ಮುನಷಿ ಪ್ರೇಮಚಂದ’ ಅವರ 144ನೇ ಜನ್ಮದಿನ ಆಚರಣೆ
ಕಲಬುರಗಿ: ಜು.31:ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯದ ಹಿಂದಿ ವಿಭಾಗದವತಿಯಿಂದ `ಹಿಂದಿ ಕಹಾನಿ, ಉಪನ್ಯಾಸ ಸಾಮ್ರಾಟ ಮುನಷಿ ಪ್ರೇಮಚಂದ’ ಅವರ 144ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ವೇದಿಕೆಯ ಮೇಲೆ ಮುಖ್ಯ ಅತಿಥಿಗಳಾಗಿ ಪ್ರೊ.ಸುತೇಜ ಎ. ದೇಶಮುಖ, ಪ್ರೇಮಚಂದ ಅವರ ಸಾಹಿತ್ಯ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಭಾರಿ ಪ್ರಾಚಾರ್ಯರಾಗಿರುವ ಡಾ.ದಯಾನಂದ ಎಂ.ಶಾಸ್ತಿç ಅವರು ವಹಿಸಿದ್ದರು. ಡಾ.ವಿಷ್ಣುಗುಂಡಗುರ್ಕಿ, ಉಪನ್ಯಾಸಕರು ಸಂಸ್ಕೃತ ವಿಭಾಗ ಇವರು ಕಾರ್ಯಕ್ರಮದ ನಿರ್ವಹಣೆಯನ್ನು ವಹಿಸಿದ್ದರು. ಕಾಲೇಜಿನ ಸಕಲ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.