ದರಬಾರ ಕಾಲೇಜಿನಲ್ಲಿ ಉದ್ಯೋಗ ಮೇಳ: ೩೨ ಅಭ್ಯರ್ಥಿಗಳು ವಿವಿಧ ಹುದ್ದೆಗಳಿಗೆ ಆಯ್ಕೆ
ಸಂಜೆವಾಣಿ ವಾರ್ತೆ,
ವಿಜಯಪುರ,ಅ.೬:ಇಲ್ಲಿನ ಕುಮುದಬೇನ ದರಬಾರ ಮಹಾವಿದ್ಯಾಲಯದಲ್ಲಿ ಜಿಲಾ ್ಲಉದ್ಯೋಗ ವಿನಿಯಮಕೇಂದ್ರ ಮತ್ತು ಹುಬ್ಬಳ್ಳಿ ಚೇತನÀಬಿ ಸ್ಕೂಲ್ ಇವg Àಸಹಯೋಗದೊಂದಿಗೆ ಬುಧವಾರ ಉದ್ಯೋಗ ಮೇಳ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಜಿಲ್ಲಾ ಉದ್ಯೋಗ ಅಧಿಕಾರಿ ಹಿರೇಮಠ ಅವರು ಅಭ್ಯರ್ಥಿಗಳನ್ನು ಉದ್ದೇಶಿಸಿ ಮಾತನಾಡಿಈ ಭಾಗದ ಅಭ್ಯರ್ಥಿಗಳಲ್ಲಿ ಶಿಕ್ಷಣದ ಕೊರತೆ ಇಲ್ಲ. ಸಂಪರ್ಕದ ಮತ್ತು ಆಸ್ತಕಿಯ ಕೊರತೆ ಇದೆ ಹಾಗೂ ವಿದ್ಯಾರ್ಥಿಗಳು ಅವಕಾಶಗಳ ಸದುಪಯೋಗ ಪಡೆಯಬೇಕು. ಯಾವುದೇ ಪ್ರಶ್ನೆಯನ್ನು ಎದುರಿಸುವ ಸಾಮರ್ಥ್ಯ ಹೊಂದಿರಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಹುಬ್ಬಳ್ಳಿಯ ಚೇತನಬಿ ಸ್ಕೂಲ್‌ನ ರಮಾಕಾಂತ ಕುಲಕರ್ಣಿ ಅವರು ಅಭ್ಯರ್ಥಿಗಳಿಗೆ ತಂತ್ರಜ್ಞಾನದ ಉಪಯೋಗ ಪಡೆಯಲು ಕರೆ ನೀಡಿದರು.
ಕಾಲೇಜಿನ ಪ್ರಾಚಾರ್ಯ ಡಾ. ವ್ಹಿ.ಬಿ. ಗ್ರಾಮಪುರೋಹಿತ ಸ್ವಾಗತಿಸಿದರು.ಸಂಸ್ಥೆಯ ಅಧ್ಯಕ್ಷ ರಾಜೇಶ ದರಬಾರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿ ವರ್ಷ ಈ ರೀತಿಯಾದ ಉದ್ಯೋಗ ಮೇಳವನ್ನು ದರಬಾರ ಸಂಸ್ಥೆಯಲ್ಲಿ ಆಯೋಜಿಸಲಾಗುತ್ತಿದೆ. ಇದರ ಸದುಪಯೋಗವನ್ನು ಸಾಕಷ್ಟು ವಿದ್ಯಾರ್ಥಿಗಳು ಪಡೆದುಕೊಂಡು ಜೀವನವನ್ನು ರೂಪಿಸಿಕೊಂಡಿದ್ದಾರೆ ಎಂದು ಹೇಳಿದರು.
ಉದ್ಯೋಗ ಮೇಳದಲ್ಲಿ ೧೫ ಕಂಪನಿಗಳು ಮತ್ತು ಸುಮಾರು ೨೫೦ ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಭಾಗವಹಿಸಿದ್ದರು. ಅದರಲ್ಲಿ ೩೨ ಅಭ್ಯರ್ಥಿಗಳು ವಿವಿಧ ಹುದ್ದೆಗಳಿಗೆ ಆಯ್ಕೆಯಾದರು.