ತೆರೆದ ತಂಗುದಾಣ: 4 ಸಂಸ್ಥೆಗಳ ವಿರುದ್ದ ಎಫ್‌ಐಆರ್
ಕಲಬುರಗಿ,ಜು.31- ತೆರೆದ ತಂಗುದಾಣಗಳಿಗೆ ಮೂಲ ಸೌಕರ್ಯ, ದಾಖಲೆ ನಿರ್ವಹಣೆ ಇಲ್ಲದಿರುವುದರಿಂದ ಕಲಬುರಗಿ ಜಿಲ್ಲೆಯ ನಾಲ್ಕು ಸಂಸ್ಥೆಗಳ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ ಅವರು, ವಿಧಾನ ಮಂಡಲದಲ್ಲಿ ಕೇಳಿದ ಪ್ರಶ್ನೆಗೆ ಮಹಿಳಾ ಮತ್ತು ಮಕ್ಕಳ ಸಚಿವೆ ಲಕ್ಷಿö್ಮÃ ಹೆಬ್ಬಾಳಕರ್ ಅವರು ಉತ್ತರ ನೀಡಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ನಾಲ್ಕು ತೆರೆದ ತಂಗುದಾಣಗಳಿದ್ದು, ಇವುಗಳನ್ನು ನಡೆಸುವ ಗೌತಮ ಗ್ರಾಮೀಣ ಸ್ವಯಂ ಸೇವಾ ಸಂಸ್ಥೆ, ವಿಶ್ವಭಾರತಿ ಗ್ರಾಮೀಣ ಅಭಿವೃದ್ಧಿ ಮಹಿಳಾ ಸಂಘಟನೆ, ವಿಶ್ವಸೇವಾ ಮಿಶನ್, ಇಂಟಿಗ್ರೇಟೆಡ್ ಡೆವಲ್ಪೆಮೆಂಟ್ ಆರ್ಗನೈಸೇಷನ್ ಈ ಸಂಸ್ಥೆಗಳ ವಿರುದ್ದ ಪ್ರಕರಣ ದಾಖಲಾಗಿದೆ.
ತೆರೆದ ತಂಗುದಾಣಗಳಿಗೆ 2023-24ರ ಸಾಲಿನಲ್ಲಿ ಯಾವುದೇ ಅನುದಾನ ನೀಡಿಲ್ಲ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಯಾವುದೇ ತಂಗುದಾಣಗಳಿಲ್ಲ ಎಂದು ಸಚಿವರು ಲಿಖಿತ ಉತ್ತರ ನೀಡಿದ್ದಾರೆ.