ವಿಷಯ ರಹಿತವಾದ ಆನಂದವನ್ನು ಅನುಭವಿಸುವುದೇ ಜೀವನ್ಮುಕ್ತಿ ಸ್ಥಿತಿಯು :ಕಾಶಿ ಜಗದ್ಗುರುಗಳು
ಕಲಬುರಗಿ: ಜು.31:ವಿಷಯ ರಹಿತವಾದ ಆನಂದವನ್ನು ಅನುಭವಿಸುವುದೇ ಜೀವನ್ಮುಕ್ತಿ ಸ್ಥೀತಿಯು ಎಂಬ ವಿಚಾರವನ್ನು ಶ್ರೀ ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.
ಅವರು ನಗರದ ಸೊಗಸನಗೇರಿಯ ಗುರುಶಾಂತಲಿAಗೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀ ಸಿದ್ಧಾಂತ ಶಿಖಾಮಣಿ ಪ್ರವಚನ ಕಾರ್ಯಕ್ರಮದಲ್ಲಿ ಆರ್ಶಿವಚನ ನೀಡುತ್ತಿದ್ದರು. ಸುಖವನ್ನು ಅನುಭವಿಸಬೇಕಾದರೆ ಶಬ್ದ ಸ್ಪರ್ಶಾದಿ ವಿಷಯಗಳನ್ನು ಆಶ್ರಯಿಸಬೇಕಾಗುತ್ತದೆ. ಅಂತೆಯೇ ಪ್ರತಿಯೊಂದು ಜೀವಿಗಳು ಶಬ್ದ, ಸ್ಪರ್ಶ, ರೂಪ, ರಸ, ಗಂಧ, ಎಂಬ ಪಂಚ ವಿಷಯಗಳನ್ನು ತನ್ನ ಪಂಚ ಜ್ಞಾನೇಂದ್ರಿಯಗಳ ಮುಖಾಂತರ ಸದಾ ಅನುಭವಿಸುತ್ತ ಸುಖವನ್ನು ಪಡೆಯುತ್ತಿರುತ್ತಾನೆ. ವಿಷಯಗಳಿಂದ ದೊರೆಯುವ ಈ ಸುಖವು ಕ್ಷಣಿಕವಾದುದು, ಶರೀರದಲ್ಲಿಯ ಇಂದ್ರಿಯಗಳ ಶಕ್ತಿಯ ಕ್ಷೀಣಿಸಿದ ಬಿಳಿಕ ವಿಷಯಗಳು ಎದುರಿನಲ್ಲಿದ್ದರೂ ಅದರ ಸುಖವನ್ನು ಜೀವಾತ್ಮನು ಪಡೆಯಲಾರ. ಎಲ್ಲಾ ವಿಷಯ ಸುಖಕ್ಕೆ ಕಾರಣವಾದ ಆತ್ಮಾನಂದವನ್ನು ಪಡೆಯಲು ವಿಷಯ ಹಾಗೂ ಇಂದ್ರಿಯಗಳ ಅವಶ್ಯಕತೆ ಇರುವುದಿಲ್ಲ. ಹೇಗೆ ನಿದ್ರಾವಸ್ಥೆಯಲ್ಲಿ ಯಾವುದೇ ವಿಷಯಗಳಿಲ್ಲದಿದ್ದರೂ ಪ್ರತಿಯೊಂದು ಜೀವಿಯು ತನ್ನ ಆತ್ಮದ ಆನಂದವನ್ನೇ ಅನುಭವಿಸುತ್ತಿರುತ್ತದೆಯೋ ಹಾಗೆ ಸಾಧನೆಯ ಬಲದಿಂದ ಅಂತರ್ಮುಖನಾದ ಸಾಧಕನು