ಗ್ರಾಹಕರ ದಿನಾಚರಣೆ
ವಿಜಯಪುರ,ಜು.31:ಲಘು, ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಪ್ರದರ್ಶನ ಮತ್ತು ಗ್ರಾಹಕರ ಸಭೆ ನಗರದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಬೆಂಗಳೂರಿನ ವಲಯ ಕಾರ್ಯಲಯದ ಸಹಾಯಕ ಮಹಾಪ್ರಬಂಧಕ ಅನೀಲಕುಮಾರ ಉದ್ಘಾಟಿಸಿದರು. ಕಲಬುರ್ಗಿಯ ಕ್ಷೇತ್ರಿಯ ಸಹಾಯಕ ಮಹಾಪ್ರಬಂಧಕಿ ತೇಜಶ್ವಿನಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದ ನೇತೃತ್ವವನ್ನು ಇಲ್ಲಿಯ ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಮುಖ್ಯ ವ್ಯವಸ್ಥಾಪಕ ಶಿವಾನಂದ ರೆಡ್ಡಿ ಹಾಗೂ ಹಿರಿಯ ವ್ಯವಸ್ಥಾಪಕ ಸತೀಶ ಜೋಶಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಟಾಟಾ ಅಟೋಮೊಬೈಲ್‌ದ ಬಸವರಾಜ ಬಿಜ್ಜರಗಿ, ಉದ್ಯಮಿ ಸಜ್ಜನ, ಜಾಕೀರ ಸಮೂಹ ಸಂಸ್ಥೆಗಳ ಮುಖ್ಯಸ್ಥ ಎಚ್.ಎಂ. ಬಾಗವಾನ, ಗಣ್ಯ ಗ್ರಾಹಕ ಅನಿಲ ಅಣೆಪ್ಪನವರ, ಗುತ್ತಿಗೆದಾರ ಸೋಮಶೇಖರ ಬಂಡಿ, ಟ್ರಾನ್ಸ್ಪೋರ್ಟ್ ಮಾಲಿಕ ಅಶೋಕ ಉಪ್ಪಿನ ಹಾಗೂ ಡಾ. ಎಸ್.ಬಿ. ಮುದನೂರ ಭಾಗವಹಿಸಿದ್ದರು.
ಸತೀಶ ಜೋಶಿ ಸ್ವಾಗತಿಸಿ, ನಿರೂಪಿಸಿದರು. ಕಲಬುರ್ಗಿಯ ಮುಖ್ಯ ಪ್ರಬಂಧಕ ಮನೋಜ ಕುಲಕರ್ಣಿ ವಂದಿಸಿದರು.