ತೊಗರಿ ಬೆಳೆಗೆ ಗೊಣ್ಣೆ ಹುಳದ ಬಾಧೆ ಹತೋಟಿಗೆ ಸಲಹೆ
ತಾಳಿಕೋಟೆ:ಜು.31: ತೊಗರಿ ಬೆಳೆಗೆ ಅಲ್ಲಲ್ಲಿ ಗೊಣ್ಣೆ ಹುಳದ ಬಾಧೆ ಕಂಡು ಬಂದಿದ್ದು ರೈತಾಪಿ ಜನರು ಹತೋಟೆಗೆ ಕೃಷಿ ಇಲಾಖೆ ಸಂಪರ್ಕಿಸುವದರೊAದಿಗೆ ಸಲಹೆಗಳನ್ನು ಅನುಸರಿಸಿ ತಮ್ಮ ತಮ್ಮ ತೊಗರಿ ಬೆಳೆಗಳನ್ನು ಸಂರಕ್ಷಣೆ ಮಾಡಿಕೊಳ್ಳಬೇಕೆಂದು ತಾಳಿಕೋಟೆ ತಾಲೂಕಾ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮಹೇಶ ಜೋಶಿ ಅವರು ತಿಳಿಸಿದ್ದಾರೆ.
ತಾಲೂಕಿನ ವಿವಿಧ ಭಾಗಗಳಲ್ಲಿ ರೈತರು ಜಮೀನುಗಳಿಗೆ ಹೆಂಡಿ ಗೊಬ್ಬರ ಬಳಕೆ ಮಾಡಿದ್ದು ಅದರಲ್ಲಿ ಮೊದಲೇ ಹುಟ್ಟಿಕೊಂಡಿರುವ ಗೊಣ್ಣೆ ಹುಳಗಳು ಸದ್ಯ ಮಳೆಯ ಅಭಾವದಿಂದ ತೊಗರಿ ಗಿಡಗಳ ಕಾಂಡವನ್ನು ಕತ್ತರಿಸಿ ತಿನ್ನುತ್ತಿರುವದು ಕಂಡುಬAದಿದೆ ಇದರಿಂದ ತೊಗರಿ ಗಿಡಗಳು ಒಣಗುವ ಸಾಧ್ಯತೆಗಳು ಹೆಚ್ಚಾಗಿ ಇರುವದರಿಂದ ಮತ್ತು ಈ ರೀತಿ ಗೊಣ್ಣೆಗಳು ತೊಗರಿ ಬಡ್ಡಿಯ ಕಾಂಡದಲ್ಲಿ ಕಂಡುಬAದಲ್ಲಿ ತೊಗರಿ ಗಿಡಗಳ ಬಡ್ಡಿಗಳಿಗೆ ಕ್ಲೋರಪೈರಿಫಾಸ್ 50%ಇಸಿ 4 ಮಿಲಿ ಲೀಟರ್ ನೀರಿಗೆ ಬೆರಸಿ ಬೆಳೆಯ ಕಾಂಡದ ಭಾಗ ಸಂಪೂರ್ಣ ಹಸಿಯಾಗುವಂತೆ ಸಿಂಪಡಿಸಬೇಕು ಅಥವಾ ಬ್ಯಾರಾಜೈಡ್ 2 ಮೀಲಿ ಲೀಟರ್ ನೀರಿಗೆ ಬೆರೆಸಿ ಕಾಂಡಕ್ಕೆ ಸಿಂಪಡಿಸಬೇಕು ಇದರಿಂದ ಗೊಣ್ಣೆಗಳ ಬಾಧೆಯನ್ನು ತಡೆಗಟ್ಟಬಹುದಾಗಿದೆ ಮತ್ತು ತೊಗರಿ ಬೆಳೆಗಳನ್ನು ಸಂರಕ್ಷಣೆ ಮಾಡಿಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ನೆಟೆ ರೋಗದ ನಿರ್ವಹಣಾ ಕ್ರಮಗಳು :-
ಕೆಲವು ಭಾಗಗಳಲ್ಲಿ ಈಗಲೇ ಮಳೆ ಇಲ್ಲದಿದ್ದರೂ ನೆಟೆ ರೋಗ ಕಾಣಿಸಿಕೊಂಡಿದ್ದು ಅಂತಹ ಬೆಳೆಗಳಿಗೆ ಸಾಫ್ (ಕಾರ್ಬನ್ ಡ್ಯಾಜಿಮ್ ಪ್ಲಸ್ ಮ್ಯಾಂಕೋಜೆಟ್) 2 ಗ್ರಾಂ 1 ಲೀಟರ್‌ಗೆ ಬೆರೆಸಿ ಸಿಂಪರಣೆ ಮಾಡಬೇಕು ಇದರಿಂದ ನೆಟೆ ರೋಗವನ್ನು ತಡೆಗಟ್ಟಲು ಸಾಧ್ಯವಾಗಲಿದ್ದು ತಾಲೂಕಿನಲ್ಲಿ ಈಗಾಗಲೇ 56250 ಹೆಕ್ಟರ್ ತೊಗರಿ ಬಿತ್ತನೆ ಮಾಡಿರುವದರಿಂದ ತಾಲೂಕಿನ ರೈತರು ರೋಗ ಬಾಧೆಗೆ ಸಂಬAದಿಸಿದ್ದಾಗಲಿ ಅಥವಾ ಯಾವುದೇ ಸಲಹೆ ಸೂಚನೆಗಳಿಗೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಬೇಕೆAದು ಕೃಷಿ ಅಧಿಕಾರಿ ಮಹೇಶ ಜೋಶಿ ಅವರು ತಿಳಿಸಿದ್ದಾರೆ.