ಜನರ ಸಮಸ್ಯೆ ಅರಿಯಲು ವಾರ್ಡ್ ಸಮಿತಿ ರಚಿಸಿ: ದಾನೇಶ ಅವಟಿ
ಸಂಜೆವಾಣಿ ವಾರ್ತೆ,
ವಿಜಯಪುರ,ಅ.೬:ಕಡ್ಡಾಯ ಮತ್ತು ಸಂವಿಧಾನಬದ್ಧ ನಾಗರಿಕರ ಹಕ್ಕಾದ ಮಹಾನಗರ ಪಾಲಿಕೆಯಿಂದ ಕೂಡಲೇ ಪ್ರತಿ ವಾರ್ಡ್ನಲ್ಲಿ ವಾರ್ಡ ಸಮಿತಿ ರಚಿಸಲು ವಾರ್ಡ್ ಸಮಿತಿ ಬಳಗದ ಜಿಲ್ಲಾ ಸಂಚಾಲಕ, ನ್ಯಾಯವಾದಿ ದಾನೇಶ ಅವಟಿ ಅವರು ಮಹಾನಗರ ಪಾಲಿಕೆಯ ಆಯುಕ್ತರಿಗೆ ಒತ್ತಾಯಿಸಿದ್ದಾರೆ.
ನಗರದ ರೈಲು ನಿಲ್ದಾಣ ರಸ್ತೆಯ ಅನೌಪಚಾರಿಕ ಶಿಕ್ಷಣ ಸಂಸ್ಥೆಯ ನವ ಚೈತನ್ಯ ಸಭಾಂಗಣದಲ್ಲಿ ವಿಜಯಪುರ ನಗರ ಸ್ಲಂ ಅಭಿವೃದ್ದಿ ಒಕ್ಕೂಟ (ರಿ) ವಿಜಯಪುರ ವತಿಯಿಂದ ಏರ್ಪಡಿಸಿದ್ದ ಮಹಾನಗರ ಪಾಲಿಕೆಯ ವಾರ್ಡ್ ಸಮಿತಿ ರಚನೆ ಮತ್ತು ನಾಗರಿಕರ ಸಬಲೀಕರಣ ಕುರಿತು ಮಹತ್ವಪೂರ್ಣ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ‍್ಯ ಬಂದು ಎಪ್ಪತ್ತೇಳು ವರ್ಷ ಕಳೆದರೂ ಸಾರ್ವಜನಿಕರು ಇನ್ನೂ ನೀರು, ರಸ್ತೆ, ಬೀದಿ ದೀಪ, ಮೂಲಭೂತ ಸೌಕರ್ಯಗಳನ್ನು ಪಡೆಯಲು ಬೀದಿಗಿಳಿದು ಹೋರಾಟ ಮಾಡುತ್ತಿರುವುದು ದುರ್ದೈವದ ಸಂಗತಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕರು ತಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ಅರಿತು. ಆಡಳಿತದಲ್ಲಿ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಪ್ರಾಮಾಣಿಕವಾಗಿ ಶ್ರಮಿಸುವುದು ಅತ್ಯವಶ್ಯ. ಕಾರಣ ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ರಚನೆಗೊಳ್ಳುವ, ಜನಪ್ರತಿನಿಧಿಗಳು, ಅಧಿಕಾರಿಗಳು ಸಾರ್ವಜನಿಕರ ನಡುವೆ ಕೊಂಡಿಯಾಗಿ ಕಾರ್ಯ ನಿರ್ವಹಿಸುವ ನಗರ ವಾರ್ಡ್ ಸಮಿತಿ ರಚನೆಗೆ ನಾಗರಿಕರೆಲ್ಲರೂ ಕೈ ಜೋಡಿಸಬೇಕೆಂದು ವಿನಂತಿಸಿದರು.
