ಬೀದರ್ ತಾಲೂಕು ವಿವಿಧ ಗ್ರಾಮಗಳಿಗೆ ಲವಿಶ ಓರ್ಡಿಯಾ ಭೇಟಿ
ಬೀದರ್: ಆ.೧:ತಾಲ್ಲೂಕ ಸಹಾಯಕ ಆಯುಕ್ತ ಲವೀಶ್ ಓರ್ಡಿಯಾ ಬುಧವಾರ ಚಟ್ನಳ್ಳಿ, ಕಾಡವಾದ, ಮತ್ತು ಮರಕುಂದಾ ಗ್ರಾಮಗಳಿಗೆ ಬೇಟಿ ನೀಡಿ, ಜೆಜೆಎಮ್,ಕೆಕೆಆರ್ ಡಿಬಿ ಎಸ್‌ಬಿಎಮ್, ಸಿಸಿ ರಸ್ತೆ, ಚರಂಡಿ ಕಾಮಗಾರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಪರಿಶೀಲನೆ ನಡೆಸಿದರು.
ನೀರು ಸರಬರಾಜಾಗುವ ನೀರಿನ ಟ್ಯಾಂಕ್, ಚರಂಡಿ, ಸೇರಿದಂತೆ ಗ್ರಾಮಗಳಲ್ಲಿ ತ್ಯಾಜ್ಯ ಶೇಖರಣೆಯಾಗದಂತೆ ನಿಗಾವಹಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಬೀದರ ತಾಲ್ಲೂಕಿನ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಕೀರಣ ಪಾಟೀಲ್, ಪಿಡಿಓಗಳಾದ ಪರಿಮಳ, ಶಿವಕುಮಾರ ಸೇರಿದಂತೆ ಸಂಬAಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.