ಮೊಬೈಲ್, ಶಾಲಾಚೀಲ, ಪುಸ್ತಕ ವಿತರಣೆ
ಗುರುಮಠಕಲ್:ಜು.31: ತಾಲೂಕಿನ ಕಂದಕೂರು ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಅನಂತ ಸೇವಾ ಟ್ರಸ್ಟ್ ನ ಸಹಯೋಗದಲ್ಲಿ ಮಿಲಾನ್ ಸಂಸ್ಥೆಯು ಹದಿಹರೆಯದ ಹೆಣ್ಣು ಮಕ್ಕಳಿಗಾಗಿ ಗರ್ಲ್ ಐಕಾನ್ ಕಾರ್ಯಕ್ರಮ ಕ್ಕೆ ಎರಡನೇ ಬ್ಯಾಚ್ ಗಾಗಿ ಆಯ್ಕೆ ಯಾದ ಹೆಣ್ಣು ಮಕ್ಕಳಿಗೆ ಮೊಬೈಲ್, ಶಾಲಾ ಚೀಲ, ಪುಸ್ತಕ, ಮತ್ತಿತರರ ಸಾಮಗ್ರಿಗಳನ್ನು ಈ ಸಂದರ್ಭದಲ್ಲಿ ಯಾದಗಿರಿ ಜಿಲ್ಲೆಯ ಸುಮಾರು 50 ಹೆಣ್ಣು ಮಕ್ಕಳನ್ನು 2024-25ನೇ ಸಾಲಿನ ಗರ್ಲ್ ಐಕಾನ್ ಫೆಲೋಶಿಪ್ ಕಾರ್ಯಕ್ರಮಕ್ಕೆ ಬರಮಾಡಿಕೊಳ್ಳಲಾಯಿತು. ಬಡತನ ರೇಖೆಗಿಂತ ಕೆಳಗಿರುವ 14 ರಿಂದ 18 ವಯಸ್ಸಿನ ಹೆಣ್ಣು ಮಕ್ಕಳನ್ನು ಗುರುತಿಸಿ ಅವರಿಗೆ ವಿವಿಧ ಹಂತದ ಆಯ್ಕೆ ಪ್ರಕ್ರಿಯೆಗಳನ್ನು ನಡೆಸಿ, ಕೊನೆಯ ಸುತ್ತಿನಲ್ಲಿ ಆಯ್ಕೆಗೊಂಡವರನ್ನು ಈ ಗರ್ಲ್ ಐಕಾನ್ ಫೆಲೋಶಿಪ್ ಕಾರ್ಯಕ್ರಮಕ್ಕೆ ಸೇರಿಸಿಕೊಳ್ಳಲಾಗಿದೆ.
ಮಿಲಾನ್ ಸಂಸ್ಥೆಯು ಕಳೆದ ಏಳು ವರ್ಷ ಗಳಿಂದ ಇದೆ ಮಾದರಿಯ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿದ್ದು ಹದಿಹರೆಯದ ಹೆಣ್ಣು ಮಕ್ಕಳನ್ನು ಆಯ್ಕೆ ಮಾಡಿ ಅವರಿಗೆ ನಾಯಕತ್ವ ತರಬೇತಿಯನ್ನು ನೀಡುತ್ತಿದೆ. ಪ್ರತಿ ವರ್ಷದಂತೆ ಈ ವರ್ಷವೂ ಈಗಾಗಲೇ 250 ಹೆಣ್ಣು ಮಕ್ಕಳನ್ನು ಗರ್ಲ್ ಐಕಾನ್ ಫೆಲೋಶಿಪ್ ಕಾರ್ಯಕ್ರಮಕ್ಕೆ ಸೇರಿಸಿಕೊಳ್ಳಲಾಗಿದ್ದು ಅವರಿಗೆ ಈಗಾಗಲೇ ಮೊದಲ ಹಂತದ ತರಬೇತಿಯು ಮುಗಿದಿದೆ. ಹೀಗೆ ಆಯ್ಕೆಯಾದ ಮಕ್ಕಳನ್ನು ಗರ್ಲ್ ಐಕಾನ್ ಎಂದು ಗುರುತಿಸಲಾಗುತ್ತಿದೆ. ಮುಂದಿನ ಒಂದು ವರ್ಷ ಅವಧಿಯಲ್ಲಿ ಈ ಬಾಲಕಿಯರಿಗೆ ವ್ಯಕ್ತಿತ್ವ ವಿಕಾಸನ, ಹದಿಹರೆಯದವರ ಅರೋಗ್ಯ ಮತ್ತು ಶಿಕ್ಷಣದ ಮಹತ್ವದ ಕುರಿತು ತರಬೇತಿಗಳನ್ನು ನೀಡುವ ಮೂಲಕ ಅವರು ತಮ್ಮ ಹಾಗೂ ತಮ್ಮಂತಹ ಇತರ ಬಾಲಕಿಯರ ಬದುಕಿನಲ್ಲಿ ಬದಲಾವಣೆಯ ನಾಂದಿ ಹಾಡಲು ಉತ್ತೇಜಸುವುದು ಮಿಲಾನ್ ಫೌಂಡೇಶನ್ ಹಾಗೂ ಅನಂತ ಸೇವಾ ಸಂಸ್ಥೆಯ ಉದ್ದೇಶವಾಗಿದೆ.
