ಹಿಂದಿ ಸಾಹಿತ್ಯಕ್ಕೆ ಪ್ರೇಮಚಂದ್ರ ಮುನ್ಸಿ ಕೊಡುಗೆ ಅಪಾರ
ಕಲಬುರಗಿ: ಜು.31: ಹಿಂದಿ ಭಾಷೆಯು ರಾಷ್ಟç ಭಾಷೆಯಾಗಿದ್ದು, ಸರಳ ಹಾಗೂ ಜನ ಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವ, ಮಾತನಾಡುವ ಭಾಷೆಯಾಗಿದೆ. ಇದು ದೇಶದ ಉದ್ದಗಲಕ್ಕೂ ವ್ಯಾಪಿಸಿದ್ದು, ಹಿಂದಿ ಸಾಹಿತ್ಯಕ್ಕೆ ಕಾದಂಬರಿಗಳು, ಸಣ್ಣ ಕಥೆಗಳನ್ನು ನೀಡಿರುವ ಪ್ರೇಮಚಂದ ಮುನ್ಸಿ ಅವರ ಕೊಡುಗೆ ಅಪಾರವಾಗಿದೆ ಎಂದು ಹಿಂದಿ ಸಾಹಿತಿ ಸುನಿಲ್ ಚೌಧರಿ ಹೇಳಿದರು.
ನಗರದ ಗೋವಾ ಹೋಟೆಲ್ ಎದುರುಗಡೆಯಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧÀವಾರ ಹಮ್ಮಿಕೊಳ್ಳಲಾಗಿದ್ದ ‘ಪ್ರೇಮಚಂದ ಮುನ್ಸಿ ಜನ್ಮದಿನಾಚರಣೆ’ಯಲ್ಲಿ ಅವರು ಮಾತನಾಡುತ್ತಿದ್ದರು.
ಇಂದಿನ ಕುಟುಂಬದ ಕಲಹಗಳಿಗೆ ಪರಿಹಾರ, ಶಾಂತಿಯುತ ವಾತಾವರಣದ ನಿರ್ಮಾಣ, ಭ್ರಾತೃತ್ವ ಭಾವನೆ, ದೇಶಪ್ರೇಮ, ಮಾನವೀಯ ಮೌಲ್ಯಗಳು ಸೇರಿದಂತೆ ಮುಂತಾದ ವಿಷಯಗಳನ್ನು ಕುರಿತು ಅವರು ತಮ್ಮ ಸಾಹಿತ್ಯದ ಮೂಲಕ ತಿಳಿಸಿಕೊಟ್ಟಿದ್ದಾರೆ. ಅವರಲ್ಲಿರುವ ಹಿಂದಿ ಸಾಹಿತ್ಯದ ಒಲವು ಮಾದರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ, ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಚಿಂತಕರಾದ ರವಿ ಬಿರಾಜಾದಾರ, ನಾಗೇಂದ್ರ ಗದ್ಯಾಳ್, ಶಿಕ್ಷಕಿ ತ್ರಿವೇಣಿ ರಾಜೂಲಕರ್, ಪ್ರಮುಖರಾದ ನಾಗೇಶ ಕಡಬೂರ, ನಾಗಲಕ್ಷಿö್ಮÃ,ಸಾಕ್ಷತಾ, ಗೌರೇಶ್ವರಿ, ಲಕ್ಷಿö್ಮÃ, ಸುಜ್ಞಾನಮ್ಮ, ರಕ್ಷಿತಾ, ಸೌಜನ್ಯ, ಭವಾನಿ, ಐಶ್ವರ್ಯ ಸೇರಿದಂತೆ ಇನ್ನಿತರರಿದ್ದರು.