ವರ್ತಕರ ಸಂಘದ ಅಧ್ಯಕ್ಷರಾಗಿ ಎನ್. ಶಂಕರ್, ಗೌರವ ಕಾರ್ಯದರ್ಶಿಯಾಗಿ ಚಿದಾನಂದಗಣೇಶ್ ಆಯ್ಕೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.01-ವರ್ತಕರ ಸಂಘದ 2024-25ನೇ ಸಾಲಿನ ಅಧ್ಯಕ್ಷರಾಗಿ ಎನ್. ಶಂಕರ್, ಗೌರವ ಕಾರ್ಯದರ್ಶಿಯಾಗಿ ಕೆ.ಎಸ್. ಚಿದಾನಂದ ಗಣೇಶ್ ಆಯ್ಕೆಯದರು.
ನಗರದ ಬಿ. ರಾಚಯ್ಯ ಜೋಡಿ ರಸ್ತೆಯಲ್ಲಿರುವ ವರ್ತಕರ ಭವನದ ಸಂಘದ ಕಚೇರಿ ಸಭಾಂಗಣದಲ್ಲಿ ನಡೆದ ಅಧ್ಯಕ್ಷ ಹಾಗೂ ನಾಲ್ವರು ಪದಾಧಿಕಾರಿಗಳ ಆಯ್ಕೆ ಚುನಾವಣೆ ನಡೆಯಿತು.
ವರ್ತಕರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಎನ್. ಶಂಕರ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರು ಅವಿರೋಧವಾಗಿ ಆಯ್ಕೆಯಾದರು. 21 ಮಂದಿ ನೂತನ ನಿರ್ದೇಶಕ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಕೆ.ಎಸ್. ಚಿದಾನಂದ ಗಣೇಶ್ 11 ಮತಗಳನ್ನು ಪಡೆದು ಆಯ್ಕೆಯಾದರೆ, ಕೆ.ಎಸ್. ಮಹೇಶ್‍ಕುಮಾರ್ 9 ಮತಗಳನ್ನು ಪಡೆದುಕೊಂಡರು. ಉಪಾಧ್ಯಕ್ಷರಾಗಿ ಎನ್. ಸತೀಶ್, ಸಹ ಕಾರ್ಯದರ್ಶಿಯಾಗಿ ಎಂ. ಕಮಲ್‍ರಾಜ್ ಹಾಗೂ ಖಜಾಂಚಿಯಾಗಿ ಎಚ್.ಬಿ. ವಿಶ್ವಕುಮಾರಸ್ವಾಮಿ ಅವರು ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾಧಿಕಾರಿಗಳಾಗಿ ಸಂಘದ ಮಾಜಿ ಅಧ್ಯಕ್ಷರಾದ ಎ. ಜಯಸಿಂಹ, ಶ್ರೀನಿವಾಸ್ ಎಸ್‍ಆರ್‍ಎಸ್ ಕರ್ತವ್ಯ ನಿರ್ವಹಿಸಿದರು.
ಸಂಘದ ಅಭಿವೃದ್ದಿಗೆ ಬದ್ದ : ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎನ್. ಶಂಕರ್ ಅಧಿಕಾರ ವಹಿಸಿಕೊಂಡು ಮಾತನಾಡಿ, ಸಂಘದ ನಿರ್ದೇಶಕರು ಹಾಗೂ ಸದಸ್ಯರು ನನ್ನ ಮೇಲೆ ವಿಶ್ವಾಸವಿಟ್ಟು ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿರುವುದಕ್ಕೆ ಚಿರಋಣಿ, ಮುಂದಿನ ದಿನಗಳಲ್ಲಿ ವರ್ತಕರ ಅಭಿವೃದ್ದಿ ಮತ್ತು ಕುಂದುಕೊರತೆಯನ್ನು ಬಗೆಹರಿಸುವ ಜೊತೆಗೆ ವರ್ತಕರು ಮತ್ತು ಗ್ರಾಹಕರ ಸಮನ್ವಯತೆಯನ್ನು ಸಾಧಿಸಿ, ಸಂಘವನ್ನು ಮಾದರಿ ಸಂಘವನ್ನಾಗಿಸಲು ನಿಮ್ಮೆಲ್ಲರ ಸಹಕಾರದೊಂದಿಗೆ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.
ಸಂಘ ನಿರ್ದೇಶಕರಾದ ಸಿ.ಎ.ನಾರಾಯಣ್, ಕೆ.ಎಸ್. ರವಿಶಂಕರ್, ಜಿ. ರಮೇಶ್, ಸಿ.ಎಸ್. ಮಹೇಶ್‍ಕುಮಾರ್, ಪಿಎನ್, ಸಂಜಯ್, ಜಿ. ಅಂಕಶೆಟ್ಟಿ, ಬಿ. ಶ್ರೀಧರ್, ಎನ್.ಆರ್. ಮುರಳೀಧರ್, ಸಿ.ಎನ್. ಮಹೇಶ್‍ಕುಮಾರ್, ಎನ್. ಚೇತನ್, ಎ. ಶ್ರೀನಿವಾಸನ್, ಎಲ್.ಸುರೇಶ್, ಎಚ್.ಬಿ. ರಾಜಶೇಖರ್, ವಿ. ಪ್ರದೀಪ್, ಸಿ.ಎಸ್. ಮಹೇಶ್ ಕುಮಾರ್ ಇದ್ದರು.