ಬಾಂಧವ್ಯ ಬೆಸುಗೆಯಿಂದ ಮಾನಸಿಕ ಒತ್ತಡ ಕಡಿಮೆಗೊಳ್ಳುತ್ತದೆ: ಡಾ. ನಾಗೇಶ ಪಾಟೀಲ
ಬೀದರ : ಜು.31:ಪ್ರತಿಯೊಬ್ಬರು ಇಂದು ಒಂದಿಲ್ಲಾ ಒಂದು ರೀತಿಯ ಒತ್ತಡದಲ್ಲಿ ಬದುಕುತ್ತಿದ್ದಾರೆ. ಒತ್ತಡದಿಂದ ಹೊರಬರಬೇಕಾದರೆ ಕೌಟುಂಬಿಕ ಸಾಮಾರಸ್ಯ ಮುಖ್ಯವಾಗಿದೆ ಎಂದು ಖ್ಯಾತ ದಂತವೈದ್ಯ ಡಾ. ನಾಗೇಶ ಪಾಟೀಲ ನುಡಿದರು. ಅವರು ಬೀದರ ಸಪ್ನಾ ಕನ್ವೆನ್ಷನ್ ಹಾಲ್ ದಲ್ಲಿ ಬಸವ ಬಾಂಧವ್ಯ ಬಳಗದ 14ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ಇಂದು ಸಂಬAಧಗಳು ಮೌಲ್ಯ ಕಳೆದುಕೊಳ್ಳುತ್ತಿವೆ. ಭಾವನೆಗಳು ಬತ್ತಿ ಹೋಗುತ್ತ, ಪ್ರೀತಿ, ಪ್ರೇಮ, ವಾತ್ಸಲ್ಯ ಮಮಕಾರ ಬಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಆದರೆ ಬಸವ ಬಾಂಧವ್ಯ ಬಳಗವು ಸಮಾಜದಲ್ಲಿ ಸಾಮಾರಸ್ಯ ಮೂಡಿಸುವ, ಸಂಬAಧ ಗಟ್ಟಿಗೊಳಿಸುವ, ಸಕರಾತ್ಮ ಸದ್ಭಾವನೆ ಮೂಡಿಸುವ ನಿಟ್ಟಿನಲ್ಲಿ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿದ ಹಿರಿಯ ಸಾಹಿತಿ ಜಗನ್ನಾಥ ಮೂಲಗೆ ಅವರು ಮಾತನಾಡುತ್ತ ಎರಡನೇಯ ಜಾಗತಿಕ ಮಹಾಯುದ್ದದ ನಂತರ ವಿಶ್ವ ಶಾಂತಿ ಕಾಪಾಡಲು ವಿಶ್ವ ಸಂಸ್ಥೆ ಹುಟ್ಟಿದೆ. ಆದರೆ ಬಸವಾದಿ ಶರಣರು ಕಲ್ಯಾಣ ನಾಡಿನಲ್ಲಿ 12ನೇ ಶತಮಾನದಲ್ಲಿಯೇ ಸಕಲ ಜೀವಾತ್ಮರಿಗೆ ಲೇಸು ಬಯಸುವ ಅನುಭವ ಮಂಟಪದ ಸ್ಥಾಪನೆ ಮಾಡುವ ಮೂಲಕ ವಿಶ್ವ ಶಾಂತಿಯ ಸಂದೇಶ ಸಾರಿದರು ಎಂದು ತಿಳಿಸಿದರು.
ಬಸವಾದಿ ಶರಣ ಸಂದೇಶವನ್ನು ಪ್ರಸಾರ ಮಾಡುವ ಮೂಲಕ ಸಮಾಜ, ಧಾರ್ಮಿಕ ಸೇವೆ ಮಾಡುತ್ತಿರುವ ಬಳಗದ ಕಾರ್ಯವು ಹೀಗೆ ನಿರಂತರವಾಗಿ ನಡೆಯಲೆಂದು ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಬಸವರಾಜ ಧನ್ನೂರ ತಿಳಿಸಿದರು.
ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ರಾಜ್ಯ ಸಂಯೋಜಕರಾದ ಬಾಬು ದಾನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಪೂಜ್ಯ ಶ್ರೀ ಡಾ. ಗಂಗಾಬಿಕೆ ಅಕ್ಕ ದಿವ್ಯ ಸಾನಿಧ್ಯ ವಹಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ಜಿಲ್ಲಾ ಭಾರತೀಯ ಜನತಾ ಪಕ್ಷದ ಕಾರ್ಯದರ್ಶಿ ಲುಂಬಿಣಿ ಗೌತಮ, ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಸಪ್ನಾ ಕನ್ವೆನ್ಷನ್ ಹಾಲ್ ಮಾಲಿಕರಾದ ಅಮೃತರಾವ ಪಾಟೀಲ್, ಹಿರಿಯ ಸಾಹಿತಿ ಹಂಸಕವಿ, ಬಸವ ಬಾಂಧವ್ಯ ಬಳಗದ ಅಧ್ಯಕ್ಷ ಬಸವರಾಜ ಬಿರಾದಾರ, ಕಾರ್ಯದರ್ಶಿ ಮಹೇಶ ಮಜಗೆ, ವಿಜಯಕುಮಾರ ವಡ್ಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಶರಣೆ ಸುವರ್ಣಾ ಶರಣ ಶರಣಪ್ಪಾ ಚಿಮಕೊಡೆ ದಂಪತಿಗಳಿಗೆ ಆದರ್ಶ ದಂಪತಿ ಪ್ರಶಸ್ತಿ ನೀಡಿ ಸತ್ಕಾರ ಮಾಡಿದ್ದರು. ಐದು ಜನ ನಾಟಿ ವೈದ್ಯರಿಗೆ ಸಿದ್ರಾಮಪ್ಪ ನಾಟಿ ವೈದ್ಯ ಪ್ರಶಸ್ತಿ ಮತ್ತು ವಿವಾಹ ಬೆಳ್ಳಿ ಮಹೋತ್ಸವ ಆಚರಿಸಿಕೊಂಡಿರುವ 14 ಜನ ದಂಪತಿಗಳಿಗೆ ವಿಶೇಷ ಸನ್ಮಾನ ಮಾಡಿ ಗೌರವಿಸಲಾಯಿತು.
ಆರಂಭದಲ್ಲಿ
ಅಕ್ಕನ ಬಳಗದವರಿಂದ ವಚನ ಗಾಯನ ನಡೆಯಿತು. ಮಲ್ಲಿಕಾರ್ಜುನ ಟಂಕಸಾಲೆ ಪ್ರಾಸ್ತಾವಿಕ ನುಡಿ ನುಡಿದರು. ಆಶಯ ನುಡಿ ಕಲ್ಯಾಣರಾವ ಚಳಕಾಪೂರೆ, ಶಂಕರರಾವ ಸಜ್ಜನಶೆಟ್ಟಿ ಸ್ವಾಗತಿಸಿದರೆ. ವೈಜಿನಾಥ ಪಾಟೀಲ್, ಆಕಾಶ ಕೋಟೆ ನಿರೂಪಿಸಿದರು. ಶ್ರೀನಿವಾಸ ಬಿರಾದಾರ ವಂದಿಸಿದರು.