ಕಾಂಗ್ರೇಸ್ ಗಲಭೆ- ಜಾತಿನಿಂದನೆ ದೂರು ವಾಪಾಸ್ಸ್ ಪಡೆಯಲು ಒತ್ತಡ
ಕೋಲಾರ,ಅ,೬-ನಗರ ಹೊರವಲಯದ ನಂದಿನಿ ಪ್ಯಾಲೇಸ್‌ನಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಕಾಂಗ್ರೇಸ್ ಸಂಘಟನಾ ಸಭೆಯಲ್ಲಿ ವಿನಾ ಕಾರಣ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಎಳೆದಾಡಿ ಹಲ್ಲೆ ಮಾಡಿ ದೌರ್ಜನ್ಯ ಎಸೆಗಿದ್ದ ವಿರುದ್ದ ಚೌಡರೆಡ್ಡಿ ಮತ್ತು ಮೈಲಂಡ ಮುರುಳಿ ಮೇಲೆ ಜಾತಿ ನಿಂದನೆ ಹಾಗೂ ಹಲ್ಲೆ ಮಾಡಿರುವ ದೂರನ್ನು ನೀಡಿದ್ದು ಈಗಾ ಕಾಂಗ್ರೇಸ್ ಪಕ್ಷದ ಮುಖಂಡರ ಒತ್ತಡದ ಮೇರೆಗೆ ದೂರಿನ ಪ್ರಕರಣವನ್ನು ವಾಪಾಸ್ಸ ಪಡೆಯುವುದಾಗಿ ಕಾಂಗ್ರೇಸ್ ಮುಖಂಡ ಪ್ರಸನ್ನ ಕುಮಾರ್ ತಿಳಿಸಿದರು.
ನಗರೆದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠೀಯಲ್ಲಿ ಅವರು ಮಾತನಾಡಿ ಸೆ,೨೮ ರಂದು ನಂದಿನಿ ಪ್ರಾಲೇಸ್ ಕಾಂಗ್ರೇಸ್ ಸಭೆಯಲ್ಲಿ ಉಂಟಾದ ಗಲಭೆ ಸಂದರ್ಭದಲ್ಲಿ ಮಾಜಿ ಸಭಾಪತಿ ವಿ,ಆರ್,ಸುದರ್ಶನ್ ಅವರು ನನ್ನನ್ನು ಯಾರು ಗಲಭೆ ಮಾಡುತ್ತಿರುವುದು ಎಂದು ಪ್ರಶ್ನಿಸಿದರು ಆಗಾ ನಾನು ಶಾಸಕರ ಮತ್ತು ವಿಧಾನ ಪರಿಷತ್ ಸದಸ್ಯ ಬೆಂಬಲಿಗರ ಗಲಭೆ ಎಂದು ಹೇಳಿದಾಗ ಇಬ್ಬರ ಕಡೆಯವರು ಸೇರಿ ಗಲಭೆ ಮಾಡುತ್ತಿದ್ದಾರೆ ಎಂದು ಹೇಳಿದಾಗ ಪಕ್ಕದಲೇ ಇದ್ದ ಇವರುಗಳು ನನ್ನ ಮೇಲೆ ಏಕಾಏಕಿ ತಳ್ಳುವುದು ನೊಕುವುದು ಮಾಡಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದರು, ನಾನು ಸತ್ಯ ಹೇಳಿದ್ದೇ ತಪ್ಪು ಎಂಬಂತೆ ಹಲ್ಲೆ ಮಾಡಿದ್ದಾರೆ, ಈ ಸಂದರ್ಭದಲ್ಲಿ ಶಾಸಕರಾದ ಕೊತ್ತೂರು ಮಂಜುನಾಥ್ ಮತ್ತು ವಿಧಾನ ಪರಿಷತ್ ಸದಸ್ಯರಾದ ಎಂ.ಎಲ್.ಅನಿಲ್ ಕುಮಾರ್ ಅವರುಗಳ ಇಚ್ಚಾ ಕೊರತೆಯಿಂದ ಗಲಭೆಯನ್ನು ನಿಯಂತ್ರಿಸುವಲ್ಲಿ ವಿಫಲಾದರು ಎಂದು ಬೇಸರ ವ್ಯಕ್ತ ಪಡೆಸಿದರು,
