ಆ. 1 ಹಾಗೂ 2 ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ
ಕಲಬುರಗಿ:ಜು.31:ಕಲಬುರಗಿ ನಗರಕ್ಕೆ ನೀರು ಸರಬರಾಜು ಮಾಡುವ ಸರಡಗಿ ಭೀಮಾ ನದಿಯಿಂದ ನೀರು ಸರಬರಾಜು ಆಗುವ ಮುಖ್ಯ ಕೊಳವೆ ಮಾರ್ಗದಲ್ಲಿ ಬರುವ ಫರಹತಾಬಾದ ಹಾಗೂ ಸೀತನೂರ ಹತ್ತಿರ ತುರ್ತು ದುರಸ್ತಿ ಕಾರ್ಯ ಕೈಗೊಂಡಿರುವ ಹಿನ್ನೆಲೆಯಲ್ಲಿ ಕೋಟನೂರ ಹಾಗೂ ಶೋರಗುಂಬಜ್ ನೀರು ಶುದ್ಧೀಕರಣ ಘಟಕದ ವ್ಯಾಪ್ತಿಯಲ್ಲಿ ಬರುವ ಕೆಳಕಂಡ ಪ್ರದೇಶಗಳಲ್ಲಿ 2024ರ ಆಗಸ್ಟ್ 1 ಹಾಗೂ 2 ರಂದು ಎರಡು ದಿನಗಳ ಕಾಲ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕೆಯುಡಬ್ಲುö್ಯಎಸ್‌ಎಂಪಿ-ಕೆಯುಐಡಿಎಫ್‌ಸಿ, ಯೋಜನಾ ಅನುಷ್ಠಾನ ಘಟಕದ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.
ಕಲಬುರಗಿ ನಗರದ ಬಿದ್ದಾಪೂರ, ರಾಯರಗುಡ್ಡಿ, ವಿಶಾಲ ನಗರ, ಅಂಬಿಕಾ ನಗರ, ಪಿಂಪ್ಲಿ ಟೆಂಪಲ್, ಪಿ ಆಂಡ್ ಟಿ ಕಾಲೋನಿ, ವಿದ್ಯಾನಗರ, ಯಶವಂತ ನಗರ, ಕರುಣೇಶ್ವರ ನಗರ, ಗಣೇಶ ನಗರ, ಭಾಗ್ಯವಂತಿ ನಗರ, ದೇವಾ ನಗರ, ತಿಲಕನಗರ, ಬನಶಂಕರಿ ನಗರ, ಹರಿ ನಗರ, ಗಾಬರೇ ಲೇಔಟ್, ಜೆಂ ಶೇಟ್ಟಿ ನಗರ, ಕೃಷ್ಣ ನಗರ, ತಾರಫೈಲ್, ಉದಯ ನಗರ, ಎನ್‌ಜಿಓ ಕಾಲೋನಿ, ಜೇವರ್ಗಿ ಕಾಲೋನಿ, ಮಾಕಾ ಲೇಔಟ್, ಸಂತೋಷ ಕಾಲೋನಿ, ಪಿಡಬ್ಲೂö್ಯಡಿ ಕಾಲೋನಿ, ಬ್ಯಾಂಕ್ ಕಾಲೋನಿ, ಬಾಲಾಜಿ ನಗರ, ರಹೆಮತ್ ನಗರ, ಸಂಪಿಗೆ ನಗರ, ಬುದ್ಧ ನಗರ, ರೇವಣಸಿದ್ದೇಶ್ವರ ಕಾಲೋನಿ, ಸಾಯಿ ನಗರ, ಓಜಾ ಲೇಔಟ್, ಸ್ವಾಮಿ ವಿವೇಕಾನಂದ ನಗರ, ಪ್ರಗತಿ ಕಾಲೋನಿ, ಸಿಐಬಿ ಕಾಲೋನಿ, ಶಕ್ತಿ ನಗರ, ಸ್ಟೇಷನ್ ಬಜಾರ, ಐವನ್ ಶಾಹಿ, ಎತ್ತಿಮ್ಮ ಖಾನ, ಶಾಂತಿ ನಗರ, ವಿಠ್ಠಲ ನಗರ, ಖುಬಾ ಪ್ಲಾಟ, ಮಿಸಬಾ ನಗರ, ಅಜಮಿರ್ ಕಾಲೋನಿ, ಕರಿಮ ನಗರ, ಗಾಲಿಬ್ ಕಾಲೋನಿ, ಮಹಮ್ಮದ ಚೌಕ್, ಖಾದೀರ ಚೌಕ್, ಶಿವನಗರ, ಸಿದ್ದರಾಮೇಶ್ವರ ಕಾಲೋನಿ, ನಬಿ ಕಾಲೋನಿ, ಶೇಖ ರೋಜಾ, ಕೈಲಾಸ ನಗರ, ಜಿ.ಆರ್. ನಗರ, ಕಸ್ತೂರಿ ನಗರ, ಆಶ್ರಯ ಕಾಲೋನಿ, ಪೂಜಾ ಕಾಲೋನಿ, ಜಾಗೃತಿ ಕಾಲೋನಿ, ಓಂ ನಗರ, ಜಂ ಜಂ ಕಾಲೋನಿ, ಜುಬೈರ್ ಕಾಲೋನಿ, ಅಜಾದಪೂರ ಕಾಲೋನಿ, ನಾಯ್ಡು ಕಾಲೋನಿ ಹಾಗೂ ಮಿನಿ ಅಮ್ಮಲವಾಡಿ ಪ್ರದೇಶಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಕಲಬುರಗಿ ನಗರದ ಸಾರ್ವಜನಿಕರು ಮಹಾನಗರ ಪಾಲಿಕೆ, ಕೆಯುಐಡಿಎಫ್‌ಸಿ ಹಾಗೂ ಮೆ|| ಎಲ್&ಟಿ ಕಂಪನಿಗೆ ಸಹಕರಿಸ ಬೇಕೆಂದು ಅವರು ತಿಳಿಸಿದ್ದಾರೆ.