ಮನುಷ್ಯನಿಗೆ ಆರೋಗ್ಯ ಬಹಳ ಮುಖ್ಯ
ಸಂಜೆವಾಣಿ ವಾರ್ತೆ
ನಂಜನಗೂಡು: ಆ.01:- ದಿ.ಧ್ರುವನಾರಾಯಣ್ ರವರ 63ನೇ ಜನ್ಮದಿನಾಚರಣೆ ಅಂಗವಾಗಿ ಇಂದು ಅವರ ನೆನಪಿಗಾಗಿ ಲಯನ್ಸ್ ಕ್ಲಬ್ ಅರವಿಂದ ಕಣ್ಣಿನ ಆಸ್ಪತ್ರೆ, ಕೊಯಂಬತ್ತೂರ್ ನಾರಾಯಣ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಬಿಪಿ ಶುಗರ್ ಕಣ್ಣಿನ ತಪಾಸಣೆ ಹಾಗೂ ಸಾಮಾನ್ಯ ತಪಾಸಣೆ ಮತ್ತು ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮವನ್ನು ಮಾಜಿ ಸಂಸದ ಡಿಕೆ ಸುರೇಶ್ ಮತ್ತು ಶಾಸಕ ದರ್ಶನ್ ಧ್ರುವನಾರಾಯಣ್ ಲಯನ್ಸ್ ಕ್ಲಬ್ ಅಧ್ಯಕ್ಷ ಮಹಾದೇವು ಧ್ರುವ ನಾರಾಯಣ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು
ಚಾಮರಾಜನಗರ ಬೈಪಾಸ್ ರಸ್ತೆಯಲ್ಲಿರುವ ಶ್ರೀ ಮಾದೇಶ್ವರ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು. ಕಣ್ಣಿಗೆ ಸಂಬಂಧ ಪಟ್ಟಂತೆ ತೊಂದರೆ ಸುಮಾರು 35 ಮಂದಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಕೊಯಮತ್ತೂರಿಗೆ ಕಳಿಸಲಾಯಿತು ನೂರ ಐವತ್ತು ಹೆಚ್ಚು ಮಂದಿ ಕಣ್ಣಿನ ತಪಾಸಣೆ ಮಾಡಿಸಿಕೊಂಡರು 30ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು ಇದಲ್ಲದೆ ನೂರಾರು ಜನರು ಬಿಪಿ ಶುಗರ್ ಹಾಗೂ ಜನರಲ್ ಚೆಕಪ್ ನಲ್ಲಿ ಚಿಕಿತ್ಸೆ ಪಡೆದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಾಸಕ ದರ್ಶನ್ ದ್ರುವ ನಾರಾಯಣ್ ಸಂಘ ಸಂಸ್ಥೆಗಳು ಇಂಥ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಆರಂಭಿಸಬೇಕು ಇದರಿಂದ ಬಡವರಿಗೆ ಸೇರಿದಂತೆ ಎಲ್ಲರಿಗೂ ಕೂಡ ಆರೋಗ್ಯ ದಿಂದ ಇರಲು ಸಾಧ್ಯವಾಗುತ್ತದೆ ಮನುಷ್ಯನಿಗೆ ಆರೋಗ್ಯ ಬಹಳ ಮುಖ್ಯ ಪ್ರತಿದಿನ ಸಮಯಕ್ಕೆ ತಕ್ಕಂತೆ ಮಿತವಾದ ಆಹಾರ ಸೇವಿಸಿ ಆರೋಗ್ಯದಿಂದಿರಲು ಅನುಕೂಲವಾಗುತ್ತದೆ ಪ್ರತಿಯೊಬ್ಬರು ಕೂಡ ಒತ್ತಡದಿಂದ ದೂರ ಇದ್ದರೆ ಮನುಷ್ಯ ಆರೋಗ್ಯದಿಂದ ಇರಬಹುದು ಎಂದರು.
ಲಯನ್ ಅಧ್ಯಕ್ಷ ಮಹಾದೇವ ಮಾತನಾಡಿ ನಮ್ಮ ಲಯನ್ಸ್ ಸಂಸ್ಥೆಯು ಪ್ರತಿ ಸಾರಿ ಕೂಡ ಇಂತಹ ಕಾರ್ಯಕ್ರಮಗಳನ್ನು ಮಾಡುತ್ತೇವೆ ಮುಂದೇನು ಕೂಡ ಇಂಥ ಕಾರ್ಯಕ್ರಮವನ್ನು ಹೆಚ್ಚು ಹೆಚ್ಚು ಮಾಡಲು ಪ್ರಾರಂಭಿಸುತ್ತೇವೆ ಎಂದರು
ಲಯನ್ಸ್ ಅಧ್ಯಕ್ಷ ಮಹದೇವ, ಮಾಜಿ ಅಧ್ಯಕ್ಷರುಗಳಾದ ಮಂಜುನಾಥ್, ಉಮೇಶ್, ಬಸವಣ್ಣ, ನಾಗರಾಜ್, ಮೇಷ್ಟ್ರು, ಶ್ರೀನಿವಾಸ್ ಮೂರ್ತಿ, ವಿಜಯ್ ಕುಮಾರ್, ಡಾ. ಶಿವಕುಮಾರ್, ನಂಜುಂಡಸ್ವಾಮಿ, ಬುದ್ಧಿವಂತ, ನಂಜುಂಡಸ್ವಾಮಿ, ಅಂಬಿ ಸೇರಿದಂತೆ ಇತರರು ಇದ್ದರು