ದೇಶದ ಸುಸ್ಥಿರತೆಯ ಮಾದರಿಗಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಬಾಚಿಕೊಂಡ ಅಂತರವಾಣಿ
ಕಲಬುರಗಿ: ಜು.31: ಕಲಬುರಗಿ ನಗರದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ನಡೆಸುತ್ತಿರುವ ಅಂತರವಾಣಿ ಸಮುದಾಯ ರೇಡಿಯೋ ಕೇಂದ್ರವು, ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಆಯೋಜಿಸಿದ್ದ 500ಕ್ಕೂ ಅಧಿಕ ಸಮುದಾಯ ರೇಡಿಯೋ ಕೇಂದ್ರಗಳು ಭಾಗವಹಿಸದ್ದ 2024ರ ರಾಷ್ಟ್ರೀಯ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದು ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದೆ.
ವಾರ್ತಾ ಮತ್ತು ಪ್ರಸಾರ ಸಚಿವಾಲಯದಿಂದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘವು ಸ್ವೀಕರಿಸಿದ ಪ್ರಕಟಣೆಯ ಪ್ರಕಾರ, “ಸುಸ್ಥಿರತೆಯ ಮಾದರಿ ಪ್ರಶಸ್ತಿಗಳು” ವಿಭಾಗದಲ್ಲಿ ಅಂತರವಾಣಿ ಸಮುದಾಯ ರೇಡಿಯೋ ಕೇಂದ್ರವು ತೃತೀಯ ಬಹುಮಾನವನ್ನು ಪಡೆದುಕೊಂಡಿದ್ದು ಇದು 50,000 ರೂಪಾಯಿ ನಗದು ಬಹುಮಾನ, ಪ್ರಶಂಸಾ ಪತ್ರ ಮತ್ತು ಪ್ರಶಸ್ತಿ ಪತ್ರವನ್ನು ಹೊಂದಿದೆ.
500ಕ್ಕೂ ಅಧಿಕ ಅಖS ನಡುವಿನ ಕಠಿಣ ಸ್ಪರ್ಧೆಯನ್ನು ಮೆಟ್ಟಿನಿಂತು ಅಂತರವಾಣಿ ರೇಡಿಯೋ ಕೇಂದ್ರವು ಪ್ರಶಸ್ತಿ ಗಳಿಸಿದೆ ಎಂದು ಶರಣಬಸವ ವಿಶ್ವವಿದ್ಯಾಲಯದ ಡಿ.ಲಿಟ್ ಪ್ರಶಸ್ತಿ ಪುರಸ್ಕೃತ ಅಂತರವಾಣಿ ಸಮುದಾಯ ರೇಡಿಯೋ ಕೇಂದ್ರದ ದೃಷ್ಟಿ ವಿಕಲಚೇತನ ನಿರ್ದೇಶಕ ಡಾ. ಶಿವರಾಜ ಶಾಸ್ತ್ರಿ ಹೇರೂರು ಹೇಳಿದರು. ಪ್ರಾಸಂಗಿಕವಾಗಿ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ಈ ಮನ್ನಣೆಯನ್ನು ಪಡೆದ ಇಡೀ ಕರ್ನಾಟಕದಲ್ಲಿ ಅಂತರವಾಣಿ ಸಮುದಾಯ ರೇಡಿಯೋ ಕೇಂದ್ರವು ಏಕೈಕ ರೇಡಿಯೋ ಕೇಂದ್ರವಾಗಿದೆ ಎಂದರು.
ರಾಷ್ಟ್ರೀಯ ಮನ್ನಣೆಯನ್ನು ಗೆಲ್ಲಲು ಅಂತರವಾಣಿ ಸಮುದಾಯ ರೇಡಿಯೋ ಕೇಂದ್ರಕ್ಕೆ ಇಡುಮಾಡಿದ ಪ್ರಮುಖ ಮಾನದಂಡವೆAದರೆ ವಿಷಯ ರಚನೆ, ಬ್ಯಾಂಕಿAಗ್ ಕಾರ್ಯಕ್ರಮ, ಅಂತರವಾಣಿ ರೇಡಿಯೋ ನಿರ್ಮಿಸಿದ ಮತ್ತು ಪ್ರಸಾರ ಮಾಡಿದ ಕಾರ್ಯಕ್ರಮಗಳಲ್ಲಿ ಸಮುದಾಯ ಭಾಗವಹಿಸುವಿಕೆ, ಸೌಂಡ್ ಫೈನಾನ್ಷಿಯಲ್ ಸಸ್ಟೈನಬಿಲಿಟಿ ಮತ್ತು ತಾಂತ್ರಿಕ ಬೆಂಬಲವನ್ನು ಅನುಭವಿಸಿದೆ ಎಂದು ಡಾ. ಶಿವರಾಜ ಶಾಸ್ತಿçÃ ತಿಳಿಸಿದರು.
