ತಳವಾರ ಸಮುದಾಯಕ್ಕೆ ಆದ ಅನ್ಯಾಯ ಸರಿಪಡಿಸಲು ಆಗ್ರಹಿಸಿ ಪ್ರತಿಭಟನೆ
ಕಲಬುರಗಿ,ಜು.31-ಕರ್ನಾಟಕದ ಅಟಲ್ ಜಿ ಜನಸ್ನೇಹಿ ತಂತ್ರಾAಶದಲ್ಲಿ ಪರಿಶಿಷ್ಟ ಪಂಗಡ ಪಟ್ಟಿ ಕ್ರ.ಸಂ.38ರಲ್ಲಿ ಸೇರಬೇಕಾದ ಒಂದೇ ತಳವಾರ ಜಾತಿಯನ್ನು ಲಾಗಿನ್‌ನಲ್ಲಿ ಸಂವಿಧಾನ ಬಾಹೀರವಾಗಿ ನಾಯ್ಕಡ ಪರಿವಾರ ಮತ್ತು ತಳವಾರ, ನಾಯಕ ಪರಿವಾರ ಮತ್ತು ತಳವಾರ, ನಾಯಕ ತಳವಾರ ಅಂತ 3 ರೀತಿಯಲ್ಲಿ ನಮೂದು ಮಾಡಿ ಅನಾವಶ್ಯಕವಾಗಿ ಗೊಂದಲ ಸೃಷ್ಠಿಸಿರುವ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಿ ಭಾರತ ಸರ್ಕಾರದ ಗೆಜೆಟ್ ಪ್ರಕಾರ ಕೇವಲ ಒಂದೇ ತಳವಾರ ಜಾತಿ ನಮೂದು ಮಾಡಿ ತಳವಾರ ಸಮುದಾಯಕ್ಕೆ ಆದ ಅನ್ಯಾಯ ಸರಿಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ತಳವಾರ ಎಸ್.ಟಿ.ಹೋರಾಟ ಸಮಿತಿ ನೇತೃತ್ವದಲ್ಲಿ ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.
ತೊನಸಳ್ಳಿ ಪೀಠದ ಕೊತಲಪ್ಪ ಮುತ್ಯಾ, ಗೊರವಗುಂಡಗಿ ಪೀಠದ ವರಲಿಂಗ ಸ್ವಾಮಿಗಳು, ಬಿಲ್ಲಾಡ ಸಂಸ್ಥಾನ ಮಠದ ಚೆನ್ನಬಸಪ್ಪ ಮುತ್ಯಾ, ಅವರಳ್ಳಿ ಪೀಠದ ಚಿದಾನಂದ ಸ್ವಾಮಿಗಳು, ಸಮಿತಿ ಅಧ್ಯಕ್ಷ ಡಾ.ಸರ್ದಾರ ರಾಯಪ್ಪ, ಸಮಾಜದ ಮುಖಂಡರಾದ ಅವ್ವಣ್ಣ ಮ್ಯಾಕೇರಿ, ಶರಣಪ್ಪ ತಳವಾರ, ಅವ್ವಣ್ಣಗೌಡ ಪಾಟೀಲ, ರೇವಣಸಿದ್ದಪ್ಪಗೌಡ ಕಮಾನಮನಿ, ಶಿವಾನಂದ ಹೊನಗುಂಟಿ, ಬಸವರಾಜ ಬೂದಿಹಾಳ, ಮಹಾಂತೇಶ ಪಾಟೀಲ, ಗುರು ಜೈನಾಪೂರ, ಸಂತೋಷ ಜೈನಾಪೂರ, ಭಾಗೇಶ ಹೋತಿನಮಡು, ಶಿವಪ್ಪ ಗಾಣೂರ, ಲಕ್ಷö್ಮಣ ಹೇರೂರ, ವಿದ್ಯಾಧರ ಮಂಗಳೂರ, ಬಸವರಾಜ ಸಪ್ಪನಗೋಳ, ಬಾಮಗೌಡ ಮಾಲಿಪಾಟೀಲ, ಬಸವರಾಜ ಹರವಾಳ, ಭೀಮಣ್ಣ ಹೆಡಗಿಜೋಳ, ದಿಗಂಬರ ಡಾಂಗೆ, ಮೈಲಾರಿ ಗುಡೂರ, ಅಂಬಾರಾಯ ಜವಳಗಾ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರತಿಭಟನೆ ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿಪತ್ರ ಸಲ್ಲಿಸಲಾಯಿತು.