ವಿದ್ಯಾರ್ಥಿಗಳಲ್ಲಿ ಹೊಸ ಹೊಸ ಕೌಶಲ್ಯ ಬೆಳೆಸಿ
ಕಲಬುರಗಿ: ಜು.೩೧: ವಿದ್ಯಾರ್ಥಿಗಳಿಗೆ ಪಠ್ಯೆ ಜೊತೆಗೆ ಹೊಸ ಹೊಸ ಕೌಶಲ್ಯ ಬೆಳೆಸಬೇಕೆಂದು ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ತಿಳಿಸಿದರು.
ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಶರಣಬಸವೇಶ್ವರ ದೇವಸ್ಥಾನ ಆವಣದ ಶಾಲಾ ಕಾಲೇಜು ಅಡಿಯಲ್ಲಿ ಅವರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡ ಯುವ ಕೌಶಲ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಬುಧವಾರ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹೊಸ ಹೊಸ ಕೌಶಲ್ಯಗಳು ಬೆಳೆಸಿಕೊಳ್ಳುವುದು ಅನಿವಾರ್ಯವಿದೆ. ಹೆಚ್ಚು ಹೆಚ್ಚು ಕೌಶಲ್ಯಗಳು ಕಲಿಯಬೇಕು. ವಿದ್ಯಾರ್ಥಿಗಳಿಗೆ ಒಳ್ಳೆಯ ಜ್ಞಾನ ನೀಡಬೇಕು ಅವರನ್ನು ಉನ್ನತ ಹುದ್ದೆಗೆ ಕೊಂಡೊಯಬೇಕು ಎಂದು ಶಿಕ್ಷಕರಿಗೆ ಸಲಹೆ ನೀಡಿದರು. ಪೂಜ್ಯ ಡಾ.ಅಪ್ಪಾಜಿ ಮತ್ತು ಪೂಜ್ಯ ಡಾ.ಅವ್ವಾಜಿಯವರ ಸಲಹೆಯಂತೆ ತಾವು ಪ್ರಧಾನ ಸೇವಕನಾಗಿ ಕೆಲಸ ಮಾಡಿ ಸಂಸ್ಥೆಯನ್ನುö ಇನ್ನೂ ಉನ್ನತ ಸ್ಥಾನಕ್ಕೇರಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶರಣಬಸವ ವಿಶ್ವವಿದ್ಯಾಲಯ ಕುಲಪತಿಗಳಾದ ಡಾ.ಅನೀಲಕುಮಾರ ಬಿಡವೆ ಮಾತನಾಡಿ, ಯುವ ಕೌಶಲ್ಯ ದಿನಾಚರಣೆ ಕಾರ್ಯದರ್ಶಿಗಳಾದ ಬಸವರಾಜ ದೇಶಮುಖ ಅವರ ಜನ್ಮ ದಿನಕ್ಕೆ ಬಹಳ ಸೂಕ್ತವಾಗಿದೆ ಎಂದು ಹೇಳಿದರು. ಕುಲಸಚಿವ ಡಾ.ಎಸ್.ಜಿ.ಡೊಳ್ಳೆಗೌಡರ್, ಶರಣಬಸವೇಶ್ವರ ದೇವಸ್ಥಾನ ಆವರಣದ ಶಾಲಾ ಕಾಲೇಜುಗಳ ನಿರ್ದೇಶಕರಾದ ಡಾ.ನೀಲಾಂಬಿಕಾ ಶೇರಿಕಾರ ಮಾತನಾಡಿದರು. ಕಾರ್ಯಕ್ರಮದ ಆಧ್ಯಕ್ಷತೆ ಮುಕ್ತಾಂಬಿಕಾ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಎಂ.ಆರ್.ಹುಗ್ಗಿ ಮಾತನಾಡಿದರು. ವೇದಿಕೆ ಮೇಲೆ ವಿವಿಧ ಕಾಲೇಜುಗಳ ಪ್ರಾಚಾರ್ಯರಾದ ಬಾಬುರಾವ ಚವ್ಹಾಣ, ಡಾ.ಕಲ್ಪನಾ ಭೀಮಳ್ಳಿ, ಶರಣಬಸಪ್ಪ ಮಾಲಿಪಾಟೀಲ, ಕಂಡೇರಾವ, ಅಂಬರೀಶ ಬಿಜಾಪೂರೆ ಮತ್ತಿತರರು ಇದ್ದರು. ಗೋದುತಾಯಿ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಪುಟ್ಟಮಣಿ ದೇವಿದಾಸ ಪ್ರಾಸ್ತಾವಿಕ ಮಾತನಾಡಿದರು. ಶ್ರೀಮತಿ ಅನಿತಾ ಕನಶೆಟ್ಟಿ ಸ್ವಾಗತಿಸಿದರು, ಗೋದುತಾಯಿ ಬಿ.ಎಡ್. ಕಾಲೇಜಿನ ಪ್ರಾಧ್ಯಾಪಕಿ ಶ್ರೀಮತಿ ಸುಪ್ರೀಯಾ ನಾಗಶೆಟ್ಟಿ ನಿರೂಪಿಸಿ, ವಂದಿಸಿದರು.
ಶರಣಬಸವೇಶ್ವರ ದೇವಸ್ಥಾನ ಆವರಣದ ಶಾಲಾ ಕಾಲೇಜುಗಳ ಶಿಕ್ಷಕರು ಮತ್ತು ಶಿಕ್ಷಕೇರರು ಉಪಸ್ಥಿತರಿದ್ದರು.