ಪ್ರಕೃತಿ ಸಂರಕ್ಷಣಾ ಜಾಗೃತಿಯ ಅರಿವು
ವಿಜಯಪುರ,ಜು.31:ಪರಿಸರದ ರಕ್ಷಣೆಗಾಗಿ ವಾಯುಮಾಲಿನ್ಯ, ಪ್ಲಾಸ್ಟಿಕ ತ್ಯಾಜ್ಯದಿಂದ ಇಂಧನದ ಸಂರಕ್ಷಣೆ ಮತ್ತು ಸುಸ್ಥಿರ ಬಳಕೆಯವರೆಗೆ ಪರಿಸರ ಕಾಳಜಿಯ ಮೇಲೆ ವಿಶೇಷ ಬೆಳಕನ್ನು ಹರಿಸಬೇಕೆಂದು ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ. ಪ್ರತಿಮಾ .ಎಚ್ ಮಾತನಾಡಿದರು.
ಬಿ.ಎಲ್.ಡಿ.ಇ ಸಂಸ್ಥೆಯ ಬಂಗಾರಮ್ಮ ಸಜ್ಜನ ಮಹಿಳಾ ಮಹಾವಿದ್ಯಾಲಯದಲ್ಲಿ ವಿಶ್ವ ಪ್ರಕೃತಿ ಸಂರಕ್ಷಣಾ ದಿನದ ಅಂಗವಾಗಿ ಸಸ್ಯಶಾಸ್ತç ಉದ್ಯಾನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಪರಿಸರ ರಕ್ಷಣೆ ಮಾಡುವಲ್ಲಿ ಜವರು ಮತ್ತು ಸಸ್ಯಗಳನ್ನು ಸಂಪರ್ಕಿಸುವುದು, ವನ್ಯಜೀವಿ ಸಂರಕ್ಷಣೆಯಲ್ಲಿ ಡಿಜಿಟಲ್ ಆವಿಷ್ಕಾರವನ್ನು ಅನ್ವಯಿಸುವದು ಈ ವµðದ ಧ್ಯೇಯ ವಾಕ್ಯವಾಗಿz.ೆ ಸಸ್ಯ ದಿನವು ಜಗತ್ತಿನಲ್ಲಿ ಅಸ್ತಿತ್ವದಲ್ಲಿರುವ ಪರಿಸರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ವಾಯ್ ತಮ್ಮಣ್ಣ ಅವರು, ಪರಿಸರ ಸಮಸ್ಯೆಗಳು ಮತ್ತು ಅವುಗಳ ಮಹತ್ವದ ಬಗ್ಗೆ ಅರಿವು ಮೂಡಿಸಲು ಇಂತಹ ಪರಿಪೂರ್ಣ ಕಾರ್ಯಕ್ರಮಗಳು ಅವಶ್ಯಕವಾಗಿವೆ. ಇವು ಕೇವಲ ಆಚರಣೆಯಲ್ಲಿರದೆ ಕಾರ್ಯರೂಪಕ್ಕೆ ಬರಬೇಕು. ಅಂದಾಗ ಪರಿಸರವನ್ನು ಉಳಿಸಿಕೊಂಡು ಹೋಗಲು ಸಾಧ್ಯವಾಗುತ್ತದೆ ಎಂದರು.
ಈ ವೇದಿಕೆಯ ಮೇಲೆ ಐ.ಕ್ಯೂ.ಎ.ಸಿ ಸಂಯೋಜಕÀ ಪ್ರೊ. ವ್ಹಿ.ಎಸ್. ನಂದೇಶ, ಬಿ.ಎಸ್.ಸಿ ವಿಭಾಗದ ಸಂಯೋಜಕÀ ಪ್ರೊ. ಜಿ.ಕೆ. ಕುಲಕರ್ಣಿ ಕಾರ್ಯಕ್ರಮದಲ್ಲಿ ಬೋಧಕ, ಬೋಧಕೇತರ ಸಿಬ್ಭಂದಿ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು ಸಸ್ಯಶಾಸ್ತç ವಿಭಾಗದ ಮುಖ್ಯಸ್ಥÀ ಪ್ರೊ. ಸೌಮ್ಯ ಶೆಟ್ಟರ ಸ್ವಾಗತಿಸಿ ಪರಿಚಯಿಸಿದರು ಪ್ರಾಣಿಶಾಸ್ತç ವಿಭಾಗದ ಮುಖ್ಯಸ್ಥೆ ಪ್ರೊ.ರಾಧಾ ರೆಡ್ಡಿ ಪ್ರಶಸ್ತಿ ವಿತರಿಸಿದರು. ಕು.ಸನ್ಮತಿ ಪ್ರಾರ್ಥಿಸಿದಳು, ಕು.ರಶ್ಮೀ ವಂದಿಸಿದಳು ಕು.ಯಶಸ್ವಿನಿ ನಿರೂಪಿಸಿದಳು.