1.ರಂದು ಸಚಿವ ಪ್ರಿಯಾಂಕ್ ಮನೆ ಎದುರು ಧರಣಿ
ಕಲಬುರಗಿ,ಸೆ 29: ಗ್ರಾಮ ಪಂಚಾಯತಿ ನೌಕರರ 19 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಕ್ಟೋಬರ್ 1 ರಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಅವರ ಮನೆಯ ಮುಂದೆ ಧರಣಿ ನಡೆಸಲಾಗುವದು ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ ನೌಕರರ ಸಂಘದ ಅಧ್ಯಕ್ಷ ಎಂ.ಬಿ ನಾಡಗೌಡ ತಿಳಿಸಿದರು.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು 23-24ರಜುಲೈನಲ್ಲಿ ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಹೋರಾಟ ಮಾಡಿದ ಸಮಯದಲ್ಲಿ ಸಚಿವರು ಹೋರಾಟ ಕೈ ಬಿಡಿ ಒಂದು ವಾರದಲ್ಲಿ ನಿಮ್ಮ ಬೇಡಿಕೆ ಈಡೇರಿಸುವದಾಗಿ ಭರವಸೆ ನೀಡಿದ ಹಿನ್ನೆಲೆ ಅಂದಿನ ಹೋರಾಟ ಕೈ ಬಿಡಲಾಗಿತ್ತು. ಆದರೆ ಸಚಿವರು ಹೇಳಿದಂತೆ ನಡೆದುಕೊಳ್ಳದೆ ಸುಮಾರು 2ತಿಂಗಳಾದರು ನಮ್ಮ ಬೇಡಿಕೆಗೆ ಸ್ಪಂದಿಸದೆ ಇರುವದರಿಂದ ನಮ್ಮ ರಾಜ್ಯ ಸಮಿತಿ ಸಭೆ ಸೇರಿ ಸಚಿವರ ಮನೆ ಮುಂದೆ ಧರಣೆ ಮಾಡುವ ತೀರ್ಮಾನ ಕೈಗೊಂಡರು. ಹೋರಾಟಕ್ಕೆ ಹೆಚ್ಚಿನ ನೌಕರರನ್ನು ಕರೆ ತರುವ ಜವಾಬ್ದಾರಿ ಆಯಾ ತಾಲೂಕಿನ ಅಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ, ಹಾಗೂ ಆಯಾ ತಾಲೂಕಿನ ಪದಾಧಿಕಾರಿಗಳಿಗೆ ವಹಿಸಲಾಗುವದು ಎಂದರು
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಅಧ್ಯಕ್ಷ ನಾಗರಾಜ್ ಬಂಗೂರ,ಮಾರುತಿ ಸುಗ್ಗಾ, ಖಜಾಂಚಿ ಭೀಮರಾವ ಜಮಾದಾರ್, ಜೈಭೀಮ್ ಹೊಸಮನಿ,ಭೋಜರಾಜ್ ಮಾಲಿ ಪಾಟೀಲ್, ಸಿದ್ದುಗೌಡ, ಬಂದಿಗಿಸಾಭ ನದಾಫ್, ರಾಜಕುಮಾರ ಪೂಜಾರಿ, ಮಲ್ಲಿನಾಥ್ ಬೋಧನ, ಹಣಮಂತ, ಶಾಂತಯ್ಯ ಸ್ವಾಮಿ, ರೇವಣಸಿದ್ಧಪ್ಪ ಕಲ್ಕೋರೆ, ಶಿವಲಿಂಗಪ್ಪ ವಟವಟಿ, ಶರಣಬಸಪ್ಪ ಶೇಳ್ಳಾಗಿ, ಭೀಮರಾಯ ಹೊನ್ನಕಿರಣಗಿ ಉಪಸ್ಥಿತರಿದ್ದರು.