ಜನಪದಕಲೆ, ಸಂಸ್ಕøತಿ ನಿಂತ ನೀರಲ್ಲ, ಅದು ಚಲನಶೀಲವಾದದ್ದು: ಬಂಜಗೆರೆ ಜಯಪ್ರಕಾಶ್
ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.01- ಜನಪದ ಕಲೆ, ಸಂಸ್ಕøತಿನಿಂತ ನೀರಲ್ಲ, ಅದುನಿರಂತರವಾಗಿ ಚಲನಶೀಲವಾಗುವಂತದ್ದು ಎಂದುಸಾಹಿತಿ ಹಾಗೂ ಸಂಸ್ಕøತಿ ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್ ಅವರು ಅಭಿಪ್ರಾಯ ಪಟ್ಟರು.
ನಗರದ ವರನಟ ಡಾ. ರಾಜ್‍ಕುಮಾರ್‍ಜಿಲ್ಲಾ ರಂಗಮಂದಿರದಲ್ಲಿಂದು ಕರ್ನಾಟಕ ಜಾನಪದ ಅಕಾಡಮಿ, ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಆಕಾಶವಾಣಿ ಮೈಸೂರು ಎಫ್.ಎಂ. 100.06 ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ‘ಜಾನಪದ ಸಂಭ್ರಮ’ ಕಾರ್ಯಕ್ರಮದಲ್ಲಿ ವರ್ತಮಾನದ ತಲ್ಲಣಗಳು ಹಾಗೂ ಜಾನಪದ ಕುರಿತು ಉಪನ್ಯಾಸ ನೀಡಿ ಅವರು ಮಾತನಾಡಿದರು.
ಜನರ ಬಾಯಲ್ಲಿ ಬರುವ ಪದವೇ ಜನಪದವಾಗಿದೆ. ಜನಪದ ಸಂಸ್ಕøತಿ, ಸಂಗೀತ ಕಲೆಗಳು ಗ್ರಾಮೀಣ ಜನರ ವೃತ್ತಿ ಬದುಕಿನ ಮೇಲೆ ಅವಲಂಬಿತವಾಗಿವೆ. ಜನರು ದಿನನಿತ್ಯದ ದುಡಿಮೆಯ ಬಿಡುವಿನ ವೇಳೆಯಲ್ಲಿ ಕಲೆಗಳನ್ನು ಅಸ್ವಾದಿಸುತ್ತಾರೆ. ಸುಗ್ಗೀ ಕಣ, ಕಳೆ ಕೀಳುವಾಗ, ಗದ್ದೆ ನಾಟೀ ಮಾಡುವಾಗ, ದೋಣಿ ನಡೆಸುವಾಗ ಜನಪದ ಕಾವ್ಯಗಳು ಮೇಳೈಸುತ್ತವೆ. ಜನಪದ ಎಂದಿಗೂ ಕಳೆಗುಂದಿಲ್ಲ. ಅದುತನ್ನ ಚಲನ ಶೀಲತೆಯನ್ನು ಇಂದಿಗೂ ಉಳಿಸಿಕೊಂಡಿದೆ. ವಿಕಾಸ ಹಾಗೂ ವಿಸ್ತರಣೆ ಜನಪದ ಕಲೆಯ ಅವಿಭಾಜ್ಯ ಅಂಗಗಳಾಗಿದ್ದು, ಜನರ ನಿತ್ಯ ಬದುಕಿನಲ್ಲಿ ಹಾಸು ಹೊಕ್ಕಾಗಿವೆ ಎಂದರು.
ಚಾಮರಾಜನಗರ ಜಿಲ್ಲೆ ಜಾನಪದ ಕಲೆಗಳಿಗೆ ಇಡೀ ರಾಜ್ಯದ ಕೇಂದ್ರ ಸ್ಥಾನವಾಗಿದೆ. ಸಾಹಿತ್ಯ, ಸಂಸ್ಕøತಿಗೆ ದಕ್ಷಿಣದ ಹೆಬ್ಬಾಗಿಲು ಆಗಿದೆ. ಕರ್ನಾಟಕಕ್ಕೆ ಮಾದರಿಯಾಗುವ ಜನಪದ ಕಲೆಗಳು ಇಲ್ಲಿವೆ. ಚಾಮರಾಜನಗರಕ್ಕೆ ಜನಪದ ಕಲೆ ದೈವ ಕಲೆಯಾಗಿದೆ. ಮಲೆ ಮಹದೇಶ್ವರ, ಮಂಟೇಸ್ವಾಮಿ, ಸಿದ್ದಪ್ಪಾಜಿಯಂತಹ ಸಾಧು ಸಂತರು ನಡೆದಾಡಿದ ಪುಣ್ಯಭೂಮಿ ಇದಾಗಿದೆ.ಎಲ್ಲಾ ಬಗೆಯ ಜನಪದ ಕಲಾವಿದರು ಇಲ್ಲಿದ್ದಾರೆ. ಕಲಾವಿದರಲ್ಲಿ ಇತ್ತೀಚೆಗೆ ಜಾಗೃತ ಪ್ರಜ್ಞೆ ಮೂಡಿದೆ. ವರ್ತಮಾನದಲ್ಲಿ ನಮ್ಮ ಉದ್ಯೋಗಕ್ಕೂ ಬದುಕಿನ ಕಲೆಗೂ ಸಂಬಂಧವಿದೆ ಎಂದು ತಿಳಿಸಿದರು.
