ದುಬಾರಿ ವೆಚ್ಚದ ಕಳೆನಾಶಕ್ಕೂ ಕುಗ್ಗದ ಬೆಳೆಯಲ್ಲಿನ ಹುಲ್ಲು: ರೈತ ಕಂಗಾಲು
ಆಳಂದ:ಜು.31: ಹಲವು ದಶಕಗಳ ಬಳಿಕ ಇದೇ ಮೊದಲು ಬಾರಿಗೆ ಮುಂಗಾರಿನಲ್ಲಿ ಸಕಾಲಕ್ಕೆ ಮಳೆಯಾಗಿ ಬಿತ್ತನೆಯಾದ ಬೆಳೆ ಉತ್ತಮವಾಗಿದೆ ಎಂದು ಸಂತಷದಲ್ಲಿರುವ ರೈತರ ಸಮುದಾಯಕ್ಕೆ ಬೆಳೆ ನಿರ್ವಹಿಸುವುದಕ್ಕಾಗಿ ದುಬಾರಿ ವೆಚ್ಚದ ಔಷದಿ ಮತ್ತು ಔಷಧಿ ಸಿಂಪರಣೆಗೆ ತಗಲುವ ವೆಚ್ಚ ಭರಿಸುವಲ್ಲೇ ತತ್ತರಿಸುವಂತೆ ಮಾಡಿದೆ.
ಬೆಳೆಗೆ ಸಾಕಷ್ಟು ಪ್ರಮಾಣದ ಮಳೆ ಲಭ್ಯವಾಗಿದ್ದು, ಆದರೆ ಬೆಳೆ ಬೆಳೆಯುತ್ತಿದ್ದಂತೆ ಉದ್ದು, ಹೆಸರು, ಸೋಯಾ, ಸೂರ್ಯಕಾಂತಿ ಬೆಳೆಗೆ ಹೇನು, ಕೀಟ ಬಾಧೆ ಆವರಿಸಿದ್ದು, ಮತ್ತು ಸತತ ಮಳೆಯಿಂದ ಪ್ರತಿಯೊಂದು ಬೆಳೆಯಲ್ಲಿ ಕಳೆ ಹೆಚ್ಚಾಗಿದ್ದು ಕಳೆ ನಿವಾರಿಸಲು ಕೃಷಿ ಕಾರ್ಮಿಕರಿಂದ ಕಳೆ ತೆಗೆಯುತ್ತಿದ್ದ, ಕಾರ್ಮಿಕ ದೊರೆಯದ ರೈತರು ದುಬಾರಿ ವೆಚ್ಚದ ಔಷಧಿ ಸಿಂಪರಣೆಗೆ ಮುಂದಾಗಿದ್ದು, ಇದರಿಂದ ಉತ್ಪಾದನೆಗಿಂತ ಖರ್ಚಿನ ಬಾಬತ್ತು ಹೆಚ್ಚುತ್ತಿದ್ದರಿಂದ ಸಂಪಕಷ್ಟ ತಪ್ಪದಂತಾಗಿ ಮಾರ್ಪಟ್ಟಿದೆ ಎಂದು ರೈತ ಸಮುದಾಯ ಹೇಳಿಕೊಂಡಿದೆ.
