ಗ್ರಾಮ ಪಂಚಾಯಿತಿಗೆ ಉಚಿತವಾಗಿ ಜಾಗ ನೀಡಿದ ಮಾಜಿ ಸಚಿವ ಎಸ್.ಎನ್.ಕೃಷ್ಣಯ್ಯ ಶೆಟ್ಟಿ
ಆನೇಕಲ್, ಅ.೬-ಬಿದರಗುಪ್ಪೆ ಗ್ರಾಮದಲ್ಲಿರುವ ಟೆಲಿಕಾಂ ಲೇವಟ್‌ನಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಸುಮಾರು ೪೦ ಲಕ್ಷ ರೂಪಾಯಿ ಬೆಲೆ ಬಾಳುವ ಜಾಗವನ್ನು ಉಚಿತವಾಗಿ ಮಾಜಿ ಸಚಿವರಾದ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಬಿದರಗುಪ್ಪೆ ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡಿದರು.
ವಿಶೇಷವಾಗಿ ಮಾಜಿ ಸಚಿವರಾದ ಎಸ್.ಎನ್. ಕೃಷ್ಣಯ್ಯ ಶೆಟ್ಟಿ ರವರ ೬೫ನೇ ವರ್ಷದ ಹುಟ್ಟು ಹಬ್ಬ ಅಂಗವಾಗಿ ಸಾರ್ವಜನಿಕರಿಗೆ ದಿನಸಿ ಕಿಟ್ ವಿತರಣೆ, ಮಹಿಳೆಯರಿಗೆ ಸೀರೆ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಬಿದರಗುಪ್ಪೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಬಿ. ರಾಜೇಶ್. ಬಿದರಗುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನುಪಮ ನಾರಾಯಣ್, ಮಾಜಿ ಅಧ್ಯಕ್ಷ ಶಿವಕುಮಾರ್, ಮುಖಂಡರಾದ ಅತ್ತಿಬೆಲೆ ಮುನಿರಾಜು. ರಾಮ್ ಮಾರ್ತಿ, ಬಾಲಾಜಿ. ಸಂತೋಷ್. ಪಂಚಾಯಿತಿ ಕಾರ್ಯದರ್ಶಿ ರಾಮ್ ಪ್ರಸಾದ್ ಮತ್ತು ಸಿಲ್ಕ್ ಪಾರಂ ನ ಯುವಕರು. ಸಾರ್ವಜನಿಕರು. ಸ್ಥಳೀಯ ಮುಖಂಡರುಗಳು, ಪಂಚಾಯಿತಿ ಸಿಬ್ಬಂದಿ ವರ್ಗದವರು ಬಾಗವಹಿಸಿದ್ದರು.