ಗ್ರಾಮೀಣ ಜನರ ಜನಪದ ಬದುಕು ಇಂದು ಸಾಮಾಜಿಕ ಸ್ಥಿತ್ಯಂತರ ಹೊಂದುತ್ತಿದೆ. ವರ್ತಮಾನದ ಬದುಕು ಬಹಳ ವೇಗವಾಗಿ ಅಧುನಿಕತೆ, ಅತ್ಯಾಧುನಿಕತೆಯತ್ತ ಸಾಗಿದೆ. ಆದರೂ ಸಹ ನಮ್ಮಜನಪದರ ಬದುಕು ಸಾವಯವ ಸಂಬಂಧದೊಂದಿಗೆ ಬೆಸೆದುಕೊಂಡಿದೆ. ಆಧುನಿಕತೆಯ ಹೆಸರಿನಲ್ಲಿ ಜನಪದ ಬದುಕು ತಲ್ಲಣಿಸುತ್ತಿದೆ. ಭರತನಾಟ್ಯ ಹಾಗೂ ಶಾಸ್ತ್ರೀಯ ನೃತ್ಯ ಪ್ರಕಾರಗಳಿಗೆಜನಪದವೇ ಮೂಲವಾಗಿದೆ. ಬಿದ್ದ ಪೆಟ್ಟಿನಿಂದ ಬಂದ ಎಚ್ಚರದಂತೆ ಜನಪದವು ಆಧುನಿಕತೆ ಹಾಗೂ ತಾಂತ್ರಿಕತೆಯನ್ನು ಅಳವಡಿಸಿಕೊಂಡು ಮುಂದೆ ಸಾಗಬೇಕಾದ ಅನಿವಾರ್ಯತೆ ಇದೆ ಎಂದು ಬಂಜಗೆರೆ ಜಯಪ್ರಕಾಶ್ ಅವರು ತಿಳಿಸಿದರು.
ಕಾವೇರಿ ಜಲಾನಯನ ಯೋಜನೆಯ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿ. ಮರಿಸ್ವಾಮಿ ಅವರು ಮಾತನಾಡಿ ಜಾನಪದ ಕಲೆಗಳ ತವರೂರು ಚಾಮರಾಜನಗರ. ಜನಪದಇಲ್ಲಿ ಸಮೃದ್ಧವಾಗಿದೆ. ಹಿಂದೆ ಹಳ್ಳಿಗಳಲ್ಲಿ ಜನಪದ ಜೀವಂತವಾಗಿತ್ತು. ಜನಪದವನ್ನು ಬರವಣಿಗೆ ಮೂಲಕ ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಲು ಕಲಾವಿದರು ಮುಂದಾಗಬೇಕು ಎಂದರು.
ಚಾಮರಾಜನಗರ ಮತ್ತು ರಾಮ ಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್‍ಅಸ್ಗರ್ ಮುನ್ನಅವರು ಮಾತನಾಡಿ ಜಿಲ್ಲೆಯ ಜಾನಪದ ಕಲಾವಿದರು ರಾಜ್ಯಕ್ಕೆ ದೇಶಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ರಾಷ್ಟ್ರಮಟ್ಟದಲ್ಲಿ ಅವಕಾಶಗಳನ್ನು ಪಡೆದಿದ್ದಾರೆ. ಜಿಲ್ಲೆ ಅನೇಕ ಕಲಾವಿದರನ್ನು ಚಿತ್ರರಂಗಕ್ಕೂ ನೀಡಿದೆ. ಜಾನಪದ ಕಲೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಉತ್ತಮ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ತಿಳಿಸಿದರು.
