ಶರನ್ನವರಾತ್ರಿ ಮಹೋತ್ಸವಕ್ಕೆ ಚಾಲನೆ
ಮಾಲೂರು, ಅ.೬- ಪಟ್ಟಣದ ಕೋದಂಡರಾಮಸ್ವಾಮಿ ದೇವಾಲಯದಲ್ಲಿ೧೦ ದಿನಗಳ ಕಾಲ ರಾತ್ರಿ ವೇಳೆ ಜ್ಯೋತಿ ನಗರ ವೈಶ್ಯ ಗಾಣಿಗ ಜನಾಂಗದವರಿಂದ ನಡೆಯಲಿರುವ ಶರನ್ನವರಾತ್ರಿ ಮಹೋತ್ಸವದ ಪೂಜಾ ಕಾರ್ಯಕ್ರಮಗಳಿಗೆ ಮಹೋತ್ಸವ ಸಮಿತಿ ಅಧ್ಯಕ್ಷ ಹಾಗೂ ನಿವೃತ್ತ ಶಿಕ್ಷಕ ವೆಂಕಟೇಶಪ್ಪ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿ, ಪಟ್ಟಣದಲ್ಲಿ ಮುಜರಾಯಿ ಇಲಾಖೆಗೆ ಸೇರಿದ ಕೋದಂಡರಾಮಸ್ವಾಮಿ ದೇವಾಲಯದಲ್ಲಿ ಪ್ರತಿವರ್ಷ ಜ್ಯೋತಿನಗರ ವೈಶ್ಯ ಗಾಣಿಗ ಸಮುದಾಯದ ವತಿಯಿಂದ ಶ್ರೀ ರಾಮನವಮಿ ಪ್ರಯುಕ್ತ ಕಲ್ಯಾಣೋತ್ಸವ ಹಾಗೂ ಅಕ್ಟೋಬರ್ ತಿಂಗಳಲ್ಲಿ ಬರುವ ನವರಾತ್ರಿ ಪೂಜೆಗಳು ಈ ಎರಡು ಧಾರ್ಮಿಕ ಕಾರ್ಯಕ್ರಮಗಳನ್ನು ಈ ಹಿಂದೆ ಹಿರಿಯರು ಬಳುವಳಿಯಾಗಿ ಕೊಟ್ಟು ಹೋಗಿದ್ದು ಹತ್ತು ದಿನಗಳ ಕಾಲ ರಾತ್ರಿ ವೇಳೆ ನವರಾತ್ರಿ ಮಹೋತ್ಸವ ವಿಶೇಷ ಪೂಜೆಗಳನ್ನು ೨೯ ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ ಸಮುದಾಯದವರು ವಿಶೇಷ ರೀತಿಯಲ್ಲಿ ಪೂಜೆ ಸಲ್ಲಿಸಿ ರಾಮನ ಕೃಪೆಗೆ ಪಾತ್ರರಾಗುತ್ತಿದ್ದಾರೆ
ಗಾಣಿಗ ಸಮಾಜದವರು ಈ ಹಿಂದೆ ಕುಲಕಸುವಾದ ಗಾಣದಿಂದ ಎಣ್ಣೆ ತೆಗೆದು ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು ಆದರೆ ಆಧುನಿಕತೆ ಹೆಚ್ಚಿದಂತೆ ಗಾಣಗಳು ಮರೆಯಾಗಿ ಕೆಲವರು ಕುಲಕಸವನ್ನು ಬಿಟ್ಟು ಬೇರೆ ವೃತ್ತಿಗಳ ಮೂಲಕ ಜೀವನ ನಡೆಸುತ್ತಿದ್ದಾರೆ ಕೆಲವರು ರೋಟರಿಗಳನ್ನು ಹಾಕಿಕೊಂಡು ಎಣ್ಣೆ ತೆಗೆದು ವ್ಯಾಪಾರ ಮಾರಾಟ ಮಾಡುತ್ತಾರೆ ಆರ್ಥಿಕವಾಗಿ ತೀರ ಹಿಂದುಳಿದಿರುವ ಗಾಣಿಗ ಸಮಾಜದವರು ತಮ್ಮ ಕುಟುಂಬಗಳು ಆರ್ಥಿಕವಾಗಿ ಪ್ರಗತಿ ಹೊಂದಲು ತಮ್ಮ ದುಡಿಮೆಯ ಜೊತೆಗೆ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂದರು.
ಜೆಪಿ ನಗರ ವೈಶ್ಯ ಗಾಣಿಗ ಸಮಾಜದ ನವರಾತ್ರಿ ಮಹೋತ್ಸವ ಸೇವಕರ್ತರಾದ ರಾಮಣ್ಣ ತಿಮ್ಮಣ್ಣ ಮುನಿ ವೆಂಕಟಪ್ಪ ವಿ ಎನ್ ಮೂರ್ತಿ ಮುನಿಶಂಕರ್ ಎಸ್ ನಾರಾಯಣಸ್ವಾಮಿ ನಾಗರಾಜು ಮುನಿರಾಜು ಅಂಬರೀಶ್ ಶಬರೀಶ್ ಪ್ರದೀಪ್ ತೇಜಸ್ ಇನ್ನಿತರರು ಹಾಜರಿದ್ದರು.