ಹಗಲು ಕಳ್ಳರ ಬಂಧನ: ೭.೫ಲಕ್ಷ ಮೌಲ್ಯದ ಚಿನ್ನಾಭರಣ ವಶ.
ಸಂಜೆವಾಣಿ ವಾರ್ತೆ
ಹೊಸಪೇಟೆ ಜು೩೧:(ವಿಜಯನಗರ): ನಗರದ ಎಂ.ಜೆ.ನಗರ ವ್ಯಾಪ್ತಿಯಲ್ಲಿ ಹಗಲು ಹೊತ್ತಿನಲ್ಲೇ ಮನೆಗಳವು ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದರುವ ಬಡಾವಣೆ ಠಾಣೆ ಪೊಲೀಸರು, ₹೭.೫೦ ಲಕ್ಷ ಮೌಲ್ಯದ ೧೨೦ ಗ್ರಾಂ ಚಿನ್ನದ ಆಭರಣ ವಶಪಡಿಸಿಕೊಂಡಿದ್ದಾರೆ.
ಎಂ.ಜೆ.ನಗರದ ತ್ರಿವೇಣಿ ಎಂಬುವವರು ನೀಡಿದ ದೂರಿನ ಮೇರೆಗೆ ಕರ‍್ಯಾಚರಣೆ ನಡೆಸಿದ ಪೊಲೀಸರು ಚಪ್ಪರದಹಳ್ಳಿಯ ಕೆ.ಕರ‍್ತಿಕ್‌ ಮತ್ತು ತಳವಾರಕೇರಿಯ ಸಣ್ಣಕ್ಕೆಪ್ಪ ಎಸ್‌. ಅವರನ್ನು ಜುಲೈ ೨೫ರಂದು ಬಂಧಿಸಿದ್ದರು ಹಾಗೂ ಅವರಿಂದ ಆಗ ₹೬.೩೦ ಲಕ್ಷ ಮೌಲ್ಯದ ೮೦ ಗ್ರಾಂ ಚಿನ್ನದ ಆಭರಣ ವಶಪಡಿಸಿಕೊಂಡಿದ್ದರು. ಪೊಲೀಸ್‌ ಕಸ್ಟಡಿಗೆ ಪಡೆದುಕೊಂಡ ಬಳಿಕ ಮಣಪ್ಪುರಂ ಫೈನಾನ್ಸ್‌ನಲ್ಲಿ ಅಡವು ಇಟ್ಟಿದ್ದ ೩೦ ಗ್ರಾಂ ತೂಕದ ಬಂಗಾರದ ಆಭರಣವನ್ನೂ ವಶಕ್ಕೆ ಪಡೆಯಲಾಯಿತು ಎಂದು ಜಿಲ್ಲಾ ಪೊಲೀಸ್ ವರಿಷ್ಠ ಶ್ರೀಹರಿಬಾಬು ಬಿ.ಎಲ್‌. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದೂರು ನೀಡಿದ ಕೇವಲ ೧೫ ದಿನದೊಳಗೆ ಈ ಮನೆಗಳವು ಜಾಲ ಭೇದಿಸಲಾಗಿದೆ. ಸಿಪಿಐ ಮಹಮ್ಮದ್ ಗೌಸ್‌, ಪಿಎಸ್‌ಐ ಕೋದಂಡಪಾಣಿ, ಸಿಬ್ಬಂದಿ ಮಾಣಿಕ್ಯರೆಡ್ಡಿ, ರಾಮಮರ‍್ತಿ, ಆನಂದಗೌಡ, ಹನುಮಾನಾಯ್ಕ್‌, ದೊಡ್ಡಬಸಪ್ಪ, ಈಶ್ವರ್‌ ಕರ‍್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ಅವರು ಮಾಹಿತಿ ನೀಡಿದರು.ಹೊಸಪೇಟೆ (ವಿಜಯನಗರ): ನಗರದ ಎಂ.ಜೆ.ನಗರ ವ್ಯಾಪ್ತಿಯಲ್ಲಿ ಹಗಲು ಹೊತ್ತಿನಲ್ಲೇ ಮನೆಗಳವು ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದರುವ ಬಡಾವಣೆ ಠಾಣೆ ಪೊಲೀಸರು, ೭.೫೦ ಲಕ್ಷ ಮೌಲ್ಯದ ೧೨೦ ಗ್ರಾಂ ಚಿನ್ನದ ಆಭರಣ ವಶಪಡಿಸಿಕೊಂಡಿದ್ದಾರೆ.
ಎಂ.ಜೆ.ನಗರದ ತ್ರಿವೇಣಿ ಎಂಬುವವರು ನೀಡಿದ ದೂರಿನ ಮೇರೆಗೆ ಕರ‍್ಯಾಚರಣೆ ನಡೆಸಿದ ಪೊಲೀಸರು ಚಪ್ಪರದಹಳ್ಳಿಯ ಕೆ.ಕರ‍್ತಿಕ್‌ ಮತ್ತು ತಳವಾರಕೇರಿಯ ಸಣ್ಣಕ್ಕೆಪ್ಪ ಎಸ್‌. ಅವರನ್ನು ಜುಲೈ ೨೫ರಂದು ಬಂಧಿಸಿದ್ದರು ಹಾಗೂ ಅವರಿಂದ ಆಗ ₹೬.೩೦ ಲಕ್ಷ ಮೌಲ್ಯದ ೮೦ ಗ್ರಾಂ ಚಿನ್ನದ ಆಭರಣ ವಶಪಡಿಸಿಕೊಂಡಿದ್ದರು. ಪೊಲೀಸ್‌ ಕಸ್ಟಡಿಗೆ ಪಡೆದುಕೊಂಡ ಬಳಿಕ ಮಣಪ್ಪುರಂ ಫೈನಾನ್ಸ್‌ನಲ್ಲಿ ಅಡವು ಇಟ್ಟಿದ್ದ ೩೦ ಗ್ರಾಂ ತೂಕದ ಬಂಗಾರದ ಆಭರಣವನ್ನೂ ವಶಕ್ಕೆ ಪಡೆಯಲಾಯಿತು ಎಂದು ಜಿಲ್ಲಾ ಪೊಲೀಸ್ ವರಿಷ್ಠ ಶ್ರೀಹರಿಬಾಬು ಬಿ.ಎಲ್‌. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದೂರು ನೀಡಿದ ಕೇವಲ ೧೫ ದಿನದೊಳಗೆ ಈ ಮನೆಗಳವು ಜಾಲ ಭೇದಿಸಲಾಗಿದೆ. ಸಿಪಿಐ ಮಹಮ್ಮದ್ ಗೌಸ್‌, ಪಿಎಸ್‌ಐ ಕೋದಂಡಪಾಣಿ, ಸಿಬ್ಬಂದಿ ಮಾಣಿಕ್ಯರೆಡ್ಡಿ, ರಾಮಮರ‍್ತಿ, ಆನಂದಗೌಡ, ಹನುಮಾನಾಯ್ಕ್‌, ದೊಡ್ಡಬಸಪ್ಪ, ಈಶ್ವರ್‌ ಕರ‍್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ಅವರು ಮಾಹಿತಿ ನೀಡಿದರು.