ಇಂತಹ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಕಂಡು ಬರುವಂತಹ ಸಾಮಾಜಿಕ ಪಿಡುಗುಗಳಾದ ಬಾಲ್ಯವಿವಾಹ, ಬಾಲಕಾರ್ಮಿಕತೆ, ಹೆಣ್ಣು ಬ್ರೊಣಹತ್ಯೆ, ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವುದು. ಜಾತಿ ಭೇದ, ವರದಕ್ಷಿಣೆ, ಮಕ್ಕಳ ಮೇಲಾಗುವ ದೌರ್ಜನ್ಯಗಳ ವಿರುದ್ದ ಹೆಣ್ಣು ಮಕ್ಕಳು ಧ್ವನಿ ಎತ್ತಲು ಪ್ರೆರೇಪಿಸಲಾಗುತ್ತದೆ.
ಕರ್ನಾಟಕದಲ್ಲಿ ಮಿಲಾನ್ ಹಾಗೂ ಅನಂತ ಸೇವಾ ಸಂಸ್ಥೆಯು ಪ್ರಸ್ತುತ ಸುಮಾರು 1500ಕ್ಕೂ ಹೆಚ್ಚು ಬಾಲಕಿಯರನ್ನು ಗರ್ಲ್ ಐಕಾನ್ ಸ್ವಯಂ ಸೇವಕರನ್ನು ಹೊಂದಿದೆ. ಸಾಮಾಜಿಕ ಬದಲಾವಣೆ ತರುವ ನಿಟ್ಟಿನಲ್ಲಿ ಕಾಳಜಿ ವಹಿಸಿ ಕೆಲಸ ಮಾಡುತ್ತಿರುವ ಅನಂತ ಸೇವಾ ಟ್ರಸ್ಟ್ ಹಾಗೂ ಮಿಲಾನ್ ಸಂಸ್ಥೆಯ ಉದ್ದೇಶಗಳನ್ನು ಇನ್ನಿತರ ಬಾಲಕಿಯರು ಹಾಗೂ ಪೋಷಕರು ಅರ್ಥ ಮಾಡಿಕೊಂಡು ಅದರ ಸದುಪಯೋಗ ಪಡೆದುಕೊಳ್ಳುವಂತಗಲಿ ಎಂದು ಆಶಿಸೋಣ.
ಈ ಸಂದರ್ಭದಲ್ಲಿ ಮಿಲಾನ್ ಸಂಸ್ಥೆಯ ಗರ್ಲ್ ಐಕಾನ್ ತರಬೇತುದಾರರದ ವಿದ್ಯಾ ಶಿವರಾಮ್ ಕಾರ್ಯಕ್ರಮ ಸಂಯೋಜಕರಾದ ಸಿಮ್ರಿನ್ ಮತ್ತು ಪೂಜಾ ಗಡಗಿ ಹಾಗೂ ಯೋಜನಾ ಸಹಾಯಕರಾದ ರಾಧಿಕಾ, ರಶ್ಮಿ, ಮುಸ್ಕಾನ್, ಕವಿತಾ, ಪೂರ್ಣಿಮಾ
ಅನಂತ ಸೇವಾ ಟ್ರಸ್ಟ್ ನ ಸಂಸ್ಥಾಪಕರು ಶರಣಪ್ಪ ಎಸ್ ಕಂದಕೂರು, ನಿರ್ದೇಶಕರು ಶ್ರೀಮತಿ ದೇವಕ್ಕಿ, ಟ್ರಸ್ಟಿ ಜಿ ನಾಗೇಶ್ ಕುಮಾರ್, ಆನಂದ್ ಬೂದಿ, ಯಶವಂತ ಹಾಗೂ ಸಿಬ್ಬಂದಿ ವರ್ಗದವರು ಇದ್ದರು.