ಮಾನವ ಕಳ್ಳಸಾಗಾಣಿಕೆ ಸಾಮಾಜಿಕ ಪಿಡುಗು: ಅಪ್ಪಸಾಹೇಬ್ ಕೊಳಕೂರ್
ಜೇವರ್ಗಿ:ಜು.31: ತಾಲೂಕು ಕಾನೂನು ಸೇವೆಗಳ ಸಮಿತಿ ಜೇವರ್ಗಿ ಹಾಗೂ ವಕೀಲರ ಸಂಘ ಸೇರಿದಂತೆ ಶಿಕ್ಷಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಮಾನವ ಕಳ್ಳಸಾಗಣಿಕೆ ವಿರೋಧಿ ದಿನಾಚರಣೆಯನ್ನು ಇಲ್ಲಿನ ಆದರ್ಶ ವಿದ್ಯಾಲಯ ಚೆನ್ನೂರನಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಗೌರವಾನ್ವಿತ ಶ್ರೀ ಕಾಶಿನಾಥ್ ಉಪ್ಪಾರ್ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳು ಹಾಗೂ ಸದಸ್ಯ ಕಾರ್ಯದರ್ಶಿಗಳು ತಾಲೂಕು ಕಾನೂನು ಸೇವಾ ಸಮಿತಿ ಜೇವರ್ಗಿ ಇವರು ನೆರವೇರಿಸಿದರು.
ಉಪನ್ಯಾಸವನ್ನು ನೀಡಿ ಮಾತನಾಡಿದ ವಕೀಲರಾದ ಅಪ್ಪಾಸಾಬ್ ಕೊಳಕೂರ ಮಾನವ ಕಳ್ಳ ಸಾಗಾಣಿಕೆ, ಲೈಂಗಿಕ ,ಶೋಷಣೆ, ಅಂಗಾAಗಗಳ ಮಾರಾಟ ಸೇರಿದಂತೆ ಕಳ್ಳ ಸಾಗಾಣಿಕೆಯು ಬಹುದೊಡ್ಡ ಸಾಮಾಜಿಕ ಪಿಡುಗಾಗಿದೆ. ಮಹಿಳೆಯರು ಮಕ್ಕಳು ಸೇರಿದಂತೆ ಅಪ್ರಾಪ್ತ ಹೆಣ್ಣು ಮಕ್ಕಳ ಸಾಗಾಣಿಕೆ ತಡೆಯುವುದು ಅಗತ್ಯ ಮತ್ತು ಅನಿವಾರ್ಯವಾಗಿದೆ ಎಂದು ಹೇಳಿದರು.
ಸಹಾಯಕ ಸರ್ಕಾರಿ ಅಭಿಯೋಜಕರಾದ ನಾಗವೇಣಿ ಧನ್ನ ಹಾಗೂ ಹಿರಿಯ ಶ್ರೇಣಿ ನ್ಯಾಯಾಲಯದ ಸರಕಾರಿ ಸಹಾಯಕ ಅಭಿಯೋಜಕರು ಬಸಲಿಂಗಮ್ಮ ಸೇರಿದಂತೆ ಆರಕ್ಷಕ ನಿರೀಕ್ಷಕರಾದ ರಾಜೇಸಾಬ್ ನದಾಫ್ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಆದರ್ಶ ವಿದ್ಯಾಲಯ ಚೆನ್ನೂರು ಮುಖ್ಯ ಗುರುಗಳಾದ ಮಲ್ಲಿಕಾರ್ಜುನ್ ಹೂಗಾರ್ ಸೇರಿದಂತೆ ವಕೀಲರ ಸಂಘದ ಅಧ್ಯಕ್ಷರಾದ ಎಂ.ಐ ಸೂಗೂರ್ ಕಾರ್ಯದರ್ಶಿಗಳಾದ ಬಿ ಎನ್ ಕೊಂಬಿನ್, ವಕೀಲರಾದ ಎಂ.ಡಿ ದಾವುದ್ ,ಟಿ.ಎಲ್.ಎಸ್.ಸಿ ಯ ಸಹಾಯಕ ಆಡಳಿತಗಾರ ಹುಣಿಚಿರಾಯ ಎಚ್ ನಾಟೀಕಾರ,ಹಾಗೂ ಶ್ರೀಕಾಂತ್ ದೊಡ್ಡಮನಿ ಹಾಗೂ ಶಾಲೆಯ ಶಿಕ್ಷಕರು ಸಿಬ್ಬಂದಿ ವರ್ಗ ಸೇರಿದಂತೆ ಮಕ್ಕಳ ಭಾಗವಹಿಸಿದ್ದರು.