ಅಂತರವಾಣಿಯಿAದ ಪ್ರತಿದಿನ ನಡೆಸುವ ಕಾರ್ಯಕ್ರಮಗಳಲ್ಲಿ ನೇರ ಫೋನ್ ಇನ್ ಮೂಲಕ ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಲಾಗಿದೆ ಮತ್ತು ಅಂತರವಾಣಿ ರಚಿಸಿದ ಶೇ 50ರಷ್ಟು ವಿಷಯವನ್ನು ಅಂತರವಾಣಿ ಸ್ಟುಡಿಯೋದಲ್ಲಿ ಮಾಡಲಾಗಿದೆ ಮತ್ತು ಉಳಿದ 50ರಷ್ಟು ವಿಷಯವನ್ನು ಹೊರಾಂಗಣದಲ್ಲಿ ದಾಖಲಿಸಲಾಗಿದೆ. ರಾಷ್ಟ್ರೀಯ ಮನ್ನಣೆಯನ್ನು ಪಡೆಯುವ ಮಾನದಂಡಗಳ ಪ್ರಕಾರ ಅಂತರವಾಣಿಯ ಮೂಲಕ ರಚಿಸಲಾದ ಕಾರ್ಯಕ್ರಮಗಳಲ್ಲಿ ಸಮುದಾಯದ ಭಾಗವಹಿಸುವಿಕೆಯನ್ನು ಖಚಿತಪಡಿಸುತ್ತದೆ ಎಂದು ಅವರು ಹೇಳಿದರು.
ಅಂತರವಾಣಿಯ ಸಿಸ್ಟಂ ಸ್ಟೋರೇಜ್‌ನಲ್ಲಿ ಇದುವರೆಗೆ ದಾಖಲೆಯ 36 ಸಾವಿರ ಗಂಟೆಗಳ ಕಾರ್ಯಕ್ರಮದೊಂದಿಗೆ, ಪ್ರತಿದಿನ 10 ಗಂಟೆಗಳ ಕಾಲ ಅಂತರವಾಣಿ ರೇಡಿಯೋ ಕೇಳುಗರಿಗೆ ಪ್ರಸಾರ ಮಾಡುತ್ತಲಿದೆೆ ಎಂದರು. ಸ್ಪರ್ಧೆಯಲ್ಲಿ ಅಂತರವಾಣಿ ಗಳಿಸಿದ ಮತ್ತೊಂದು ಅನುಕೂಲಕರ ಅಂಶವೆAದರೆ ಸರ್ಕಾರದ ನಿರಂತರ ಬೆಂಬಲವಿಲ್ಲದೆ ಅಂತರವಾಣಿ ರೇಡಿಯೋ ಕೇಂದ್ರವನ್ನು ನಿರ್ವಹಿಸಲು ಹಣಕಾಸಿನಲ್ಲಿ ಸ್ವಯಂ ಸುಸ್ಥಿರತೆ ಇದ್ದು, ಸಂಘವು ಅಂತರವಾಣಿ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಸ್ಥಿರ ಠೇವಣಿಯಾಗಿ 50 ಲಕ್ಷ ರೂ. ಗಳನ್ನು ಡೆಪಾಸಿಟ್ ಮಾಡಿದ್ದು, ಅದರಲ್ಲಿ ಬರುವ ಬಡ್ಡಿಯನ್ನು ಅಂತರವಾಣಿ ಕೇಂದ್ರದಲ್ಲಿ ಕೆಲಸ ಮಾಡುವ ಇಬ್ಬರು ಉದ್ಯೋಗಿಗಳ ವೇತನ ವೆಚ್ಚ, ಇಂಟರ್ನೆಟ್ ಬಾಡಿಗೆ ಸೇರಿದಂತೆ ಇತರ ವೆಚ್ಚಗಳನ್ನು ಪೂರೈಸಲು ಬಳಸಲಾಗುತ್ತದೆ ಎಂದು ತಿಳಿಸಿದರು.