ತನ್ನ ಆತ್ಮದ ಆನಂದವನ್ನು ಅನುಭವಿಸುತ್ತಾ ಜೀವನ್ಮುಕ್ತಿಯ ವಿಲಕ್ಷಣವಾದ ಆನಂದವನ್ನು ಅನುಭವಿಸುವ ಸ್ಥಿತಿಯನ್ನು ಹೇಳುವ ಸ್ಥಳಗಳೇ ಲಿಂಗ ಸ್ಥಳಗಳು. ಶ್ರೀ ಸಿದ್ದಾಂತ ಶಿಖಾಮಣಿಯಲ್ಲಿ 57 ಸ್ಥಳಗಳಲ್ಲಿ ಈ ಜೀವನ್ಮುಕ್ತಿಯ ಸ್ಥಿತಿಯನ್ನು ವರ್ಣಿಸುತ್ತಾರೆ. ಜೀವನ್ಮುಕ್ತಿಯ ಸ್ಥಿತಿಯನ್ನು ತಿಳಿಸುವ ಸ್ಥಳಗಳಿಗೆ ಲಿಂಗ ಸ್ಥಳಗಳನ್ನು ಕರೆಯಲಾಗಿದೆ. ಶ್ರೀ ಸಿದ್ಧಾಂತ ಶಿಖಾಮಣಿಯಲ್ಲಿ ಬರುವ ಒಂದು 101 ಸ್ಥಳಗಳಲ್ಲಿ 44 ಅಂಗ ಸ್ಥಳಗಳನ್ನು ಉಳಿದ 57 ಸ್ಥಳಗಳು ಲಿಂಗ ಸ್ಥಳಗಳು ಎಂಬುದಾಗಿ ಶ್ರೀ ಸನ್ನಿಧಿಯವರು ನುಡಿದರು.
ಶಖಾಪೂರ ತಪೋವನ ಮಠದ ಡಾ. ಸಿದ್ಧರಾಮ ಶಿವಾಚಾರ್ಯರು ಮಾತನಾಡಿ ಮನುಷ್ಯನ ಬದುಕು ಒಳಿತು ಕೆಡಕುಗಳ ಸಂಮಿಶ್ರಣ. ಜ್ಞಾನ ಭಾಸ್ಕರನಾದ ಶ್ರೀ ಗುರುವಿನ ಕೃಪೆಗೆ ಎಲ್ಲರೂ ಪಾತ್ರರಾಗಬೇಕೆಂದು ನುಡಿದರು. ಕಡಗಂಚಿಯ ವೀರಭದ್ರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಪಾಳಾದ ಡಾ.ಗುರುಮೂರ್ತಿ ಶಿವಾಚಾರ್ಯರು, ಓಂಕಾರ ಸಿದ್ಧರೇಣುಕಾ ಶಿವಾಚಾರ್ಯರು, ರಾಯಚೂರಿನ ಅಭಿನವ ರೇಣುಕ ಶಿವಾಚಾರ್ಯರು, ಸುಲೇಪೇಟದ ಪಂಪಾಪತಿ ದೇವರು, ನಾಗರಾಜ ಮೈಲಾಪೂರ, ಸಂಜು ಜೋಗದರಾಠ, ಶಿವರುದ್ರಯ್ಯ ಗೌಡಗಾಂವ, ಪತ್ರಕರ್ತರಾದ ಚಂದ್ರಕಾAತ ಹಾವನೂರ ಇದ್ದರು. ಕಡಗಂಚಿಯ ಪಂಪಾಪತಿ ದೇವರು ಸ್ವಾಗತಿಸಿದರು. ಗುರುಲಿಂಗಯ್ಯಸ್ವಾಮಿ, ಮಹಾಂತಯ್ಯಸ್ವಾಮಿ ನಿಂಗದಳ್ಳಿ ಇವರಿಂದ ಸಂಗೀತ ಜರುಗಿತು. ಶಿವಯ್ಯಸ್ವಾಮಿ ಮಠಪತಿ ನಿರೂಪಿಸಿದರು.