ನಾಗನಕೆರೆ:ಸಂತ್ರಸ್ತರನ್ನು ಭೇಟಿಯಾದ ಶಾಸಕ ಡಾ.ಶೈಲೆಂದ್ರ ಬೆಲ್ದಾಳೆ
ಚಿಟಗುಪ್ಪಾ,ಸೆ 29: ತಾಲೂಕಿನ ನಾಗನಕೆರೆ ಗ್ರಾಮದ ಕೆರೆ ಭರ್ತಿಯಾಗಿ ಕೆಲ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಪ್ರಾರಂಭಿಸಲಾದ ಗಂಜಿ ಕೇಂದ್ರಕ್ಕೆ ಶಾಸಕ ಡಾ ಶೈಲೆಂದ್ರ ಬೆಲ್ದಾಳೆ ಭೇಟಿ ನೀಡಿ ಸಂತಸ್ತರಿಗೆ ಸಾಂತ್ವನ ಹೇಳಿದರು.
ಕೆರೆ ನೀರು ಭರ್ತಿಯಾಗಿ ಸುಮಾರು 15ರಿಂದ 20 ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಶಾಲೆಯಲ್ಲಿ ಸಂತ್ರಸ್ತರಿಗೆ ಗಂಜಿ ಕೇಂದ್ರವನ್ನು ತೆರೆಯಲಾಗಿದೆ.
ಸಂತ್ರಸ್ಥರ ಅಹವಾಲು ಆಲಿಸಿದ ಶಾಸಕ ಬೆಲ್ದಾಳೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸಮಸ್ಯೆ ಪರಿಹಾರಕ್ಕೆ ಶಾಶ್ವತ ಯೋಜನೆ ರೂಪಿಸುವಂತೆ ಸೂಚಿಸಿದರು.
ಬಳಿಕ ಕೆರೆ ನೀರು ನುಗ್ಗಿದ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಸಾಂಕ್ರಾಮಿಕ ರೋಗಗಳ ಹರಡದಂತೆ ಎಚ್ಚರ ವಹಿಸಲು ಸಂಬಂಧಪಟ್ಟ ಇಲಾಖೆಗೆ ಸೂಚಿಸಿದರು.ಆ ಬಳಿಕ ಕೆರೆ ನೀರಿನಿಂದ ಹಾನಿಗೊಳಗಾದ ಕಬ್ಬು, ಅಲ್ಲಾ ಇತರ ಬೆಳೆಗಳನ್ನು ಬೆಳೆದ ರೈತರ ಹೊಲಗಳನ್ನು ವೀಕ್ಷಿಸಿದರು.
ಸಂಬಂಧಪಟ್ಟ ಇಲಾಖೆಗಳು ಸಂತ್ರಸ್ತರಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಸೂಚಿಸಿದರು.ಬಳಿಕ ಸರ್ಕಾರಿ ಶಾಲೆ ಆವರಣದಲ್ಲಿ ಸಮಸ್ಯೆ ಪರಿಹಾರಕ್ಕಾಗಿ ಗ್ರಾಮಸ್ಥರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿದರು
ತಹಸಿಲ್ದಾರ್ ಮಂಜುನಾಥ್ ಪಂಚಾಳ್, ತಾಲೂಕು ಪಂಚಾಯತ ಇಒ ಲಕ್ಷ್ಮಿ ಬಿರಾದಾರ್, ಮಂಗಲಗಿ ಗ್ರಾಮ ಪಂಚಾಯತ್ ಅಧ್ಯಕ್ಷ ಪುಂಡಲೀಕ್ ಅರ್ಕಿ, ಉಪಾಧ್ಯಕ್ಷೆ ಪವಿತ್ರ ಸಂತೋಷ್ ರೆಡ್ಡಿ,ಬಿಜೆಪಿ ಮಂಡಲ ಅಧ್ಯಕ್ಷ ಗುರುನಾಥ ರಾಜಗಿರಾ ಬಗದಲ್, ಸಂತೋಷ್ ಹಳ್ಳಿಖೇಡ್, ರವಿ ಸ್ವಾಮಿ ನಿರ್ಣಾ ಲೋಕೋಪಯೋಗಿ,, ನೀರಾವರಿ,ಅರಣ್ಯ, ಜೆಸ್ಕಾಂ, ಕೃಷಿ, ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು,
ವಿದ್ಯಾರ್ಥಿಗಳಿಂದ ಶಾಸಕರಿಗೆ ಘೇರಾವ್
ಗ್ರಾಮಕ್ಕೆ ಸಮರ್ಪಕ ಬಸ್ ಸೌಕರ್ಯ ಕಲ್ಪಿಸುವಂತೆ ಗ್ರಾಮದ ಶಾಲಾ ವಿದ್ಯಾರ್ಥಿಗಳು ಶಾಸಕ ಡಾ ಶೈಲೆಂದ್ರ ಬೆಲ್ದಾಳೆಗೆ ಘೇರಾವ್ ಹಾಕಿದ ಪ್ರಸಂಗ ಜರುಗಿತು.
ಗ್ರಾಮದಿಂದ ಮನ್ನಾಎಖೇಳಿ ಬೀದರ್ ಹಾಗು ನಿರ್ಣ ಗ್ರಾಮಕ್ಕೆ ಸಮಯಕ್ಕೆ ಸರಿಯಾಗಿ ಬಸ್ ಇಲ್ಲದ ಕಾರಣ ಸುಮಾರು ಐದು ಕಿಲೋಮೀಟರ್ ನಡೆದುಕೊಂಡು ನಿರ್ಣ ಗ್ರಾಮಕ್ಕೆ ಹೋಗಬೇಕಾಗಿದೆ, ದಾರಿಯಲ್ಲಿ ಪಡ್ಡೆ ಹುಡುಗರು ಕಿರುಕುಳ ನೀಡುತ್ತಿದ್ದಾರೆ ಎಂದು ವಿದ್ಯಾರ್ಥಿನಿಯರು ಅವಲೋತುಕೊಂಡರು ಸಮಸ್ಯೆ ಅಲ್ಲಿ ಸಿದ್ದ ಶಾಸಕರು ಜಿಲ್ಲಾ ಸಾರಿಗೆ ವಿಭಾಗಿಯ ನಿಯಂತ್ರಣಧಿಕಾರಿಗೆ ಮೊಬೈಲ್ ಮೂಲಕ ಮಾತನಾಡಿ ನಾಳೆಯಿಂದಲೇ ಬಸ್ ಸೌಕರ್ಯ ಕಲ್ಪಿಸುವಂತೆ ಸೂಚಿಸಿದ್ದರು