ಕೊಲ್ಹಾರದಲ್ಲಿ ಆ. 2ರಂದು ವಿದ್ಯಾಭಾರತಿ ವಿಜಯಪುರ ಜಿಲ್ಲಾ ಮಟ್ಟದ ಕ್ರೀಡಾಕೂಟ ಆಯೋಜನೆ
ಕೊಲ್ಹಾರ: ಜು.31:ಇಲ್ಲಿನ ಸಂಗಮೇಶ್ವರ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ಸಂಗಮೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2024 ನೇ ಸಾಲಿನ ವಿದ್ಯಾಭಾರತಿ ಕರ್ನಾಟಕ ವಿಜಯಪುರ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಆಗಸ್ಟ್ 2ರಂದು ಬೆಳಿಗ್ಗೆ :9ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಎಸ್. ಬಿ. ಪತಂಗಿ ಪ್ರಕಟಣೆಗೆ ತಿಳಿಸಿದ್ದಾರೆ.
ಕ್ರೀಡಾಕೂಟದ ಉದ್ಘಾಟನೆಯನ್ನು ತಹಸೀಲ್ದಾರ ಎಸ್. ಎಸ್. ನಾಯಕಲಮಠ ನೆರವೇರಿಸುವರು.ಕ್ರೀಡಾ ದ್ವಜಾರೋಹಣ ವನ್ನು ಸಂಗಮೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬಿ.ಯು.ಗಿಡ್ಡಪ್ಪಗೋಳ ನೆರವೇರಿಸುವರು.ಕ್ರೀಡಾ ಜ್ಯೋತಿಯನ್ನು ತಾಲೂಕಾ ದೈಹಿಕ ಶಿಕ್ಷಣಾಧಿಕಾರಿ ಎಸ್.ಎಸ್.ಅವಟಿ ಸ್ವೀಕರಿಸುವರು.ಅಧ್ಯಕ್ಷತೆಯನ್ನು ವಿದ್ಯಾಭಾರತಿ ಕರ್ನಾಟಕ ವಿಜಯಪುರ ಜಿಲ್ಲಾಧ್ಯಕ್ಷ ಪ್ರಭು ಕಡಿ ವಹಿಸುವರು.ಮುಖ್ಯ ಅತಿಥಿಗಳಾಗಿ ವಿಜಯಪುರ ವಿದ್ಯಾಭಾರತಿ ಶಿಕ್ಷಣ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಕವಟಗಿಗಳಾಗಿ ಭಾಗವಹಿಸುವರು.ಗೌರವ ಉಪಸ್ಥಿತರಾಗಿ ಸಂಸ್ಥೆಯ ಕಾರ್ಯದರ್ಶಿ ಎಸ್.ಬಿ.ಪತಂಗಿ,ನಿರ್ದೇಶಕರಾದ ನಾಗಪ್ಪ ಮೇಲಗಿರಿ,ವಿನೀತಕುಮಾರ ದೇಸಾಯಿ,ಶಂಕ್ರಪ್ಪ ಕುಂಬಾರ,ಸುನAದಾಬಾಯಿ ಗಿಡ್ಡಪ್ಪಗೋಳ,ಚನಮಲ್ಲಪ್ಪ ಗಿಡ್ಡಪ್ಪಗೋಳ,ತುಳಸಿಗೆರೆಪ್ಪ ಹಗೇದಾಳ,ಶಿವಾನಂದ ಶೀಲವಂತ ಭಾಗವಹಿಸುವರು.ವಿಶೇಷ ಆಮಂತ್ರಿತರಾಗಿ ವಿದ್ಯಾಭಾರತಿ ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಜಶೇಖರ ಉಮರಾಣಿ,ವಿದ್ಯಾಭಾರತಿ ರಾಜ್ಯ ಸ್ವದೇಶಿ ವಿಷಯ ಪ್ರಮುಖ ರಾಜಶೇಖರ ಪಾಟೀಲ,ಕ್ರೀಡಾಭಾರತಿ ಕರ್ನಾಟಕ ಉತ್ತರ ರಾಜ್ಯ ಸಂಯೋಜಕ ಅಶೋಕ ಕೊಡಗಾನೂರ.ಸಂಗಮೇಶ್ವರ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಯಲಪ್ಪ ಶಿರೋಳ,ಜಿಲ್ಲಾ ಶಾರೀರಿಕ ಶಿಕ್ಷಣ ಪ್ರಮುಖ ಸಂಗನಗೌಡ ಗೌಡರ ಉಪಸ್ಥಿತರಿರುವರು ಎಂದರು.