ಕಾಂಗ್ರೇಸ್ ಪಕ್ಷದಲ್ಲಿ ಕೆ.ಹೆಚ್.ಮುನಿಯಪ್ಪ ಹಾಗೂ ಕೆ.ಆರ್.ರಮೇಶ್ ಕುಮಾರ್ ಎರಡು ಬಣಗಳಾಗಿರುವುದು ಪ್ರಚಲಿತವಾಗಿದೆ. ಪ್ರತಿಯೊಂದು ಸಭೆಯಲ್ಲೂ ಎರಡು ಗುಂಪುಗಳ ನಡುವೆ ಪೈಪೋಟಿ ಇದ್ದು ಕಾಂಗ್ರೇಸ್ ಪಕ್ಷದ ಸಂಘಟನೆಗೆ ತೊಡಕಾಗಿದೆ. ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕಳೆದ ೬-೭ ವರ್ಷಗಳಿಂದಲೂ ಕಾಂಗ್ರೇಸ್ ಪಕ್ಷಕ್ಕೆ ಕಾಂಗ್ರೇಸ್ಸೇ ಶತ್ರು ಎಂಬಂತಾಗಿದೆ ಎಂದು ಆರೋಪಿಸಿದರು,
ಪ್ರಶ್ನೆಯೊಂದಕ್ಕೆ ಜಿಲ್ಲಾ ಕಾಂಗ್ರೇಸ್ ಅಧ್ಯಕ ಲಕ್ಷ್ಮೀನಾರಾಯಣ ಮತ್ತು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪ್ರಸಾದ್ ಬಾಬು ಮೇಲೆ ಹಲ್ಲೆ ಮಾಡಿರುವುದನ್ನು ಖಂಡಿಸುತ್ತೇನೆ. ಊರಟಿ ಆಗ್ರಹಾರದ ಚೌಡರೆಡ್ಡಿ ಅವರು ಅವಾಚ್ಯ ಶಬ್ದಗಳಿಂದ ಜಾತಿಯನ್ನು ನಿಂದಿಸಿ ಹಲ್ಲೆ ಮಾಡಿದರು, ಇದಕ್ಕೆ ಪೂರಕವಾಗಿ ಮೈಲಾಂಡಹಳ್ಳಿ ಮುರಳಿ ಅವರು ನನ್ನನ್ನೆ ಅಕ್ಷೇಪಿಸಿದರು ಇದರಿಂದ ನನ್ನ ಮನಸ್ಸಿಗೆ ತೀವ್ರ ಅಘಾತವುಂಟು ಮಾಡಿದೆ. ಈ ಘಟನೆಯ ಮೂರು ದಿನಗಳ ನಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೆ ಎಂದು ವಿವರಿಸಿದರು,
ನಾನು ಕಟ್ಟಾ ಸಿದ್ದರಾಮಯ್ಯನವರ ಅಭಿಮಾನಿ, ಶಾಸಕರಾದ ಕೊತ್ತೂರು ಮಂಜುನಾಥ್ ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಎಲ್. ಅನಿಲ್ ಕುಮಾರ್ ಅವರ ಪರವಾಗಿ ಚುನಾವಣೆಗಳಲ್ಲಿ ಕಾರ್ಯನಿರ್ವಹಿಸಿದ್ದೇನೆ. ನನಗೂ ಅವರಿಗೂ ಯಾವೂದೇ ಭಿನ್ನಾಭಿಪ್ರಾಯಗಳಿಲ್ಲ. ನಾನು ಅವರ ಬೆಂಬಲಿಗನೇ ಅದರೂ ಏಕೋ ಏನು ಇತ್ತೀಚೆಗೆ ಬಂದವರು ಅವರಿಗೆ ಹತ್ತಿರವಾಗಿದ್ದು ನಾವುಗಳು ದೊರವಾಗಿದ್ದೇವೆ. ಏನೇ ಅದರೂ ನಾನು ಕಾಂಗ್ರೇಸ್ ಪಕ್ಷದ ಪ್ರಮಾಣಿಕ ಕಾರ್ಯಕರ್ತನಾಗಿದ್ದೇನೆ. ಸಿದ್ದರಾಮಯ್ಯನವರು ನನ್ನನ್ನು ಗುರುತಿಸಿ ನನಗೆ ಕೂಡ ಅಧ್ಯಕ್ಷ ಸ್ಥಾನ ನೀಡಲು ಮುಂದಾಗಿದ್ದರು ಅದರೆ ಆಲ್ಪಸಂಖ್ಯಾತರಿಗೆ ನೀಡ ಬೇಕೆಂದು ವಿಧಾನ ಪರಿಷತ್ ಸದಸ್ಯ ನಸ್ಸೀರ್ ಆಹಮದ್ ಅವರು ಒತ್ತಡ ಹೇರಿದ್ದರಿಂದ ಅವಕಾಶ ವಂಚಿತನಾದೆ.ಮುಂದಿನ ದಿನಗಳಲ್ಲಾದರೂ ನನಗೆ ಉತ್ತಮ ಸ್ಥಾನಮಾನ ಸಿಗುವದೆಂಬ ನಿರೀಕ್ಷೆ ಇಟ್ಟು ಕೊಂಡಿರುವೆ ಎಂದರು.