ಅಟಲ್ ಬಿಹಾರಿ ವಾಜಪೇಯಿ ಶಾಲೆಯ ವಿದ್ಯಾರ್ಥಿಗಳ ಸಾಧನೆ
ವಿಜಯಪುರ,ಜು.31:ದಾವಣಗೆರೆಯಲ್ಲಿ ನಡೆದ ರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ನಗರದ ಅಟಲ್ ಬಿಹಾರಿ ವಾಜಪೇಯಿ ಶಾಲೆಯ ವಿಧ್ಯಾರ್ಥಿಗಳು ಗಣನೀಯ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿ ಸುಚೀತ್ ಗುಮಡಿ, ಕಥಾ ಮತ್ತು ಕುಮಿಥೆಯಲ್ಲಿ ಪ್ರಥಮ ಸ್ಥಾನ ಮತ್ತು ವಿರೇಶ ಇಳಜೇರಿ ಕಥಾ ಪ್ರಥಮ ಕುಮಿಥೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.ಇವರ ಸಾಧನೆಯನ್ನು ಕಂಡು
ಶ್ರೀ ಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷÀ ಹಾಗೂ ವಿಜಯಪುರÀ ಶಾಸಕ ಬಸನಗೌಡ ಪಾಟೀಲ, (ಯತ್ನಾಳ), ಉಪಾಧ್ಯಕ್ಷ ಸಂಗನಬಸಪ್ಪ ಸಜ್ಜನ.ಶ್ರೀ ಸಿದ್ದೇಶ್ವರ ಸಂಸ್ಥೆಯ ಚೇರಮನ್ ಬಸಯ್ಯ ಹಿರೇಮಠ, ಶ್ರೀ ಸಿದ್ದೇಶ್ವರ ಸಂಸ್ಥೆಯ, ಶಾಲಾ ನಾಮನಿರ್ದೇಶಿತ ಅಧ್ಯಕ್ಷ ಬಸವರಾಜ ಸುಗೂರ, ಸಂಸ್ಥೆಯ ಗೌರವಾನ್ವಿತ ಹಣಕಾಸು ಕಾರ್ಯದರ್ಶಿ ಸದಾನಂದ ದೇಸಾಯಿ, ಜಂಟಿ ಕಾರ್ಯದರ್ಶಿ ಎಮ್.ಎಮ್ ಸಜ್ಜನ, ಸಂಸ್ಥೆಯ ಕೋಶಾಧಿಕಾರಿ ಶಿವಾನಂದ ನೀಲಾ, ನಿರ್ದೇಶಕರಾದ ಸುಧೀರ ಚಿಂಚಲಿ, ನಾಗಪ್ಪ ಗುಗ್ಗರಿ, ಮಡಿವಾಳಪ್ಪ ಕರಡಿ ಮತ್ತು ಶಾಲಾ ಆಡಳಿತ ಅಧಿಕಾರಿ ಡಾ. ಎಚ್ ವೆಂಕಟೇಶ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಐಶ್ವರ್ಯ ಸಂಗಮ ಹಾಗೂ ಕರಾಟೆ ತರಬೇತಿದಾರÀ ಪ್ರವೀಣಕುಮಾರ ವಠಾರ ಹರ್ಷ ವ್ಯಕ್ತಪಡಿಸಿದ್ದಾರೆ.