ಕಲಬುರಗಿ‌ ಜಿಲ್ಲೆಗೆ ಬೆಳೆ‌ ಕಟಾವು (post harvest) ಕೊನೆಯ ಕಂತಿನ ಪರಿಹಾರ ರೂ 4.34 ಕೋಟಿ ಬಿಡುಗಡೆ:ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ:ಜು.31: ಕಲಬುರಗಿ ಜಿಲ್ಲೆಯಲ್ಲಿ 2023-24ನೇ ಸಾಲಿನ‌ ಬೆಳೆ‌ವಿಮೆ ಯೊಜಬೆಯಡಿ ಮುಂಗಾರು‌ ಹಂಗಾಮಿನಲ್ಲಿ ಬೆಳೆ ಕಟಾವು ( ಕೊಯ್ಲು) ನಂತರ ಘಟಕದ ಕೊನೆಯ ಕಂತಿನ ಪರಿಹಾರ ರೂ 4.34 ಕೋಟಿ ಬಿಡುಗಡೆಯಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ‌ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕಲಬುರಗಿ ‌ಜಿಲ್ಲೆಯ 11,532 ರೈತರಿಗೆ ಬೆಳೆ ವಿಮೆ ಯೋಜನೆಯಡಿಯಲ್ಲಿ 2023-24 ರ ಸಾಲಿನ ಮುಂಗಾರು ಹಂಗಾಮಿನ ಕಟಾವು ನಂತರದ ( Post Harvest ) ಘಟಕದ ಕೊನೆಯ ಕಂತಿನ ಪರಿಹಾರ ರೂ 4.34 ಕೋಟಿ ಪಾವತಿಯಾಗಿದೆ.
ಈ ಹಿಂದೆ 2,09,268 ರೈತರಿಗೆ ರೂ 185.05 ಕೋಟಿ ಪಾವತಿಸಲಾಗಿತ್ತು. ಈ ಕೊನೆಯ ಕಂತಿನೊಂದಿಗೆ ಇದೂವರೆಗೆ ಜಿಲ್ಲೆಯ ಒಟ್ಟು 2,20,800 ರೈತರಿಗೆ ರೂ 189.39 ಕೋಟಿ ಪರಿಹಾರ ಪಾವತಿಸಿದಂತಾಗಿದೆ. ಈ ಪರಿಹಾರ ರೈತರ ಆರ್ಥಿಕ‌ ಸ್ಥಿತಿ ಸುಧಾರಣೆಗೆ ಹಾಗೂ ಬೀಜ‌ ಹಾಗೂ ರಸಗೊಬ್ಬರ ಖರೀದಿಸಲು ಅನುಕೂಲವಾಗುತ್ತದೆ .
ಜಿಲ್ಲಾಧಿಕಾರಿ ಮನವಿ:
ಬೆಳೆ ವಿಮೆ ಪರಿಹಾರ ಸಂಬಂಧ ರೈತರು ತಮ್ಮ ಬ್ಯಾಂಕ್ ಖಾತೆಯನ್ನು ಪರಿಶೀಲಿಸಬೇಕು ಹಾಗೂ ಹಣ ಪಾವತಿ ಕುರಿತು ಯಾವುದೆ ವಿಳಂಬವಾಗಿದ್ದರೆ ಆ ಬಗ್ಗೆ ಕೃಷಿ‌ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ‌‌ ನೀಡುವಂತೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ರೈತ‌ರಲ್ಲಿ ಮನವಿ ಮಾಡಿದ್ದಾರೆ.