ಮೈಸೂರು ಆಕಾಶವಾಣಿ ಉಪನಿರ್ದೇಶಕ ಎಸ್.ಎಸ್. ಉಮೇಶ್ ಅವರು ಮಾತನಾಡಿ ಜನಪದ ಸಂಸ್ಕøತಿ ಉಳಿಸುವ ನಿಟ್ಟಿನಲ್ಲಿ ಆಕಾಶವಾಣಿಯು ಜನಪದ ಕಲಾವಿದರನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತಿದೆ. ಆಕಾಶವಾಣಿಯ ಧ್ವನಿ ಪರೀಕ್ಷೆಯ ಮಾನದಂಡದ ಆಧಾರದಲ್ಲಿ ವಿವಿಧ ಇಲಾಖೆಗಳು ಕಲಾವಿದರಿಗೆ ಕಾರ್ಯಕ್ರಮಗಳನ್ನು ನೀಡುತ್ತಿವೆ ಎಂದರು.
ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷರಾದ ಎಚ್.ವಿ. ಚಂದ್ರು ಅವರು ಮಾತನಾಡಿಜನಪದ ಕವಿತೆಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುವಲ್ಲಿ ಸಫಲವಾಗಿವೆ. ಗ್ರಾಮೀಣ ಜನರು ತಮ್ಮ ದೈಹಿಕ ಶ್ರಮ ಕಡಿಮೆ ಮಾಡಿಕೊಳ್ಳಲು ಹುಟ್ಟುಹಾಕಿದ್ದುಜನಪದ ಗೀತೆಗಳನ್ನು. ಜನಪದ ಕಲೆಗಳು ನಶಿಸದಂತೆ ತಡೆದುಪುನಶ್ಚೇತನಗೊಳಿಸಬೇಕಾದ ಅಗತ್ಯವಿದೆಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ಅಕಾಡಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಕುಮಾರ್ ಅವರು ಮಾತನಾಡಿ ಬದಲಾವಣೆಗೆ ಆಧುನಿಕತೆ ಬೇಕು. ಆದರೆ ಆಧುನಿ ಕತೆ ಜಾನಪದ ಕಲೆಗಳ ವಿನಾಶಕ್ಕೆ ಕಾರಣವಾಗಬಾರದು. ಕಲೆಗಳಲ್ಲಿ ಶ್ರೇಷ್ಠ, ಕನಿಷ್ಠ ಪ್ರಕ್ರಿಯೆಗಳನ್ನು ಬುಡಸಮೇತ ಕೀಳಬೇಕು. ನಮ್ಮ ಪರಂಪರೆಯನ್ನು ಉಳಿಸಿ ಬೆಳೆಸಲು ಜನಪದ ಆಧಾರಸ್ತಂಭವಾಗಬೇಕು. ಅಂತಹ ಶಕ್ತಿ ಜನಪದಕ್ಕಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಶಾಸಕ ಕೆ. ವಿವೇಕಾನಂದ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ಕರ್ನಾಟಕ ಜಾನಪದ ಅಕಾಡಮಿ ಸದಸ್ಯರಾದ ಉಮೇಶ್, ಮಲ್ಲಿಕಾರ್ಜುನ ಕಲ್ಲಹಳ್ಳಿ, ರಿಜಿಸ್ಟ್ರಾರ್ ನಮ್ರತಾ, ಗುರುರಾಜ ಹೊಸಕೋಟೆ, ಇತರರು ಕಾರ್ಯಕ್ರಮದಲ್ಲಿ ಇದ್ದರು. ವೇದಿಕೆ ಕಾರ್ಯಕ್ರಮದ ಬಳಿಕ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ವಿವಿಧ ಕಲಾತಂಡಗಳು ಸಾಂಸ್ಕøತಿಕ ಕಲೆಗಳನ್ನು ಪ್ರದರ್ಶಿಸಿದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಶ್ರೀ ಚಾಮರಾಜೆಶ್ವರದೇವಾಲಯದಿಂದವಿವಿಧ ಕಲಾತಂಡಗಳೊಂದಿಗೆ ಹಮ್ಮಿಕೊಳ್ಳಲಾಗಿದ್ದ ಜನಪದ ಸಂಭ್ರಮದ ಜಾಥಾಗೆ ಚಾಮರಾಜನಗರ ಮತ್ತು ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಅವರು ಹಸಿರು ನಿಶಾನೆ ತೋರಿ ಚಾಲನೆ ನೀಡಿದರು.