ಫಲ ನೀಡದ ಕಳೆನಾಶಕ:
ಬೆಳೆಯಲ್ಲಿನ ಹುಲ್ಲು ತೆಗೆಯಲು ದುಬಾರಿ ಬೆಲೆಯ ಕಳೆನಾಶಕ ಔಷಧಿ ಸಿಂಪರಣೆ ಕೈಗೊಂಡರು ಹುಲ್ಲು ನಾಶವಾಗುತ್ತಿಲ್ಲ. ನೀವು ಕೊಟ್ಟ ಕಳೆನಾಆಶ ಸಿಂಪರಣೆ ಬಳಿಕವೂ ಹುಲ್ಲು ನಾಶವಾಗಿಲ್ಲ ಎಂದು ಖರೀದಿಸಿ ಔಷಧಿ ಅಂಗಡಗಿಗಳಿಗೆ ಅನೇಕ ರೈತರು ದೂರುತೊಡಗಿದ್ದರಿಂದ ಅಂಗಡಿಯವರು ಕಳೆನಾಶಕ ಔಷಧಿ ಮಾರಾಟಕ್ಕೆ ಕೊಂಚ ಬ್ರೇಕ್ ಹಾಕತೊಡಗಿದ್ದಾರೆ. ಆದರೆ ರೈತರ ದುಡ್ಡು ಖರ್ಚು ಖರೀದಿಸಿದ ಕಳೆನಾಶ ಔಷಧಿ ಸಿಂಪರಣೆ ಮಾಡಿ ಶ್ರಮಪಟ್ಟರು ಬೆಳೆಯಲ್ಲಿನ ಕಳೆನಾಶವಾಗದೆ ಇರುವುದು ರೈತ ಸಮುದಾಯವೂ ಚಿಂತಿತವಾಗಿದೆ.
ಅಲ್ಪಾವಧಿ ಬೆಳೆ:
ತಾಲೂಕಿನಲ್ಲಿ ಕೃಷಿ ಇಲಾಖೆ ಅಂದಾಜಿಸಿದ್ದAತೆ ಅಲ್ಪಾವಧಿ ಬೆಳೆ ಉದ್ದು 6550 ಹೆಕ್ಟೇರ್‌ನಲ್ಲಿ 5240 ಟನ್ ಉತ್ಪಾದನೆ, ಹೆಸರು 2550 ಹೆಕ್ಟೇರ್‌ನಲ್ಲಿ 1913 ಟನ್ ಉತ್ಪಾದನೆ, ಮತ್ತು ನೀರಾವರಿ ಹೆಸರು 50 ಹೆಕ್ಟೇರ್‌ನಲ್ಲಿ 50ಟನ್, ಉತ್ಪಾದನ ಗುರಿ ಹೊಂದಿದೆ.
ಹೇನು ಬಾಧೆ ಕೀಟ ನಿರ್ವಹಣೆ:
ಕಲಬುರಗಿ ಕೃಷಿ ವಿಜ್ಞಾನ ಕೇಂದ್ರ ಸಸ್ಯರೋಗ ವಿಜ್ಞಾನಿ ಡಾ. ಜಹೀರ್ ಅಹ್ಮದ್ ಅವರು ಬೆಳೆಯ ವೈರಸ್ ಪೀಡಿತ ಹಳದಿ ಗಿಡಗಳನ್ನು ಕಿತ್ತಿನಾಶಪಡಿಸಿ ಆರೋಗ್ಯವಂತ ಗಿಡಗಳಿಗೆ ರೈತ ಸಂಪರ್ಕ ಕೇಂದ್ರದಲ್ಲಿ ಸಬ್ಸಿಡಿಯಲ್ಲಿ ದೊರೆಯುವ ಬೇವಿನ ಎಣ್ಣೆ ಪ್ರತಿ ಲೀಟರ್ ನೀರಗೆ 2 ಎಂಎಲ್ ಬೆರಿಸಿ ಸಿಂಪರಿಸಬೇಕು ಎಂದು ಸಲಹೆ ನೀಡಿದ್ದಾರೆ.
ನುಸಿ ಹಾಗೂ ಮದುಡಿರೋಗ ಹತೋಟಿಕೆ, ನೆತ್ತಿಸುಡುವ ರೋಗ ಹತೋಟಿಗೆ ಟಿಯಾಮಿಟಾಗ್ಜಂ ಅರ್ಧ ಗ್ರಾಮ ಪ್ರತಿ ಲೀಟರ್ ನೀರಿನಲ್ಲಿ ಅಥವಾ ಇಮಿಡಾ ಗ್ಲೊಪಿಟ್ ಅರ್ಧ ಎಂಎಲ್ ಪ್ರತಿ ಲೀಟರ್ ನೀರಿನಲ್ಲಿ ಬೆರಿಸಿ ಸಿಂಪರಿಸಬೇಕು. ಉತ್ತಮ ಇಳುವರಿಗಾಗಿ ಸಮಗ್ರ ಪೋಷಕಾಂಶ ಮಿಶ್ರಣವನ್ನು ಎರಡು ಮಿಲಿ ಪ್ರತಿ ಲೀಟರ್ ನೀರನಲ್ಲಿ ಹಾಗೂ ಹೇನಿನ ಬಾಧೆ ಅತಿಯಾಗಿ ಕಂಡಿದೆ. ಡೈಮಿಮಿಟೋಏಟ್ 2 ಎಂಎಲ್. ಪ್ರತಿಲೀಟರ್ ನೀರಿಗೆ ಬೇರಸಿ ಸಿಂಪಡಿಸಬೇಕು ಬೆರಿಸಿ ಸಿಂಪರಿಸಬೇಕು ಎಂದು ತಿಳಿಸಿದ್ದಾರೆ.
