ಪತ್ನಿ ಬದುಕಿಸಲು ಹೋಗಿ ಪತಿ, ಸಹೋದರ ಸಂಬಂಧಿ ಭೀಮೆ ಪಾಲು
ಅಫಜಲಪುರ,ಜು.31-ಕೌಟುಂಬಿಕ ಕಲಹದ ಹಿನ್ನೆಲೆ ಪತ್ನಿಯು ತುಂಬಿ ಹರಿಯುತ್ತಿದ್ದ ದೇವಣಗಾಂವ ಸೇತುವೆ ಮೇಲಿನಿಂದ ಭೀಮಾ ನದಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ವೇಳೆ ರಕ್ಷಣೆಗೆ ಧಾವಿಸಿದ ಪತಿ ಹಾಗೂ ಸಹೋದರ ಸಂಬAಧಿ ಸೋಮವಾರ ಸಂಜೆ 5:30 ರ ಸುಮಾರಿಗೆ ನದಿಯಲ್ಲಿ ನಾಪತ್ತೆಯಾಗಿ ಮಂಗಳವಾರ ಬೆಳಗಿನ ಜಾವ ಶವವಾಗಿ ಪತ್ತೆಯಾಗಿದ್ದಾರೆ.
ಅಫಜಲಪುರ ಪಟ್ಟಣದ ನಿವಾಸಿ ಲಕ್ಷ್ಮೀ ಕಣ್ಣಿ ಅವರು ಸೇತುವೆ ಮೇಲಿಂದ ಭೀಮಾ ನದಿಗೆ ಜಿಗಿದಾಗ ರಕ್ಷಣೆಗೆಂದು ಪತಿ ಶಿವಕುಮಾರ ಕಣ್ಣಿ (36) ಹಾಗೂ ಸಹೋದರ ಸಂಬAಧಿ ರಾಜು ಅಂಕಲಗಿ (39) ನದಿಗೆ ಜಿಗಿದಿದ್ದಾರೆ. ಮಹಿಳೆಯನ್ನು ಸ್ಥಳೀಯ ಮೀನುಗಾರರು ರಕ್ಷಿಸಿ ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆಂದು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಪತಿ ಹಾಗೂ ಸಹೋದರ ಸಂಬAಧಿ ಶವ ಪತ್ತೆ
ಪತ್ನಿಯ ರಕ್ಷಣೆಗೆ ಧಾವಿಸಿದ ಪತಿ ಶಿವಕುಮಾರ ಕಣ್ಣಿ ಹಾಗೂ ಸಹೋದರ ಸಂಬAಧಿ ರಾಜು ಅಂಕಲಗಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದರು. ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಸಂಜೆವರೆಗೂ ಜಂಟಿ ಕಾರ್ಯಾಚರಣೆ ನಡೆಸಿದರೂ ಇಬ್ಬರ ಪತ್ತೆಯಾಗಿರಲಿಲ್ಲ. ಹೀಗಾಗಿ ಇಂದು ಬೆಳಗಿನ ಜಾವ ಮತ್ತೆ ಕಾರ್ಯಾಚರಣೆ ಆರಂಭಿಸಿದ್ದು, ಇಬ್ಬರೂ ಶವವಾಗಿ ಪತ್ತೆಯಾಗಿದ್ದಾರೆ.
ಘಟನೆ ಕುರಿತಂತೆ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮಂದುವರಿದಿದೆ.
ಘಟನಾ ಸ್ಥಳಕ್ಕೆ ಎಸ್‌ಪಿ ಭೇಟಿ
ಮಂಗಳವಾರ ಸಂಜೆ ಘಟನಾ ಸ್ಥಳಕ್ಕೆ ಎಸ್.ಪಿ ಅಡ್ಡೂರು ಶ್ರೀನಿವಾಸುಲು ಅವರು ಭೇಟಿ ನೀಡಿ ಕುಟುಂಬಸ್ಥರು ಹಾಗೂ ಪೊಲೀಸರಿಂದ ಪ್ರಾಥಮಿಕ ಮಾಹಿತಿ ಪಡೆದರು. ಈ ವೇಳೆ ಸಿಪಿಐ ಚೆನ್ನಯ್ಯ ಹಿರೇಮಠ, ಪಿಎಸ್‌ಐ ಸೋಮಲಿಂಗ ಒಡೆಯರ್ ಹಾಜರಿದ್ದರು.
ಗೇಟ್ ಬಂದ್ ಮಾಡಿ ಕಾರ್ಯಾಚರಣೆ
ನಾಪತ್ತೆಯಾದವರ ಪತ್ತೆಗಾಗಿ ರಕ್ಷಣಾ ಕಾರ್ಯಾಚರಣೆಗೆ ಅಡೆತಡೆ ಉಂಟಾಗದAತೆ ಸೊನ್ನ ಭೀಮಾ ಆಣೆಕಟ್ಟಿನ ಹೊರ ಹರಿವಿನ ಗೇಟ್‌ಗಳನ್ನು ಬಂದ್ ಮಾಡಿ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು.
ಮುಗಿಲು ಮುಟ್ಟಿದ ಆಕ್ರಂದನ
ಇAದು ಬೆಳಗಿನ ಜಾವ ಅಫಜಲಪುರ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಶವಗಳನ್ನು ಮರಣೋತ್ತರ ಪರೀಕ್ಷೆಗೆ ತಂದಾಗ ಆಸ್ಪತ್ರೆಯ ಮುಂದೆ ಮೃತರ ಬಂಧು ಬಳಗ, ಹಿತೈಷಿಗಳು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.