ಉತ್ತಮ ಮಳೆ ಬೆಳೆಗಾಗಿ ಧಾರ್ಮಿಕ ಕಾರ್ಯಕ್ರಮಗಳಿಗೆ ಒತ್ತು ನೀಡಿ, ರಾಜೀಬ್ ಗೌಡ
ಶಿಡ್ಲಘಟ, ಅ.೬- ಕ್ಷೇತ್ರದ ಜನತೆಯ ಒಳಿತಿಗಾಗಿ ದೇವತೆಗಳ ಆರಾಧನೆ ಮಾಡುವುದರ ಮೂಲಕ ಉತ್ತಮ ಮಳೆ ಬೆಳೆಯಾಗಿ ಬರಗಾಲದ ಕಷ್ಟಗಳು ದೂರವಾಗಲಿ ಎಂದು ಶ್ರೀ ಮಹೇಶ್ವರಮ್ಮ ದೇವಿಗೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ವಿಶೇಷ ಪೂಜೆ ಸಲ್ಲಿಸಿ ವಿಶೇಷ ಪೂಜೆ ಸಲ್ಲಿಸಿದರು.
ನಗರದ ೧೦ನೇ ವಾರ್ಡಿನ ಒಂದನೇ ನಗರ್ತಪೇಟೆಯಲ್ಲಿ ನೆಲೆಸಿರುವ ಶಕ್ತಿ ದೇವತೆ ಶ್ರೀ ಮಹೇಶ್ವರಮ್ಮ ದೇವಿ ನೂತನ ವಿಗ್ರಹ ಮೂರ್ತಿಯನ್ನು ಪುನರ್ ಪ್ರತಿಷ್ಠಾಪನಾ ಮಹೋತ್ಸವವು ನಡೆಯುತ್ತಿದ್ದು ಇಂದಿಗೆ ೪೮ ನೇ ದಿನದ ಮಂಡಲ ಪೂಜೆ ಹಾಗೂ ನವರಾತ್ರಿ ಪೂಜೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.
ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರಾಜೀವ್ ಗೌಡರು ಮಳೆಯಿಲ್ಲದೆ ಬೆಳೆಇಲ್ಲದೆ ಕ್ಷೇತ್ರದ ಜನತೆ ಸಂಕಷ್ಟಕ್ಕೆ ಸಿಲುಕಿರುವುದರಿಂದ ಉತ್ತಮ ಮಳೆ ಬೆಳೆಯಾಗಿ ಕ್ಷೇತ್ರದ ಜನತೆ ಸುಭೀಕ್ಷೆಯಿಂದಿರಲಿ ಭೂಮಿ ತಾಯಿಯ ಮಡಿಲು ತಂಪಾಗಿ ಕ್ಷೇತ್ರದ ಜನರ ಕಷ್ಟಗಳು ದೂರವಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದರು.
ಸಂದರ್ಭದಲ್ಲಿ ಅಪೇಗೌಡನಹಳ್ಳಿ ಮಂಜುನಾಥ್, ಯೂತ್ ಕಾಂಗ್ರೆಸ್ ಅಧ್ಯಕ್ಷ ನರೇಂದ್ರ, ಕುದುಲುಗುರ್ಕಿ ಮುನೀಂದ್ರ, ಮುತ್ತೂರು ವೆಂಕಟೇಶ್, ನಾಗನರಸಿಂಹ, ದೇವಾಲಯದ ಅಧ್ಯಕ್ಷ ಎಂ.ಮಂಜುನಾಥ್, ಮಾಜಿ ನಗರ ಸಭಾ ಸದಸ್ಯ ಬಾಲಕೃಷ್ಣ, ಶಿವಕುಮಾರ್, ರಾಜು, ಸುಬ್ರಮಣಿ, ಸೇರಿದಂತೆ ಅನೇಕ ಭಕ್ತಾದಿಗಳು ಹಾಜರಿದ್ದರು.