ಇತರೆ ತುರ್ತು ಅವಶ್ಯಕತೆಗಳನ್ನು ಪೂರೈಸಲು ಕೇಂದ್ರ ಸರ್ಕಾರವು ಡಿಎವಿಪಿ, ಯುನಿಸೆಫ್ ಮತ್ತು ಸ್ಥಳೀಯ ಜಾಹೀರಾತುಗಳ ಮೂಲಕ ಬಿಡುಗಡೆ ಮಾಡಿದ ಜಾಹೀರಾತುಗಳಿಂದ ಅಂತರವಾಣಿ ರೇಡಿಯೋ ತನ್ನದೇ ಆದ ಆದಾಯ ಉತ್ಪಾದಿಸುತ್ತದೆ ಎಂದು ಡಾ. ಶಾಸ್ತ್ರಿ ಹೇಳಿದರು. ಸಂಘವು ಸ್ಟುಡಿಯೊವನ್ನು ನವೀಕರಿಸಲು ಮತ್ತು ಅಂತರವಾಣಿಯ ಕಾರ್ಯಕ್ರಮಗಳ ಧ್ವನಿಮುದ್ರಣ ಮತ್ತು ಪ್ರಸಾರಕ್ಕಾಗಿ ಬಳಸಲಾಗುವ ಮೂರು ಸಂಪೂರ್ಣ ಹವಾನಿಯಂತ್ರಿತ ಅಕ್ವಾಸ್ಟಿಕ್ ಕೊಠಡಿಗಳನ್ನು ಸಂಘವು ತನ್ನ ಹಣದಿಂದ ಒದಗಿಸಿದೆ ಎಂದರು.
ಅAತರವಾಣಿಯು ತನ್ನ 30 ಕಿಮೀ ತಂರAಗಾAತರ ವ್ಯಾಪ್ತಿಯನ್ನು ಒಳಗೊಂಡಿದೆ. ಈ ಭಾಗದ ಸುಮಾರು 100 ಕ್ಕೂ ಹೆಚ್ಚು ಹಳ್ಳಿಗಳ ಕೇಳುಗರಿಗೆ ಸಮುದಾಯ ಕೇಂದ್ರದಿAದ ಪ್ರಸಾರವಾಗುವ ಕಾರ್ಯಕ್ರಮಗಳನ್ನು ಒದಗಿಸುತ್ತದೆ. ಅಂತರವಾಣಿ ಪ್ರಸಾರ ಮಾಡುವ ಕಾರ್ಯಕ್ರಮಗಳಾದ ಸಂಸ್ಕೃತಿ, ಜಾನಪದ, ಪರಿಸರ ಸಮಸ್ಯೆಗಳು, ಸಾಹಿತ್ಯ ಮತ್ತು ಸಾಮಾಜಿಕ ಸಮಸ್ಯೆಗಳ ಸುತ್ತ ಕೇಂದ್ರೀಕೃತವಾಗಿವೆ. ಅಂತರವಾಣಿಯ ಜನಪ್ರಿಯ ಕಾರ್ಯಕ್ರಮಗಳಲ್ಲಿ ಆರೋಗ್ಯ ವಾಣಿ, ಲೈವ್ ಇನ್ ಕಾರ್ಯಕ್ರಮಗಳು ಮತ್ತು ಶರಣಬಸವೇಶ್ವರ ಸುಪ್ರಭಾತ ಸೇರಿವೆ. ಇದರ ಹೊರತಾಗಿ ರೇಡಿಯೋ ಅಂತರವಾಣಿ ಅಪ್ಲಿಕೇಶನ್ ಪ್ಲೇ ಸ್ಟೋರ್‌ನಲ್ಲಿ ಪ್ರಪಂಚದಾದ್ಯAತ ಕೇಳುಗರಿಗೆ 24ಘಿ7 ಆಧಾರದ ಮೇಲೆ ಲಭ್ಯವಿದೆ ಎಂದರು.
ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಮಾತೋಶ್ರೀ ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾಜಿ, ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ ಅವರು ಡಾ. ಶಿವರಾಜ ಶಾಸ್ತ್ರಿ ಅವರನ್ನು ಅಭಿನಂದಿಸಿದ್ದಾರೆ.