ಮೂಲಭೂತ ಸೌಕರ್ಯ ಒಗದಿಸಲು ರಿಶೈನ್ ಸಂಸ್ಥೆಯಿAದ ಮನವಿ
ಬೀದರ:ಆ.೧: ನಗರದ ಮಾರ್ಕೇಟ್ ಪೋಲಿಸ್ ಠಾಣೆಯಿಂದ ಎಸ್.ಪಿ. ಕಚೇರಿಯವರೆಗೆ ರಸ್ತೆಯ ಪಕ್ಕದಲ್ಲಿ ಯು.ಜಿ.ಡಿ. ಕೆಲಸ ಮಾಡಿರುವುದರಿಂದ ಸದರಿ ರಸ್ತೆ ಹಾಳಾಗಿರುತ್ತದೆ. ಸದರಿ ರಸ್ತೆ ೩೨ ಅಡಿ ರಸ್ತೆ ಇದ್ದು, ಯುಜಿಡಿ ಕಾಮಗಾರಿ ತೋಡಿರುವುದರಿಂದ ೧೨ ಅಡಿ ರಸ್ತೆ ಉಪಯೋಗಕ್ಕೆ ಬರುವುದಿಲ್ಲ. ಬರಿ ೨೦ ಅಡಿ ರಸ್ತೆಯಲ್ಲಿ ಹೋಗುವ ಮತ್ತು ಬರುವ ವಾಹನಗಳಿಗೆ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅಲ್ಲದೇ ಸಣ್ಣ ಪುಟ್ಟ ರಸ್ತೆ ಅಪಘಾತಗಳು ಕೂಡ ಆಗಿರುತ್ತವೆ. ಅಲ್ಲದೇ ರಸ್ತೆ ಪಕ್ಕ ಶಾಲೆ ಇದ್ದು, ಶಾಲೆ ಬಿಟ್ಟ ನಂತರ ಶಾಲಾ ಮಕ್ಕಳು ಕೂಡ ತೊಂದರೆ ಅನುಭವಿಸುತ್ತಿದ್ದಾರೆ.
ಮಾರ್ಕೇಟ್ ಪೋಲಿಸ್ ಠಾಣೆಯಿಂದ ಎಸ್.ಪಿ. ಕಚೇರಿಯವರೆಗೆ ರಸ್ತೆಯ ಯು.ಜಿ.ಡಿ. ಮಾಡಿರುವ ಕಾಮಗಾರಿಯ ಪಕ್ಕದ ಕಡೆದ ಗಿಡ ಮರಗಳ
ಕೊಂಬೆ ಜೋತುಬಿದ್ದಿದ್ದು, ನಡೆದುಕೊಂಡು ಹೋಗುವ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.
ಮಾರ್ಕೇಟ್ ಪೋಲಿಸ್ ಠಾಣೆಯಿಂದ ಎಸ್.ಪಿ. ಕಚೇರಿಯವರೆಗೆ ವಿದ್ಯುತ್ ದೀಪ ಇಲ್ಲದ ಕಾರಣ ರಾತ್ರಿ ಸಮಯದಲ್ಲಿ ವಾಹನ ಸವಾರರಿಗೆ ಹಾಗೂ ಜನರಿಗೆ ಓಡಾಡಲು ತೊಂದರೆಯಾಗುತ್ತಿದೆ. ಆದಕಾರಣ ಸದರಿ ಮಾರ್ಕೇಟ್ ಪೋಲಿಸ್ ಠಾಣೆಯಿಂದ ಎಸ್.ಪಿ. ಕಚೇರಿಯವರೆಗೆ ವಿದ್ಯುತ್ ದೀಪ ಅಳವಡಿಸಬೇಕು ಹಾಗೂ ಮಂಗಲಪೇಟ್ ಬಸ್ ನಿಲ್ದಾಣದ ಪಕ್ಕದಲ್ಲಿ ಒಂದು ಹೈಮಾಸ್ ವಿದ್ಯುತ್ ದೀಪ ಅಳವಡಿಸಬೇಕೆಂದು ರಿಶೈನ್ ಸಂಸ್ಥೆಯ ಸಂಸ್ಥಾಪಕರಾದ ರೋಹನ ಕುಮಾರ ರವರು ಸಂಬAಧಪಟ್ಟ ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ.