗೆ ಆಹುತಿಯಾದ ಎಲೆಕ್ಟ್ರಿಕ್ ಆಟೋ
ಕಲಬುರಗಿ,ಸೆ 29: ನಗರದ ಗಂಜ್ ಪ್ರದೇಶದ ನಗರೇಶ್ವರ ಶಾಲೆಯ ಮುಂಭಾಗದ ರಸ್ತೆಯಲ್ಲಿ ಎಲೆಕ್ಟ್ರಿಕ್ ಆಟೋವೊಂದು ಹೊತ್ತಿ ಉರಿದ ದುರ್ಘಟನೆ ಸಂಭವಿಸಿದೆ.
ಘಟನೆಯಲ್ಲಿ ಚಾಲಕ ಮತ್ತು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಫಿಲ್ಟರ್ ಬೆಡ್ ಸಮೀಪದ ವಿಷ್ಣು ನಗರ ನಿವಾಸಿ ವಿಶ್ವನಾಥ ಜಾಧವ ಎಂಬುವವರಿಗೆ ಸೇರಿದ ಎಲೆಕ್ಟ್ರಿಕ್ ಆಟೋಗೆ ಬೆಂಕಿ ಹತ್ತಿಕೊಂಡಿದೆ.
ವಿಶ್ವನಾಥ ಅವರು ಪ್ರಯಾಣಿಕರೊಬ್ಬರನ್ನು ಆಟೋದಲ್ಲಿಕರೆದೊಯ್ಯುತ್ತಿದ್ದರು.ಸೀಟ್ ಹಿಂಬದಿ ಬಿಸಿಯಾಗುತ್ತಿದೆ ಎಂದು ಹೇಳಿ ಪ್ರಯಾಣಿಕ ಕೆಳಗಿಳಿದರು.ಅಷ್ಟರಲ್ಲಿ ಎಂಜಿನಿನಲ್ಲಿ ಬೆಂಕಿ ಕಾಣಿಸಿಕೊಂಡಿತು.ಕೆಲವೇ ಕ್ಷಣಗಳಲ್ಲಿ ಬೆಂಕಿಯು ಆಟೋವನ್ನು ವ್ಯಾಪಿಸಿತು ಎಂದು ತಿಳಿದುಬಂದಿದೆ.