ಕಳೆ ನಿವಾರಣೆಗೆ ಸಲಹೆ:
ತೊಗರಿ, ಹೆಸರು, ಉದ್ದು, ಸೋಯಾಬೀನಗೆ ಪ್ರೊಪಾಕ್ವಿಜಾಫೋಪ್ + ಇಮೇಜೆಥಪೈರ್ 400 ಎಮ್.ಎಲ್. ಪ್ರತಿ ಎಕರೆ (2 ಎಮ್.ಎಲ್./ಲೀಟರ್) ಬೆಳೆಗೆ ಬಿತ್ತನೆಯಾದ ನಂತರ 25 ರಿಂದ 30 ದಿನಗಳಲ್ಲಿ ಸಿಂಪಡಿಸಬೇಕು. ಹತ್ತಿಗೆ: ಪೈರಿಥಿಯೋಬಾಕ್ ಸೋಡಿಯಂ 300 ಎಮ್.ಎಲ್. ಪ್ರತಿ ಎಕರೆ ಬೆಳೆವಿತ್ತ ನಂತರ 25 ರಿಂದ 30 ದಿನಗಳಲ್ಲಿ ಸಿಂಪಡಿಸಬೇಕು.
ಬೆಳೆಗಿಂತ ಕಳೆ ದೊಡ್ಡದ್ದಾಗಿದ್ದರೆ ಮತ್ತು ನಿಂರತ ಜಿಟಿ, ಜಿಟಿ ಮಳೆಯಿದ್ದರು. ಔಷಧಿ ಸಿಂಪರಣೆಗಳಿAದ ಕಳೆ ನಿಯಂತ್ರಣ ಸಾಧ್ಯವಾಗದು. ಕಳೆನಾಶಕ ಸಿಂಪರಣೆಯ ಬಳಿಕ ಒಂದೆರಡೂ ದಿನಗಳಾದರು ಮಳೆಯಾಗಬಾರದು. ಎಲ್ಲಾ ಬೆಳೆಗಳಲ್ಲಿನ ಕಳೆನಾಶಕ್ಕೆ ಒಂದೇ ಔಷಧಿ ಇರುವುದಿಲ್ಲ. ಆಯಾ ಬೆಳೆಗೆ ಸಿಫಾರಸು ಮಾಡಿದ ಕಳೆನಾಶಕ ಔಷಧಿ ಬೇರೆ ಬೇರೆ ಬೇರೆ ಯಾಗಿದ್ದು ಸೀಫಾರಸ್ಸು ಔಷಧಿಯನ್ನೇ ಬಳಿಸಬೇಕು. ಉದಯೋತ್ತರ ಕಳೆನಾಶಕಗಳು. ತೊಗರಿ, ಹೆಸರು, ಉದ್ದು, ಸೋಯಾ ಅವರೆ ಬೆಳೆಯಲ್ಲಿನ ಕಳೆ ನಾಶಕಕ್ಕೆ ಈವೊಂದು ಔಷಧಿ ಸಿಂಪರಿಸಬೇಕು.
ಡಾ. ಪಂಡಿತ ರಾಠೋಡ ಪ್ರಾಧ್ಯಾಪಕರು
ಕೃಷಿ ಮಹಾವಿದ್ಯಾಲಯ ಕಲಬುರಗಿ.