ಮಾನವ ಕಳ್ಳ ಸಾಗಾಣಿಕೆ ತಡೆಗೆ ಜಾಗೃತಿ ಅಗತ್ಯ: ನ್ಯಾಯಾಧೀಶ ಅರುಟಗಿ
ಆಳಂದ:ಜು.31: ಮಾನವ ಕಳ್ಳ ಸಾಗಾಣಿಕೆ ತಡೆಗೆ ಸರ್ಕಾರದೊಂದಿಗೆ ಸಾರ್ವಜನಿಕರಲ್ಲಿ ಜಾಗೃತಿ ಮತ್ತು ಕಾನೂನಿನ ಅರಿವು ತಂದುಕೊಳ್ಳುವುದು ಮುಖ್ಯವಾಗಿದೆ ಎಂದು ಸ್ಥಳೀಯ ನ್ಯಾಯಾಲಯ ಹಿರಿಯ ಶ್ರೇಣಿಯ ನ್ಯಾಯಾಧೀಶರು ಆಗಿರುವ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಎಸ್.ಎಂ. ಅರುಟಗಿ ಅವರು ಹೇಳಿದರು.
ಪಟ್ಟಣದ ನ್ಯಾಯಾಲಯ ಆವರಣದಲ್ಲಿ ಮಂಗಳವಾರ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘದ ಆಶ್ರಯದಲ್ಲಿ ಮಾನವ ಕಳ್ಳಸಾಗಾಣಿಕೆ ವಿರೋಧ ದಿನಾಚರಣೆ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಮಾನವ ಕಳ್ಳ ಸಾಗಣಿಕೆ ವಿರುದ್ಧ ಜನರಲ್ಲಿ ಕಾನೂನು ಅರಿವು ಮೂಡಿಸಲು ಮತ್ತು ಈ ಅಪರಾಧವನ್ನು ತಡೆಯಲು ಪೂರಕವಾದ ಕಾನೂನು ವ್ಯವಸ್ಥೆಯ ಅಗತ್ಯವನ್ನು ಒತ್ತಿಹೇಳಿದರು. ಮಾನವ ಕಳ್ಳ ಸಾಗಾಣಿಕೆ ಒಂದು ಗಂಭೀರ ಅಪರಾಧವಾಗಿದೆ ಮತ್ತು ಇದನ್ನು ನಿರ್ಮೂಲಗೊಳಿಸಲು ಎಲ್ಲಾ ನಾಗರಿಕರು ಹಾಗೂ ಸರ್ಕಾರಗಳು ಜಾಗರೂಕರಾಗಿರಬೇಕು. ಕಾನೂನು ತಿಳಿವಳಿಕೆ ಹಂಚಿಕೊAಡು, ಬಲಿಪಶುಗಳಂತೆ ಬಳಸಲ್ಪಡುವ ಅಸಹಾಯಕ ವ್ಯಕ್ತಿಗಳನ್ನು ರಕ್ಷಿಸಲು, ಮತ್ತು ಕಳ್ಳ ಸಾಗಾÀಣೆಕೋರರನ್ನು ಶಿಕ್ಷಿಸಲು ಕಾನೂನು ಅಡಿಯಲ್ಲಿ ಶಿಕ್ಷೆವಿದೆ ಇಂಥ ಅಪರಾಧಗಳಿಗೆ ಕೈಹಾಕದಿರುವಂತೆ ಅವರು ಎಚ್ಚರಿಸಿದರು. “ಮಕ್ಕಳ ಮತ್ತು ಮಹಿಳೆಯರ ಸುರಕ್ಷತೆ ನಮ್ಮ ಪ್ರಮುಖ ಜವಾಬ್ದಾರಿ. ಈ ನಿಟ್ಟಿನಲ್ಲಿ, ಪೊಲೀಸ್ ಇಲಾಖೆ, ಕಾನೂನು ತಜ್ಞರು, ಮತ್ತು ಸಾರ್ವಜನಿಕರು ಸಹಕಾರ ನೀಡಬೇಕು. ಜೊತೆಗೆ, ಮಾನವ ಕಳ್ಳ ಸಾಗಣಿಕೆಯಲ್ಲಿರುವ ವ್ಯಕ್ತಿಗಳಿಗೆ ಈ ಕೃತ್ಯದಿಂದ ದೂರವಿರಿಸಲು ಪುನರ್ವಸತಿ ಮತ್ತು ನೆರವು ನೀಡಲು ಸಮುದಾಯದ ಎಲ್ಲ ಭಾಗಗಳೂ ಕೈಜೋಡಿಸಬೇಕು ಎಂದು ಹೇಳಿದರು.
ನ್ಯಾಯವಾದಿ ಸಂಘದ ಅಧ್ಯಕ್ಷ ಕಮಲಾಕರ ವಿ. ರಾಠೋಡ, ಪ್ರಧಾನ ಸಿವಿಲ್ ನ್ಯಾಯಾಧೀಶ ಹಾಗೂ ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಯಲ್ಲಪ್ಪ ಕಲ್ಲಾಪೂರ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಕುಮಾರಿ ಸುಮನ್ ಚಿತ್ತರಗಿ ಉಪಸ್ಥಿತರಿದ್ದು ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಸರ್ಕಾರಿ ವಕೀಲ ಇಸ್ಮಾಯಿಲ್ ಪಟೇಲ್, ಎಎಸ್‌ಐ ಶಬೀರ್, ಸಂಘದ ಕಾರ್ಯದರ್ಶಿ ಬಿ.ಟಿ. ಸಿಂಧೆ, ನ್ಯಾಯವಾದಿ ಎಂ.ವಿ.ಏಕಬೋಟೆ, ಹಿರಿಯ ನ್ಯಾಯವಾದಿ ಎಸ್.ಎ. ಪಾಟೀಲ, ದೇವಾನಂದ ಹೋದಲೂರಕರ್, ತೈಯಬ ಅಲಿ ಜರ್ದಿ ಸೇರಿದಂತೆ ಈ ಕಾರ್ಯಕ್ರಮದಲ್ಲಿ ಅನೇಕ ನ್ಯಾಯವಾದಿಗಳು, ಕಕ್ಷಿದಾರರು ಉಪಸ್ಥಿತರಿದ್ದರು.
ನ್ಯಾಯವಾದಿ ಬಿ.ಜಿ. ಬೀಳಗಿ ಸ್ವಾಗತಿಸಿ ನಿರೂಪಿಸಿದರು. ಎಂ.ಎಸ್. ಹತ್ತಿ ವಂದಿಸಿದರು.