ವಿಜಯಪುರ ನಗರ ಸ್ಲಂ ಅಭಿವೃದ್ಧಿ ಒಕ್ಕೂಟದ ಅಧ್ಯಕ್ಷ ಅಕ್ರಂ ಮಾಶ್ಯಾಳಕರ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿ, ಮಹಾತ್ಮ ಗಾಂಧೀಜಿ ಲಾಲ್ ಬಹದ್ದೂರ್ ಶಾಸ್ತಿçÃಜಿ ಅವರಂಥ ಮಹಾನ್ ಸ್ವಾತಂತ್ರ‍್ಯ ಹೋರಾಟಗಾರರ ಸತ್ಯ, ಶಾಂತಿ, ತ್ಯಾಗ ಹಾಗೂ ಬಲಿದಾನ ಮೂಲಕ ರಕ್ತಪಾತವಿಲ್ಲದೆ ಈ ದೇಶಕ್ಕೆ ಸ್ವಾತಂತ್ರ‍್ಯ ದೊರಕಿದೆ. ಅದನ್ನು ನಾವು ಬಳಸುವಾಗ ಅವರ ಉದ್ದೇಶ ತತ್ವ ಸಿದ್ಧಾಂತ ಅರಿತು ಅಳವಡಿಸಿಕೊಂಡು ಜೀವನ ಮಾಡಬೇಕು. ನಗರದ ಪ್ರತಿ ವಾರ್ಡ್ನಲ್ಲಿ ಸ್ಲಂ ಸಮಿತಿಗಳಿದ್ದು, ವಾರ್ಡ್ ಸಮಿತಿ ರಚನೆ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಿ. ಮಹಾನಗರ ಪಾಲಿಕೆಯ ಆಯುಕ್ತರು, ಮೇಯರ್, ಉಪ ಮೇಯರ್ ಎಲ್ಲ ಸದಸ್ಯರಿಗೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸೋಣ. ನಮ್ಮ ಸಮಿತಿ ಪ್ರತಿಯೊಂದು ನಗರ ಅಭಿವೃದ್ದಿ ಕಾರ್ಯಗಳಲ್ಲಿ ಸಹಕರಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅನೌಪಚಾರಿಕ ಶಿಕ್ಷಣ ಸಂಸ್ಥೆಯ ಸಹ ನಿರ್ದೇಶಕÀ ಫಾದರ್‌ಸುಮನ್ ಬಾಲು ಮಾತನಾಡಿದರು.
ಇದೇ ಸಂದರ್ಭದಲ್ಲಿ ಜನಾಗ್ರಹ ಸಂಸ್ಥೆಯವರು ಪ್ರಕಟಿಸಿದ “ನನ್ನ ನಗರ ನನ್ನ ಜವಾಬ್ದಾರಿ” ನಾಗರಿಕ ಕೈಪಿಡಿಯನ್ನು ಅನೌಪಚಾರಿಕ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಿಗೆ ಸಮರ್ಪಿಸಲಾಯಿತು.
ಈ ಸಂದರ್ಭದಲ್ಲಿ ಸಿಸ್ಟರ್ ಜಯಾ, ರಮೇಶ ಬಿದರಿ, ರವಿ ಕಟ್ಟಿಮನಿ, ಶ್ರೀಧರ ಕನ್ನೂರ, ಮೀನಾಕ್ಷಿ ಕಾಲೇಬಾಗ, ರೇಷ್ಮಾ ಪಡಗಾನೂರ, ಹಮೀದಾ ಪಟೇಲ್, ಮಾಲನ್ ಮುಜಾವರ ಮುಂತಾದವರಿದ್ದರು.
ಸ್ಲA ಅಭಿವೃದ್ದಿ ಸಮಿತಿ ನಗರ ಅಧ್ಯಕ್ಷ ಮುತ್ತು ಭೋವಿ ಸ್ವಾಗತಿಸಿದರು. ಜಯಶ್ರೀ ಚಲವಾದಿ ಸಂವಿಧಾನ ಪೀಠಿಕೆ ಬೋಧಿಸಿದರು. ಕಾಮಿನಿ ಕಸಭೆ ನಿರೂಪಿಸಿದರು. ರೇಣುಕಾ ಕೋಟ್ಯಾಳ ವಂದಿಸಿದರು.