ರೋಗಿಗಳಿಗೆ ಬೆಡ್ ಶೀಟ್ ನೀಡಿದ ಶಾಸಕ ದರ್ಶನ್ ದ್ರುವ
ಸಂಜೆವಾಣಿ ವಾರ್ತೆ
ನಂಜನಗೂಡು: ಆ.01:- ಶಾಸಕ ದರ್ಶನ್ ಧ್ರುವನಾರಾಯಣ್‍ರವರು ಬೆಳಿಗ್ಗೆ ಹೆಗ್ವಾಡಿ ಗ್ರಾಮಕ್ಕೆ ತೆರಳಿ ತಂದೆ ತಾಯಿಗೆ ಅಜ್ಜ ಅಜ್ಜಿಗೆ ಪೂಜ ಸಲ್ಲಿಸಿ ನಂತರ ಉದ್ಯೋಗ ಮೇಳ ರಕ್ತದಾನ ಶಿಬಿರಕ್ಕೆ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಕಾರ್ಯಕ್ರಮ ಮುಗಿಸಿ ರಾತ್ರಿ ಸರ್ಕಾರಿ ಆಸ್ಪತ್ರೆಯಲ್ಲಿ ದಿ.ಆರ್. ಧ್ರುವನಾರಾಯಣ್ ಅವರ 63ನೇ ಹುಟ್ಟುಹಬ್ಬದ ಹಿನ್ನೆಲೆ, ಆಸ್ಪತ್ರೆಯಲ್ಲಿ ರೋಗಿಗಳಿಗೆ ಬೆಡ್ ಶೀಟ್ ನೀಡಿದರು.
ನಂತರ ಮಾತನಾಡಿ ತಂದೆ ಹೆಸರಿನಲ್ಲಿ ಎಲ್ಲಾ ಕಡೆ ಅಭಿಮಾನಿಗಳು ಹಿತೈಷಿಗಳು ಪಕ್ಷದ ಮುಖಂಡರುಗಳು ರೋಗಿಗಳಿಗೆ ಹಾಲು ಹಣ್ಣು ಬ್ರೆಡ್ ವಿತರಣೆ ರಕ್ತದಾನ ಕಣ್ಣಿನ ತಪಾಸಣೆ ಮಾಡಿದ್ದಾರೆ ಇವರಿಗೆ ಧನ್ಯವಾದಗಳು ನಾನು ಕೂಡ ಕ್ಷೇತ್ರದಲ್ಲಿ ನಿರುದ್ಯೋಗ ನಿವಾರಣೆಗಾಗಿ ಉದ್ಯೋಗ ಮೇಳಗಳನ್ನು ಮಾಡಿದ್ದೇವೆ.
ಈ ಸಂದರ್ಭದಲ್ಲಿ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ ಮುಂದಿನ ಕೂಡ ತಂದೆ ಆಸೆಯಂತೆ ನಿರುದ್ಯೋಗ ನಿವಾರಣೆ ಮಾಡಲು ಅನೇಕ ಉದ್ಯೋಗ ಮೇಳಗಳನ್ನು ನಡೆಸುತ್ತೇನೆ ಎಂದರು ಇದೇ ರೀತಿ ನಿಮ್ಮೆಲ್ಲ ಸಹಕಾರ ಇರಲಿ ಮುಂದೆನೂ ನಾನು ಕೂಡ ತಂದೆಯಂತೆ ನಿಮ್ಮ ಜೊತೆಯಲ್ಲೇ ಇದ್ದು ನಿಮ್ಮೊಟ್ಟಿಗೆ ಕೆಲಸ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕಳಲೆ ಕೇಸುವ ಮೂರ್ತಿ, ಬ್ಲಾಕ್ ಅಧ್ಯಕ್ಷ ಕುರಹಟ್ಟಿ ಮಹೇಶ್, ಶಂಕರ್, ಶ್ರೀಕಂಠ ನಾಯಕ, ಆರ್. ಧ್ರುವನಾರಾಯಣ್ ಅಭಿಮಾನಿಗಳು ಉಪಸ್ಥಿತರಿದ್ದರು.