ಡಿಪ್ಲೋಮಾ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ
ಈಗಾಗಲೇ ಎಸ್.ಎಸ್.ಎಲ್.ಸಿ. ಮುಖ್ಯ ಪರೀಕ್ಷೆ ಪಾಸಾದ ವಿದ್ಯಾರ್ಥಿಗಳು ಡಿಪ್ಲೋಮಾ ಪ್ರವೇಶ ಪಡೆದಿದ್ದು, ಪ್ರಸ್ತುತ ಡಿಪ್ಲೋಮಾ ಇನ್ ಆಟೋಮೋಬೈಲ್ ಇಂಜಿನಿಯರಿAಗ್ ವಿಭಾಗದಲ್ಲಿ ೩೭ ಸೀಟುಗಳು ಹಾಗೂ ಡಿಪ್ಲೋಮಾ ಇನ್ ಕಮರ್ಷಿಯಲ್ ಪ್ರಾö್ಯಕ್ಟೀಸ್(ಇಂಗ್ಲೀಷ್) ವಿಭಾಗದಲ್ಲಿ ೦೪ ಸೀಟುಗಳು ಉಳಿದಿದ್ದು, ಈ ಸೀಟುಗಳಿಗಾಗಿ ಎಸ್.ಎಸ್.ಎಲ್.ಸಿ.ಪೂರಕ ಪರೀಕ್ಷೆ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದೆಂದು ತಿಳಿಸಿದ್ದಾರೆ.
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಅಗಸ್ಟ್-೦೬ ಆಗಿದ್ದು, ಅರ್ಹ ಅಭ್ಯರ್ಥಿಗಳು ಸರ್ಕಾರಿ ಪಾಲಿಟೆಕ್ನಿಕ್, ಮೈಲೂರು ಬೀದರ ಇಲ್ಲಿ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ, ಅರ್ಜಿಯೊಂದಿಗೆ ಎಸ್.ಎಸ್.ಎಲ್.ಸಿ. ಅಂಕಪಟ್ಟಿ, ವರ್ಗಾವಣೆ/ಬೊನಾಫೈಡ್ ಪ್ರಮಾಣಪತ್ರ, ೧ ರಿಂದ ೧೦ ತರಗತಿವರೆಗೆ ಓದಿರುವ ವ್ಯಾಸಂಗ ಪ್ರಮಾಣಪತ್ರ, ಕನ್ನಡ ಮಾಧ್ಯಮ ಪ್ರಮಾಣ ಪತ್ರ, ಗ್ರಾಮೀಣ ಪ್ರಮಾಣಪತ್ರ, ೩೭೧(ಜೆ) ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ ಕಾರ್ಡ ಹಾಗೂ ೬ ಭಾವಚಿತ್ರಗಳನ್ನು ಸಲ್ಲಿಸತಕ್ಕದ್ದೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.