ರಾಷ್ಟ್ರಮಟ್ಟದ ನೃತ್ಯ ಕಾರ್ಯಕ್ರಮಕ್ಕೆ ಶಾಸಕ ಅಲ್ಲಮ ಪ್ರಭು ಪಾಟೀಲ್ ಚಾಲನೆ
ಕಲಬುರಗಿ:ಜು.31: ನಗರದ ಎಸ್ ಎಂ ಪಂಡಿತ ರಂಗಮAದಲ್ಲಿ ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ರಾಜ್ಯ ರಾಷ್ಟ್ರದಲ್ಲಿ ನೃತ್ಯದಲ್ಲಿ ಸಾಧನೆ ಮಾಡಿದ ಡ್ಯಾನ್ಸ್ ಮಾಸ್ಟರ್ ಸತೀಶ್ ಕಾಳನೂರ ಅವರು ಆಯೋಜಿಸಿದ ರಾಷ್ಟ್ರಮಟ್ಟದ ನೃತ್ಯ ಕಾರ್ಯಕ್ರಮವನ್ನು ಶಾಸಕ ಅಲ್ಲಮ ಪ್ರಭು ಪಾಟೀಲ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ತಿನ ಸದಸ್ಯರು ಮತ್ತು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಶಿಲ ನಮೋಶಿ. ವಿಶೇಷವಾಗಿ ಡ್ಯಾನ್ಸ್ ರಿಯಾಲಿಟಿ ಶೋ ನ ವಿಜೇತರಾದ ಖ್ಯಾತ ಡ್ಯಾನ್ಸ್ ಮಾಸ್ಟರ್ ಸಂಕೇತ್ ಗಾವ್ಕರ್, ಕಾರ್ಯಕ್ರಮ ಸಂಯೋಜಕ ಡ್ಯಾನ್ಸ್ ಮಾಸ್ಟರ್ ಸತೀಶ್ ಕಾಳನೂರ, ಖ್ಯಾತ ವೈದ್ಯರಾದ ಶರಣಬಸಪ್ಪ ಕಾಮರೆಡ್ಡಿ, ಕ್ಯಾತ ಹೋಟೆಲ್ ಉದ್ಯಮದಾರರಾದ ಲಕ್ಷ್ಮಿ ಪುತ್ರ (ಪಲ್ಲವಿ), ಕವರ್ಜಿತ್ ಸಿಂಗ್, ಪ್ರೊ. ಡಾ. ವಾಸುದೇವ್ ಎಚ್ ಸೇಡಂ, ನಿವೃತ ಸೈನಿಕರಾದ ಮಹದೇವ್ ಚವ್ಹಾಣ, ಶ್ರೀನಿವಾಸ್ ಹಿಪ್ಪರಗಿ, ರಾಜು ವಾಡೆಕರ್, ಗೀತಾ ಆರ್ ವಡೆಕರ್, ಬಂಡಪ್ಪ ದನ್ನಿ, ಕರವೇ ವಿಭಾಗೀಯ ಅದ್ಯಕ್ಷ ಅಭಿಷೇಕ್ ಬಾಲಾಜಿ, ಅಂತರಾಷ್ಟ್ರೀಯ ಕರಾಟೆ ಪಟು ಮನೋಹರಕುಮಾರ್ ಬೀರನೂರ, ಗೋಪಾಲ್ ನಾಟಿಕರ್, ಮಾನಸಿಂಗ್ ಚವ್ಹಾಣ, ಮಲಶೆಟ್ಟಿ ಕೋಳಕೂರ, ಶರಣರೆಡ್ಡಿ, ದಯಾನಂದ್ ಹಿರೇಮಠ್ ಸೇರಿದಂತೆ ಇತರರು ಇದ್ದರು.