ಸುಸೂತ್ರವಾಗಿ ನಡೆದ ಸಂಗೀತ ಪರೀಕ್ಷೆ
ಕಲಬುರಗಿ:ಜು.31: ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಿಂದ ರಾಜ್ಯ ಮಟ್ಟದ ವಿಶೇಷ ಸಂಗೀತ ನೃತ್ಯ ಹಾಗೂ ತಾಳವಾದ್ಯ ಪರೀಕ್ಷೆ ಶಾಸ್ತç (ಲಿಖಿತ) ಪರೀಕ್ಷೆಯ ಜೂನಿಯರ್, ಸೀನಿಯರ್, ವಿದ್ವತ್ ಪೂರ್ವ ಹಾಗು ವಿದ್ವತ್ ಅಂತಿಮ ಪರೀಕ್ಷೆಗಳು ಕಳೆದ ಶನಿವಾರ ದಿನಾಂಕ 27-07-2024 ಮತ್ತು ರವಿವಾರ 28-07-2024 ರಂದು ಕಲಬುರಗಿಯ ನೂತನ ವಿದ್ಯಾಲಯ ಸಂಸ್ಥೆಯ ಪದವಿ ಮಹಾವಿದ್ಯಾಲಯದಲ್ಲಿ ಶಾಸ್ತç ಹಾಗೂ ಮೌಖಿಕ ಪರೀಕ್ಷೆಗಳು ಜರುಗಿದವು.
ಕಲಬುರಗಿ ಜಿಲ್ಲೆ ಪರೀಕ್ಷಾ ಕೇಂದ್ರದಲ್ಲಿ- ಕಲಬುರಗಿ, ರಾಯಚೂರು, ಬೀದರ, ಹಾಗೂ ಯಾದಗೀರ ಜಿಲ್ಲೆಯ ವಿದ್ಯಾರ್ಥಿಗಳು ಪರೀಕ್ಷೆ ಬರೆದಿರುತ್ತಾರೆ. ಮಾನ್ಯ ಕುಲಕಪತಿಗಳಾದ ನಾಗೇಶ ಬೆಟ್ಟಕೋಟೆ ಇವರ ನಿರ್ದೇಶನದಲ್ಲಿ ಜೂನಿಯರ್, ಸೀನಿಯರ್, ವಿದ್ವತ್ ಪೂರ್ವ ಹಾಗು ವಿದ್ವತ್ ಅಂತಿಮ ಪರೀಕ್ಷೆಗಳು ಯಾವುದೇ ಗೊಂದಲವಿಲ್ಲದೆ ಯಶಸ್ವಿಯಾಗಿ ನಡೆದಿರುತ್ತವೆ ಎಂದು ಪರೀಕ್ಷಾ ಕೇಂದ್ರದ ಮುಖ್ಯಸ್ಥರಾದ ಡಾ. ರಾಘವೇಂದ್ರ ಕುಲಕರ್ಣಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ನಿಯೋಜನೆಗೊಂಡಿರುವ ಶ್ರೀ ಆದರ್ಶ ಹೆಚ್. ಅವರು ತಿಳಿಸಿರುತ್ತಾರೆ.